ಸುದ್ದಿಬಿಂದು ಬ್ಯೂರೋ ವರದಿ/ಕಾರವಾರ: ಕಳೆದ ಒಂದು ವರ್ಷದಿಂದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಪಕ್ಷವನ್ನು ಸಂಘಟಿಸಿ ಗಟ್ಟಿಗೊಳಿಸುತ್ತಿರುವ ಜೊತೆಗೆ ಬಡವರ ಪಾಲಿನ ಆಶಾಕಿರಣರಾಗಿದ್ದಾರೆ. ಕಾರವಾರ–ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ “ಗೆದ್ದರೆ ಅಧಿಕಾರ, ಸೋತರೆ ಕ್ಷೇತ್ರದಿಂದ ದೂರ” ಎನ್ನುವ ಪದ್ಧತಿಯನ್ನು ಮೊಟಕುಗೊಳಿಸಿ, ರೂಪಾಲಿ ನಾಯ್ಕ ಸೋತರೂ ಜನರೊಂದಿಗೇ ಇದ್ದು, ಪಕ್ಷವನ್ನು ಬಲಪಡಿಸುತ್ತಾ ಕಾರ್ಯಕರ್ತರ ಚಟುವಟಿಕೆಗಳನ್ನು ಶಕ್ರಿಯವಾಗಿರಿಸಲು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಯಾವುದೇ ಚುನಾವಣೆ ಎದುರಿಸಬೇಕಾದರೂ ಅದನ್ನು ಸುಲಭವಾಗಿ ನಿಭಾಯಿಸಲು ಜನರಲ್ಲಿ ವಿಶ್ವಾಸ ತುಂಬುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.ಈಗ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗಾಗಿ ರೂಪಾಲಿ ನಾಯ್ಕ ಕ್ಷೇತ್ರದಾದ್ಯಂತ ಸುತ್ತಾಡಿ, ಮತದಾರರ ನೋಂದಣಿ, ಸಭೆಗಳು ಹಾಗೂ ಬೂತ್‌ಕಮಿಟಿ ಸಭೆ ಮುಂತಾದ ಪಕ್ಷ ಸಂಘಟನಾ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
ಇತ್ತೀಚೆಗೆ ಕಾರವಾರ ಬಿಜೆಪಿ ನಗರ ಮಂಡಲದ ವತಿಯಿಂದ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರೂಪಾಲಿ ಎಸ್. ನಾಯ್ಕ ಅವರ ಉಪಸ್ಥಿತಿಯಲ್ಲಿ ಶ್ರೀ ಶಿವನಾಥ ಶಕ್ತಿಕೇಂದ್ರ ಮತ್ತು ಗುರು ಪದ್ಮನಾಭ ಶಕ್ತಿಕೇಂದ್ರಗಳಲ್ಲಿ, ಶ್ರೀ ಶಿವನಾಥ ರವಳನಾಥ ಹಾಗೂ ವೆಂಕಟೇಶ್ವರ ಮಂದಿರದ ಆವರಣದಲ್ಲಿ, ಹಾಗೂ ಶ್ರೀ ಮಹಾದೇವ ಶಕ್ತಿಕೇಂದ್ರ ದೀವಳಿವಾಡದ ದುರ್ಗಾದೇವಿ ಮಂದಿರದ ಆವರಣದಲ್ಲಿ ಸಭೆಗಳು ನಡೆಯಿತು.
ಬೂತ್‌ಗಳಲ್ಲಿ ಬಿಜೆಪಿ BLA-2 ನೇಮಕಾತಿ ಪ್ರಕ್ರಿಯೆ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾರರ ನೋಂದಣಿ ಕುರಿತು ಸಭೆ ಮತ್ತು ಬೂತ್‌ಕಮಿಟಿ ಸಭೆಗಳನ್ನು ನಡೆಸಲಾಯಿತು.
ಕಾರವಾರ ಬಿಜೆಪಿ ನಗರ ಮಂಡಲದ ವತಿಯಿಂದ ಜೈಕಾಳಿ ಶಕ್ತಿಕೇಂದ್ರ, ವೀರ ಶಿವಾಜಿ ಶಕ್ತಿಕೇಂದ್ರ ಹಾಗೂ ರಾಣಿ ಲಕ್ಷ್ಮೀಬಾಯಿ ಶಕ್ತಿಕೇಂದ್ರಗಳಲ್ಲಿ ಆಯೋಜಿಸಿದ BLA-2 ನೇಮಕಾತಿ ಪ್ರಕ್ರಿಯೆ, ಮತದಾರರ ನೋಂದಣಿ ಕುರಿತು ಸಭೆ ಹಾಗೂ ಬೂತ್‌ಕಮಿಟಿ ಸಭೆಗಳಲ್ಲಿ ಪಾಲ್ಗೊಂಡು ಚರ್ಚಿಸಲಾಯಿತು.
ಇಂದು ಕಾರವಾರ ಬಿಜೆಪಿ ಗ್ರಾಮೀಣ ಮಂಡಲದ ವತಿಯಿಂದ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರೂಪಾಲಿ ನಾಯ್ಕ ಅವರ ಉಪಸ್ಥಿತಿಯಲ್ಲಿ ಬೂತ್‌ಗಳಲ್ಲಿ ಬಿಜೆಪಿ BLA-2 ಸಭೆಯನ್ನು ಕಾರವಾರ ಗ್ರಾಮೀಣ ಗಾಡ್‌ಸಾಯಿ ಹಾಗೂ ಗೊಟೆಗಾಳಿ ಶಕ್ತಿಕೇಂದ್ರಗಳಲ್ಲಿ ನಡೆಸಲಾಯಿತು. ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಕ್ಷೇತ್ರದಾದ್ಯಂತ BLA-2 ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯನ್ನು ಎದುರಿಸಲು ತಯಾರಿಯ ಸಭೆ ನಡೆಯಿತು.
ಸಭೆಯಲ್ಲಿ ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ, ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಸೂರಜ್ ದೇಸಾಯಿ, ಗಾಡ್‌ಸಾಯಿ ಪಂಚಾಯಿತಿ ಅಧ್ಯಕ್ಷೆ ಸುಧಾ ನಾಯ್ಕ, ಉಪಾಧ್ಯಕ್ಷ ಚೇತನ್ ಬಾಂದೇಕರ್, ಮಾಜಿ ಅಧ್ಯಕ್ಷ ಗಿರೀಶ್ ಕೊಟಾರ್ಕರ್, ಚಂದಾ ನಾಯ್ಕ, ಪಂಚಾಯಿತಿ ಸದಸ್ಯರು ಶರದ ನಾಯ್ಕ, ಮಂಗೇಶ್ ಗೋವೇಕರ್, ಗೊಟೆಗಾಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಶಾಂತ ಗಾಂವಕರ, ಸುಧಾಕರ ವೆಳಿಪ್, ಅನಿಲ್ ಹಾಗೂ ಬೂತ್‌ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 
							
 
			 
			 
			 
			
