ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ತಾಲೂಕಾ ಆಸ್ಪತ್ರೆಯ A M O ಅವರ ತಂದೆಯವರಾಗಿರುವ ಶಿಕ್ಷಣ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ತುಕಾರಾಮ ಗಣಪಯ್ಯ ನಾಯಕ ಅವರು ವಯೋಸಹಜ ಕಾಯಿಲೆಯಿಂದ ಇಂದು ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಅನೇಕ ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು ಚಿಕಿತ್ಸೆಗಾಗಿ ಅವರನ್ನ ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ರಾತ್ರಿ ಕೊನೆಯುಸಿರೆಳೆದಿದ್ದಾರೆ..
ಮೃತರು ಕುಮಟಾ ತಾಲೂಕಾ ಆಸ್ಪತ್ರೆಯ A M O ಆಗಿರುವ ಗಣೇಶ ನಾಯ್ಕ ಅವರ ತಂದೆಯವರಾಗಿದ್ದರು. ಮೃತರು ದಾವಣಗೆರೆ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಶಿಕ್ಷಣ ಇಲಾಖೆಯಲ್ಲಿ ಸೇವೆಸಲ್ಲಿಸಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಕೂಡ ಸೇವೆಲ್ಲಿಸಿ ನಿವೃತ್ತಿ ಹೊಂದಿದ್ದರು.ನಿವೃತ್ತಿ ಬಳಿಕ ಅವರು ಹುಟ್ಟುರಾದ ಕಡ್ಲೆ ಗ್ರಾಮದಲ್ಲಿ ಪುತ್ರ ಗಣೇಶ ಅವರ ಜೊತೆಯಲ್ಲಿ ನೆಲೆಸಿದ್ದರು.ತಂದೆಯ ಬಗ್ಗೆ ಗಣೇಶ ನಾಯ್ಕ ಅವರು ಅಪಾರ ಕಾಳಜಿ ಹೊಂದಿದ್ದರು.
ಮೃತರು ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತದೇಹವನ್ನು ಬೆಂಗಳೂರಿನಿಂದ ಕುಮಟಾ ತಾಲೂಕಿನ ಕಡ್ಲೆ ಗ್ರಾಮದ ನಿವಾಸಕ್ಕೆ ತರುತ್ತಿದ್ದು, ನಾಳೆ (ರವಿವಾರ) ಗ್ರಾಮದಲ್ಲೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Retired Education Department Deputy Director Tukaram Naik Passes Away
Kumta: Tukaram Ganapayya Naik, retired Deputy Director in the Education Department and father of the Kumta Taluk Hospital A.M.O, passed away today at Ramaiah Hospital in Bengaluru due to age-related ailments.
For the past several days, he had been suffering from age-related health issues and was admitted to Ramaiah Hospital for treatment. However, despite medical efforts, he breathed his last on Friday night.
The deceased was the father of Ganesh Naik, who serves as the A.M.O at Kumta Taluk Hospital. Tukaram Naik had served the Education Department in various parts of the state, including Davanagere and Bengaluru, and retired after holding the post of Deputy Director. After retirement, he had settled in his native village, Kadle, alongside his son Ganesh, who took exceptional care of him.
He is survived by one son, one daughter, and a large circle of relatives and well-wishers. The mortal remains will be brought from Bengaluru to the family residence in Kadle village of Kumta taluk, and the final rites will be performed in the village on Sunday, according to family sources


