ಸುದ್ದಿಬಿಂದು ಬ್ಯೂರೋ ವರದಿ
ಅಹಮದಬಾದ್ : ಸಮಯಕ್ಕೆ ಸರಿಯಾಗಿ ಬ್ಲೌಸ್ ಹೋಲಿಗೆ ಮಾಡಿ ಕೊಟ್ಟಿಲ್ಲ ಎಂದು ಮಹಿಳೆ ಓರ್ವರು ಗ್ರಾಹಕರ ನ್ಯಾಯಾಲಯದಲ್ಲಿ ದೂರು ನೀಡಿದ್ದು, ದೂರು ಆಲಿಸಿದ ನ್ಯಾಯಾಲಯ ಇದೀಗ ಆ ಟೈಲರ್‌ಗೆ 7ಸಾವಿರ ದಂಡ ಹಾಗೂ ಬ್ಲೌಸ್ ಹೊಲಿಯಲು ಮುಂಗಡವಾಗಿ ಪಡೆದಿದ್ದ 4395 ರೂಪಾಯಿ ಮರುಪಾವತಿ ಮಾಡುವಂತೆ ಆದೇಶಿಸಿದೆ.
ಮದುವೆಗಾಗಿ ಮಹಿಳೆ ಓರ್ವರು ಬ್ಲೌಸ್ ಹೊಲಿಯಲು ಟೈಲರ್‌ಗೆ ಕೊಟ್ಟಿದ್ದರು. ಹೊಲಿಗೆಗೆ ಕೊಡುವಾಗ ಮಹಿಳೆ ಸರಿಯಾದ ಸಮಯಕ್ಕೆ ಕೊಡುವಂತೆ ಹೇಳಿದ್ದು, ಅದಕ್ಕೆ ಟೈಲರ್ ಮಹಿಳೆಗೆ ಭರವಸೆ ನೀಡಿದ್ದಲ್ಲದೆ ಮುಂಗಡವಾಗಿ 4395ರೂಪಾಯಿ ಹಣವನ್ನ ಕೂಡ ಪಡೆದಿದ್ದರು. ಟೈಲರ್ ಹೇಳಿದ ಸಮಯಕ್ಕೆ ಹೊಲಿಯಲು ಕೊಟ್ಟಿದ್ದ ಬ್ಲೌಸ್ ತರಲು ಟೈಲರ್ ಬಳಿ ಮಹಿಳೆ ಹೋಗಿದ್ದಾಳೆ ಆಗ ಬ್ಲೌಸ್ ಅಳತೆ ತಪ್ಪಾಗಿ ಹೊಲಿಯಲಾಗಿತ್ತು.
ಸುದ್ದಿಬಿಂದು ವಾಟ್ಸಾಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದರಿಂದ ಮಹಿಳೆ ಇನ್ನೊಂದು ದಿನಾಂಕ ನೀಡಿ ಆ ದಿನದೊಳಗೆ ಬ್ಲೌಸ್ ಸರಿಪಡಿಸಿಕೊಡುವಂತೆ ಹೇಳಿ ಬಂದಿದ್ದರು. ಇನ್ನೂ ಸ್ವಲ್ಪ ದಿನ ಬಿಟ್ಟು ಹೋಗಿ ಕೇಳಿದಾಗ ಕೂಡ ಸರಿಪಡಿಸದೆ ಟೈಲರ್ ಬ್ಲೌಸ್ ನೀಡಲು ವಿಳಂಬ ಮಾಡಿದ್ದ ಎನ್ನಲಾಗಿದೆ. ಈ ಬಗ್ಗೆ ಅಸಮಾಧಾನಗೊಂಡ ಮಹಿಳೆ ಟೈಲರ್‌ಗೆ ಕಾನೂನು ನೋಟಿಸ್ ನೀಡಿ ನಂತರ ಗ್ರಾಹಕ ವಿವಾದ ಪರಿಹಾರ ಆಯೋಗವನ್ನು ಸಂಪರ್ಕಿಸಿದ್ದಳು. ವಿಚಾರಣೆ ವೇಳೆ ಟೈಲರ್ ಹಾಜರಾಗದ ಹಿನ್ನೆಲೆಯಲ್ಲಿ ಆಯೋಗವು ಟೈಲರ್ ನಿರ್ಲಕ್ಷ್ಯವಿದೆ ಎಂದು ತೀರ್ಮಾನಿಸಿ, ಟೈಲರ್ ವಿರುದ್ಧ ದಂಡ ವಿಧಿಸಿದೆ.
ನ್ಯಾಯಾಲಯವು ಮಹಿಳೆಗೆ 4,395 ರೂಪಾಯಿ ಹಾಗೂ ಬಡ್ಡಿ ಸಹಿತ ಮರುಪಾವತಿಸಲು ಮತ್ತು ಮಾನಸಿಕ ಯಾತನೆ ಹಾಗೂ ಪ್ರಕರಣದ ವೆಚ್ಚಕ್ಕಾಗಿ ಹೆಚ್ಚುವರಿ ಪರಿಹಾರ ನೀಡಲು ಆದೇಶಿಸಿದೆ.ಈ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ..


