ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ನಗರದ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಪಕ್ಕದ ಆವರಣದಲ್ಲಿ ನಿಂತಿದ್ದ ಗೋವನ್ನ ಕಳ್ಳರು ಕಳೆದ ಎರಡು ದಿನಗಳ ಹಿಂದೆ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶನಿವಾರ ಸುಮಾರು ಬೆಳಿಗ್ಗೆ 3.15ರ ವೇಳೆಗೆ ಕಳ್ಳತನ ಮಾಡಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಗೋಕಳ್ಳರು ಯಾರ ಭಯವಿಲ್ಲದೆ ರಾಜಾರೋಷವಾಗಿ ಗೋವನ್ನು ಕೊಂಡೊಯ್ಯುತ್ತಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.ನಗರದ ಪ್ರಮುಖ ದೇವಸ್ಥಾನ ಪ್ರದೇಶದಲ್ಲಿ ಗೋವು ಕಳ್ಳತನ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಗೋವು ಕಳ್ಳತನ ಪ್ರಕರಣಗಳು ಪದೆ ಪದೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕಾನೂನು ಜಾರಿಯಾಗಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ಹಿಂದೂ ಮುಖಂಡರು ಹಾಗೂ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಅವರು ಗೋವು ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Cow Stolen Near Bhatkal Hanumantha Temple, Incident Captured on CCTV
Bhatkal: CCTV footage has captured the theft of a cow that was tied near the premises of Sri Chennapattana Hanumantha Temple in the town.
The theft took place around 3:15 am on Saturday, and the act was clearly recorded on CCTV cameras. The visuals show the thieves confidently and fearlessly taking away the cow without any hesitation. A cow being stolen in such a prominent temple area has created a sense of fear and concern among the public.
With cow theft incidents occurring repeatedly, locals are demanding strict enforcement of law to curb such crimes. Responding to the issue, Hindu leader and BJP District Secretary Shrikanta Naik urged the police to take stringent measures to prevent cow theft cases.




