ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ: ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಯಲ್ಲಾಪುರ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಸತತ ಮೂರನೇ ಬಾರಿಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ನಡೆದ ಕೆಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ಸಭೆಯಲ್ಲಿ ಹೆಬ್ಬಾರ್ ಅವರ ಹೆಸರನ್ನು ಸರ್ವಾನುಮತದಿಂದ ಅನುಮೋದಿಸಲಾಯಿತು. ಸಹಕಾರಿ ಕ್ಷೇತ್ರಕ್ಕೆ ಅವರು ನೀಡಿರುವ ದೀರ್ಘಕಾಲದ ಸೇವೆ,ಪರಿಣಾಮಕಾರಿಯಾದ ನಿರ್ವಹಣೆ ಮತ್ತು ಜನನಿಷ್ಠ ಕಾರ್ಯಶೈಲಿಗೆ ಮತ್ತೊಂದು ಮಾನ್ಯತೆ ಲಭಿಸಿದ್ದು ಸಹಕಾರಿಯ ವಲಯದಲ್ಲಿ ಹರ್ಷ ವ್ಯಕ್ತವಾಗಿದೆ.
ಬ್ಯಾಂಕ್‌ನ ನಿರ್ದೇಶಕರು, ಜಿಲ್ಲಾ ಮಟ್ಟದ ಸಹಕಾರಿ ನಾಯಕರು,ವಿವಿಧ ಪ್ರಾಥಮಿಕ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಹಕಾರ ವಲಯದ ಅನೇಕ ಧುರೀಣರು ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.ಸಹಕಾರ ಕ್ಷೇತ್ರದ ಪ್ರಗತಿಗಾಗಿ ಅವರು ಕೈಗೊಂಡಿರುವ ಪಾರದರ್ಶಕ ನಿರ್ವಹಣೆ, ರೈತ ಹಾಗೂ ಸಣ್ಣ ಉದ್ಯಮಿಗಳಿಗೆ ನೀಡಿರುವ ಬಲವಾದ ಬೆಂಬಲ, ಬ್ಯಾಂಕ್‌ನ ಆರ್ಥಿಕ ಸ್ಥಿರತೆ ಹೆಚ್ಚಿಸಲು ತೆಗೆದುಕೊಂಡ ಕ್ರಮಗಳು ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಅವರ ಮರು ಆಯ್ಕೆಗಾಗಿರುವ ಪ್ರಮುಖ ಕಾರಣಗಳೆಂದು ಪ್ರತಿನಿಧಿಗಳು ಪ್ರಶಂಸಿಸಿದರು.
Yellapur: Shivaram Hebbar, President of the KDC Bank and MLA of the Yellapur constituency, has been unanimously elected for the third consecutive time as a Director of the Karnataka State Cooperative Apex Bank.
At the meeting of the KDC Bank’s Board of Directors held today, Hebbar’s name was approved unanimously. His long-standing service to the cooperative sector, effective administration, and people-centric approach have earned him yet another recognition, bringing joy within the cooperative community.
Directors of the bank, district-level cooperative leaders, representatives of various primary cooperative societies, and several dignitaries from the cooperative sector congratulated MLA Shivaram Hebbar. They praised his transparent administration, strong support for farmers and small entrepreneurs, and the measures he took to strengthen the bank’s financial stability, which have been key reasons for his re-election as Director of the Apex Bank.
ಇದನ್ನೂ ಓದಿ/ ಸಂಚಾರ ನಿಯಮ ಜಾರಿಗೆ ಕಠಿಣ ಕ್ರಮ: ಹೆಲ್ಮೆಟ್–ಸೀಟ್‌ಬೆಲ್ಟ್ ಕಡ್ಡಾಯ


