ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ರಾಜ್ಯದಲ್ಲಿ ಸಿಎಂ ಬದಲಾವಣೆ ಕಚ್ಚಾಟ ನಡೆಯುತ್ತಿದ್ದು, ಈ ನಡುವೆ ಐದು ವರ್ಷ ನಾನೆ ಸಿಎಂ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಇದೀಗ ತಮ್ಮ ಮಾತಿನ ವರಸೆ ಬದಲಿಸಿದ್ದಾರೆ, ನಾಳೆ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಡಿಸಿಎಂ ಜೊತೆ ಬ್ರೇಕ್ ಫಾಸ್ಟ್ ಮಿಟಿಂಗ್ ನಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ಖುದ್ದು ಸಿದ್ದರಾಮಯ್ಯ ಅವರೆ ಇದೀಗ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇಬ್ಬರೂ ನಾಯಕರಿಗೆ ಕೆಲ ಗಂಟೆಗಳ ಹಿಂದಷ್ಟೆ ಕಾಂಗ್ರೇಸ್ ಹೈಕಮಾಂಡನಿಂದ ಕರೆ ಬಂದಿದೆ ಎನ್ನಲಾಗಿದ್ದು, ಇದನ್ನ ಸಿಎಂ ಕೂಡ ಖಚಿತ ಪಡಿಸಿದ್ದಾರೆ. ನಾಳೆ ಬೆಳಿಗ್ಗೆ ಡಿಸಿಎಂ ಶಿವಕುಮಾರ ಅವರನ್ನ ತಮ್ಮ ನಿವಾಸಕ್ಕೆ ಬ್ರೇಕ್ ಫಾಸ್ಟ್ಗಾಗಿ ಆಹ್ವಾನಿಸಿದ್ದೇನೆ. ಅಲ್ಲಿ ನಾವಿಬ್ಬರೂ ಕುಳಿತು ಆ ಬಗ್ಗೆ ಚರ್ಚೆ ಮಾಡಲಿದ್ದೇವೆ. ಹೈಕಮಾಂಡ ಯಾವ ತೀರ್ಮಾನ ತೆಗೆದುಕೊಳ್ಳಲಿದೆಯೋ ಆ ತೀರ್ಮಾನಕ್ಕೆ ನಾವಿಬ್ಬರೂ ಬದ್ದ ಎಂದು ಹೇಳುವ ಮೂಲಕ ಸಿಎಂ ಖುರ್ಚಿ ಕಚ್ಚಾಟಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ.
ಸಿಎಂ ಬದಲಾವಣೆ ಬಗ್ಗೆ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಪ್ರತಿಭಾರೀ ಕೂಡ ಐದು ವರ್ಷ ನಾನೆ ಸಿಎಂ ಆಗಿ ಇರತ್ತೆ. ಮುಂದಿನ ಬಜೆಟ್ ಸಹ ನಾನೆ ಮಂಡಿಸುತ್ತೇನೆ ಎಂದು ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು ಇದೀಗ ತಮ್ಮ ವರಸೆ ಬದಲಿಸಿದ್ದಾರೆ. ಅವರ ಇಂದಿನ ಈ ಹೇಳಿಕೆಯನ್ನ ಗಮನಿಸಿದರೆ. ಸಿಎಂ ಸ್ಥಾನ ಡಿಕೆ ಶಿವಕುಮಾರ ಅವರಿಗೆ ಬಿಟ್ಟುಕೊಡುವಂತೆ ಹೈಕಮಾಂಡ ಸಿದ್ದರಾಮಯ್ಯ ಅವರಿಗೆ ಸೂಚನೆ ಕೊಟ್ಟಿರುವಂತೆ ಕಾಣತ್ತಾ ಇದೆ.
ಇಬ್ಬರೂ ಕುಳಿತು ಚರ್ಚೆ ಮಾಡುವಂತೆ ನಮ್ಮಿಬ್ಬರಿಗೂ ಹೈಕಮಾಂಡ ಸೂಚನೆ ನೀಡಿದೆ. ಈ ಕಾರಣಕ್ಕೆ ನಾಳೆ ನಾವಿಬ್ಬರೂ ಚರ್ಚೆ ಮಾಡಲಿದ್ದೇವೆ. ಇದಾದ ಬಳಿಕ ಹೈಕಮಾಂಡ ಏನಾದ್ರೂ ದೆಹಲಿಗೆ ಬುಲಾವ ಮಾಡಿದ್ದರೆ ಹೋಗತ್ತೆವೆ ಎಂದಿದ್ದಾರೆ.
Chief Minister’s Decision Over Breakfast..?
Tomorrow’s Siddaramaiah–DK Shivakumar Talks Stir Curiosity
Bengaluru: As the political tussle over the change of Chief Minister intensifies in the state, Chief Minister Siddaramaiah — who had been asserting that he would remain CM for the full five-year term — has now changed his stance. He himself informed the media today that he will discuss the matter with Deputy Chief Minister DK Shivakumar during a breakfast meeting at his residence tomorrow morning. This has created a wave of curiosity in political circles.
It is said that both leaders received a call from the Congress high command just a few hours ago, and the CM too has confirmed this. “I have invited Deputy Chief Minister Shivakumar to my residence for breakfast tomorrow. We will sit together and discuss the matter. Whatever decision the high command takes, both of us are bound by it,” he said, hinting that the tug-of-war over the CM’s chair might soon come to an end.
For the past several days, discussions over leadership change have been intense in the state. Although Siddaramaiah had been repeatedly claiming that he would continue as CM for five years and present the next budget as well, he has now altered his tone. Going by his statement today, it appears that the high command may have instructed him to hand over the CM post to DK Shivakumar.
“The high command has directed both of us to sit together and discuss. That is why we will have the conversation tomorrow. After that, if the high command summons us to Delhi, we will go,” Siddaramaiah said.


