ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಮಣಕಿ ಮೈದಾನದಲ್ಲಿ ನಡೆಯಬೇಕಿದ್ದ “ಕುಮಟಾ ವೈಭವ” ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ರದ್ದುಗೊಳಿಸಲಾಗಿದೆ. ಆದರೆ ಇದೇ ಮೈದಾನದಲ್ಲಿ ಈಗ ಪಟಾಕಿ ಮಳಿಗೆ ನಡೆಸಲಾಗುತ್ತಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ.
ಈ ವಿಚಾರವಾಗಿ ಕಾರ್ಮಿಕರ ಜಿಲ್ಲಾ ಅಧ್ಯಕ್ಷ ಮಂಜು ಜೈನ್ ಆಕ್ರೋಶ ವ್ಯಕ್ತಪಡಿಸಿದ್ದು – “ಒಂದೇ ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ಹೇಳಿ ಬಂದ್ ಮಾಡಲಾಗಿದೆ ಆದರೆ ಇದೆ ಮೈದಾನದಲ್ಲಿ ಪಟಾಕಿ ವ್ಯಾಪಾರ ಮಳಿಗೆಗೆ ಪರವಾನಿಗೆ ಕೊಡುತ್ತಾರೆ ಎಂದರೆ ಇದರ ಅರ್ಥ ಏನು.
ಜಿಲ್ಲಾಧಿಕಾರಿಗಳು ಮಣಕಿ ಮೈದಾನ ಕ್ರೀಡೆಗಾಗಿ ಮಾತ್ರ ಬಳಸಬೇಕು ಎಂದು ಸೂಚಿಸಿದ್ದಾರೆ. ಆದರೆ ಈಗ ವ್ಯಾಪಾರ ಮಳಿಗೆಗೆ ಅನುಮತಿ ನೀಡಿರುವುದು ತಪ್ಪು. ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚು ಕೆಲಸ ಮಾಡಲಾಗತ್ತಾ ಇದೆ..ಸ್ಥಳೀಯ ಅಧಿಕಾರಿಗಳು ಕೂಡ ತಕ್ಷಣ ಕ್ರಮ ಕೈಗೊಂಡು ಈ ಮಳಿಗೆಯನ್ನು ಬಂದ್ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
ಇದು ಕುಮಟಾ ವೈಭವ ಕಾರ್ಯಕ್ರಮ ಮಾತ್ರ ರದ್ದು ಪಡಿಸುವುದಲ್ಲ. ಇನ್ನ ಮುಂದೆ ಕ್ರೀಡಾ ಚುಟುವಟಿಕೆ ಹೊರತು ಪಡಿಸಿ ಬೇರೆ ಯಾವುದು ಕೂಡ ಅವಕಾಶ ನೀಡಬಾರದು.ಮುಂದೆ ಕೂಡ ಇದೆ ಆದೇಶ ಪಾಲನೆ ಆಗಬೇಕು. ಹಾಗೇನಾದ್ರೂ ಆದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಈ ಮೂಲಕ ಮಂಜು ಜೈನ್ ಎಚ್ಚರಿಸಿದ್ದಾರೆ.
ಆದೇಶ ಎಲ್ಲರಿಗೂ ಅನ್ವಯ ಆಗಬೇಕು
ಈಗಾಗಲೇ ಮಣಕಿ ಮೈದಾನದಲ್ಲಿ ಸಾಂಸ್ಕೃತಿ ಕಾರ್ಯಕಮ ಮಾಡಬಾರದು ಎಂದು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಆದರೆ ಅವರ ಆದೇಶ ಎಲ್ಲರಿಗೂ ಅನ್ವಯವಾಗಬೇಕು, ಕುಮಟಾ ವೈಭವ ಮಾಡೋದಕ್ಕೆ ಮೊದಲು ನಮ್ಮ ಚೀಫ್ ಆಫೀಸರ್ ಅನುಮತಿ ಕೊಟ್ಟಿರೋದು ನಿಜ.ಆದರೆ ಕೊನೆಕ್ಷಣದಲ್ಲಿ ಯಾಕೆ ರದ್ದು ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿರೋದು ನಿಜ. ಆದರೆ ಇನ್ನೂ ಕೋರ್ಟ್‌ನಿಂದ ಅಂತಿಮ ಆದೇಶ ಬಂದಿಲ್ಲ. ಜಿಲ್ಲಾಧಿಕಾರಿಗಳ ಆದೇಶಕ್ಕೆ ಪುರಸಭೆ ಮುಖ್ಯಾಧಿಕಾರಿಗಳು ಈ ತೀರ್ಮಾನ ಕೈಗೊಂಡಿರಬಹುದು..
ಸುಮತಿ ಭಟ್, ಕುಮಟಾ ಪುರಸಭೆ ಅಧ್ಯಕ್ಷರು.
Kumta: The “Kumta Vaibhava” event that was scheduled to take place at the Manaki Ground has been cancelled as per the order of the District Commissioner. However, a fireworks market is now being held at the same venue, sparking widespread discussions and controversy.
District Labour President Manju Jain has expressed outrage over the matter, stating:
“They said public events cannot be held in the same ground and cancelled Kumta Vaibhava, but how can they then grant permission for a fireworks market there? What does this even mean?
The District Commissioner had earlier instructed that the Manaki Ground should be used only for sports activities. Allowing commercial stalls now is completely wrong. It seems like one rule for some, and another for others. Local authorities must take immediate action and shut down this market,” he demanded.
He further warned, “This is not just about cancelling Kumta Vaibhava. From now on, no activity other than sports should be permitted on that ground. The same order must be strictly followed in the future — or else we will launch a strong protest.”
The order should apply to everyone
Municipal Council President Sumathi Bhat of Kumta clarified:
ಇದನ್ನೂ ಓದಿ/ನವೆಂಬರ್ 26ಕ್ಕೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ..? ಡಾ.ಯತೀಂದ್ರಗೆ ಡಿಸಿಎಂ ಸ್ಥಾನ.!




