ಸುದ್ದಿಬಿಂದು ಬ್ಯೂರೋ ವರದಿ
ಪಣಜಿ: ಇಂಡಿಗೊ ಏರ್‌ಲೈನ್ಸ್‌ ಕಾರ್ಯಾಚರಣೆ ಸಮಸ್ಯೆಯ ಪರಿಣಾಮವಾಗಿ, ಗೋವಾದ ಎರಡೂ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಹಲವು ವಿಮಾನ ಹಾರಾಟಗಳು ರದ್ದುಪಡಿಸಲಾಗಿದೆ.

ಮೋಪಾ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ದಾಬೋಲಿಂ ವಿಮಾನ ನಿಲ್ದಾಣದಲ್ಲೂ ಹಾರಾಟ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಸಂಕಷ್ಟ ಅನುಭವಿಸಿದ್ದಾರೆ. ಮೋಪಾ ವಿಮಾನ ನಿಲ್ದಾಣದಲ್ಲಿ 8 ಹಾರಾಟ ರದ್ದಾಗಿದ್ದು, ಇಂಡಿಗೊ ಸಂಸ್ಥೆಯ ಹೈದರಾಬಾದ್, ಮುಂಬಯಿ, ನಾಗಪುರ, ರಾಜಕೋಟ್ ಮತ್ತು ಬೆಂಗಳೂರು ಮಾರ್ಗದ ಒಟ್ಟು ಎಂಟು ವಿಮಾನ ಹಾರಾಟಗಳು ನಿಲ್ಲಿಸಲಾಗಿದೆ. ಇದರಿಂದಾಗಿ ಹಲವು ನಗರಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಗಂಟೆಗಳ ಕಾಲ ಸಿಲುಕುವ ಪರಿಸ್ಥಿತಿ ನಿರ್ಮಾಣವಾಯಿತು.

ರದ್ದಾದ ಹಾರಾಟಗಳ ಪಟ್ಟಿ:
6E 6124 (ಹೈದರಾಬಾದ್), 6E 2133 (ಮುಂಬಯಿ), 6E 122 (ನಾಗಪುರ), 6E 154 (ರಾಜಕೋಟ್), 6E 945 (ಹೈದರಾಬಾದ್), 6E 901 (ಬೆಂಗಳೂರು), 6E 6308 (ಬೆಂಗಳೂರು), 6E 596 (ಮುಂಬಯಿ)

ದಾಬೋಲಿಂ ವಿಮಾನ ನಿಲ್ದಾಣದಲ್ಲೂ ಹಾರಾಟ ರದ್ದು
ದಾಬೋಲಿಂ ನಿಲ್ದಾಣದಿಂದ ಪುಣೆ, ಅಹಮದಾಬಾದ್, ಮುಂಬಯಿ, ಹೈದರಾಬಾದ್, ಬೆಂಗಳೂರು ಮತ್ತು ದೆಹಲಿ ಮಾರ್ಗಗಳೂ ಸೇರಿದಂತೆ ಒಟ್ಟು 9ಕ್ಕೂ ಹೆಚ್ಚು ಹಾರಾಟಗಳು ರದ್ದುಪಡಿಸಲ್ಪಟ್ಟಿವೆ.

ರದ್ದುಪಡಿಸಲಾದ ವಿಮಾನಗಳು
ಪುಣೆ–ಗೋವಾ, ಗೋವಾ–ಹೈದರಾಬಾದ್, ಮುಂಬಯಿ–ಗೋವಾ, ಗೋವಾ–ಮುಂಬಯಿ, ಬೆಂಗಳೂರು–ಗೋವಾ, ಗೋವಾ–ಬೆಂಗಳೂರು, ದೆಹಲಿ–ಗೋವಾ, ಗೋವಾ–ದೆಹಲಿ

ವಿಮಾನ ಹಾರಾಟಗಳ ನಿರಂತರ ರದ್ದತಿಯ ಪರಿಣಾಮವಾಗಿ ವಿಮಾನ ನಿಲ್ದಾಣಗಳಲ್ಲಿ ದಟ್ಟಣೆ ಹೆಚ್ಚಿದ್ದು, ಪ್ರವಾಸಿಗರು ಹಾಗೂ ಪ್ರಯಾಣಿಸುವವರು ಪರದಾಡುವಂತಾಗಿದೆ

ಇದನ್ನೂ ಓದಿ/ಸಿಎಂ ಬದಲಾವಣೆ ಇಲ್ಲ : ಡಿಕೆಶಿ ಸಿಎಂ ಆಗೇ ಆಗ್ತಾರೆ ಮತ್ತೆ ಮುನ್ನೆಲೆಗೆ ಬಂದ ಸಿಎಂ ಬದಲಾವಣೆ ವಿಚಾರ