ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ: ಸಮುದ್ರದ ಅಲೆಯ ರಭಸಕ್ಕೆ ದಡಕ್ಕೆ ಬಂದು ಅಪ್ಪಳಿಸಿದ್ದ ಡಾಲ್ಫಿನ್ ಒಂದನ್ನ ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮುದ್ರ ಕಡಲತೀರದಲ್ಲಿ ನಡೆದಿದೆ.

ಗೋಕರ್ಣದ ಸೂರ್ಯ ರೆಸಾರ್ಟ್ ಸಮೀಪದ ಕಡಲ ದಡಕ್ಕೆ ಸುಮಾರು ಐದು ರಿಂದ ಆರು ಅಡಿ ಉದ್ದದ   ಡಾಲ್ಫಿನ್  ಅಸ್ವಸ್ಥಗೊಂಡು ಬಂದು ಚಡಪಡಿಸುತ್ತಿತ್ತು. ಅಲೆಗಳ ಒತ್ತಡ ಮತ್ತು ಹವಾಮಾನ ವೈಪರೀತ್ಯದ ಕಾರಣದಿಂದ ಡಾಲ್ಫಿನ್ ಉಸಿರಾಟಕ್ಕೂ ಕಷ್ಟ ಪಡುತ್ತಿತ್ತು.

ಈ ವೇಳೆ ರೆಸಾರ್ಟ್‌ನ ಮಾಲಕ ಯಶ್ವಂತ ಮಹಾಬಲೇಶ್ವರ ಗೌಡ ಮತ್ತು ಯುವಕ ಮಾದು ಗೌಡ ಅವರು ಮಾನವೀಯತೆ ಮೆರೆದಿದ್ದು, ಸ್ಥಳದಲ್ಲಿದ್ದವರ ಸಹಾಯದಿಂದ  ಡಾಲ್ಫಿನ್‌ನ್ನು ವಾಪಸ್ ಸಮುದ್ರದ ಆಳಕ್ಕೆ ತಂದು ಸುರಕ್ಷಿತವಾಗಿ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ..

ಇದನ್ನೂ ಓದಿ; ರಚಿತಾ ರಾಮ್ ಈಗ ಆಟೋ ಚಾಲಕರ ಸಂಘದ ರಾಯಭಾರಿ !