ಸುದ್ದಿಬಿಂದು ಬ್ಯೂರೋ‌ ವರದಿ
ಕಾರವಾರ : ಉತ್ತರ ಕನ್ನಡದಲ್ಲಿ ನಕಲಿ ಮದ್ಯದ ಘಾಟು ಜೋರಾಗಿದ್ದು, ರಾಜ್ಯದ ಮದ್ಯಕ್ಕಿ ಹೆಚ್ಚಾಗಿ ನಕಲಿ ಮದ್ಯಗಳೆ ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಜೋರಾಗಿ ಘಾಟು ಬಿರುತ್ತಿದೆ. ಆದರೆ ಅದ್ಯಾಕೋ ಕ್ರಮ ಜರುಗಿಸಬೇಕಾದವರಿಗೆ ಮೂಗಿಗೆ ಯಾಕೆ ‌ಘಾಟು ತಟ್ಟುತ್ತಿಲ್ಲ ಎನ್ನುವುದು ಮಿನಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ..

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕು ಸೇರಿದಂತೆ ನಾನಾ ಭಾಗದಲ್ಲಿ ಈ ನಕಲಿ ಮದ್ಯ ಜೋರಾಗಿ ಮಾರಾಟವಾಗುತ್ತಿದೆ..ಇದನ್ನ ಮಾರಾಟ‌ ಮಾಡೋದಕ್ಕೆ ಸರಕಾರಕ್ಕೆ‌ ಲಕ್ಷ ಲಕ್ಷ ಸುಂಕ ಕಟ್ಟಿ ಎಲ್ಲವೂ ಸರಕಾರದ ನಿಮಾವಳಿಯಂತೆ ವ್ಯಾಪಾರ ಮಾಡಬೇಕಾಗಿಲ್ಲ..ಗಲ್ಲಿ. ಗಲ್ಲಿಯಲ್ಲಿ. ಓಣಿಗಳಲ್ಲಿ ಕೆಲ‌ ಸಣ್ಣಪುಟ್ಟ ಕಿರಾಣಿ, ಗೂಡಂಗಳಿಗೆ ಸರಕಾರದಿಂದ ಅನುಮತಿ ಪಡೆದ ವೈನ್‌ಶಾಪ್‌ಗಳಿಗಿಂತಲ್ಲೂ ದೊಡ್ಡಮಟ್ಟದಲ್ಲಿ ಈ ನಕಲಿ ಮದ್ಯದ ವ್ಯಾಪಾರಾದಲ್ಲಿ ಗುರುತಿಸಿಕೊಂಡಿದೆ..ಇನ್ನೂ ಸ್ವಲ್ಪ‌ ಮುಂದೆ ಹೋಗಿ ನೋಡಿದರೆ ಜಿಲ್ಲೆಯ ಪೊಲೀಸ್ ಸಿಬ್ಬಂದಿಯೇ ಓರ್ವ ತನ್ನ ಕಾರಿನಲ್ಲಿ ಅಕ್ರಮ ಮಧ್ಯ ಸಾಗಾಟ ಮಾಡಲು ಹೋಗಿ ತಮ್ಮ ಇಲಾಖೆಯವರ ಕೈಗೆ ಸಿಕ್ಕಿ ಬಿದ್ದ ಉದಾರಣೆ‌‌ ಇದೆ.

ಗೋವಾದಿಂದ‌ ಅಕ್ರಮವಾಗಿ ರಾಜ್ಯದೊಳಗೆ ಬರುವ ಮದ್ಯವನ್ನ ತಡೆಯಲು ಗಡಿಯಲ್ಲಿ 24ಗಂಟೆ ತಪಾಸಣೆ ನಡೆಸುವ ಅಬಕಾರಿ ಇಲಾಖೆಯ ಅಧಿಕಾರಿಗಳು ಗಡಿಯ ಒಳಗೆ ಮಾರಾಟವಾಗುವ ನಕಲಿ ಮದ್ಯವನ್ನ ತಡೆಯಲು ಯಾಕೆ ಹಿಂದೆಟ್ಟು ಹಾಕುತ್ತಿದ್ದಾರೆಂದು ಮದ್ಯ ವಿರೋಧಿ ಹೋರಾಟಗಾರರು ಪ್ರಶ್ನೆ ಮಾಡುತ್ತಿದ್ದಾರೆ. ರಾಜ್ಯದ ಅಥವಾ ಹೊರ ರಾಜ್ಯದ ಮದ್ಯ ಮಾರಾಟಕ್ಕಿಂತ‌ ಹೆಚ್ಚಾಗಿ ಸ್ಥಳೀಯವಾಗಿಯೇ ನಕಲಿ ಮದ್ಯ ತಯಾರಿಸಿ ಆಯಾ ಕಂಪನಿಯ ಪ್ಯಾಕ್‌‌ಗಲ್ಲಿ ಯಾರಿಗೆ ಅನುಮಾನ ಬಾರದಂತೆ ಪ್ಯಾಕ್ ಮಾಡಿ ಜಿಲ್ಲೆಯಾದ್ಯಂತ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪವಿದೆ.

ಇನ್ನೂ ಈ ಚಾಲಾಕಿ ಮದ್ಯ ಮಾರಾಟಗಾರರು ಹತ್ತಾರು ನಕಲಿ ಬಾಕ್ಸ್‌ ಮಧ್ಯದಲ್ಲಿ ರಾಜ್ಯದ ಒಂದೇರಡು ಮದ್ಯದ ಬಾಕ್ಸ್‌ಗಳನ್ನ ಇಟ್ಟುಕೊಂಡು ನಕಲಿ ಮದ್ಯವನ್ನ ಗ್ರಾಹಕರಿಗೆ ನೀಡುತ್ತಿದ್ದಾರೆನ್ನಲಾಗಿದೆ. ಒಮ್ಮೆ ಎಲ್ಲಾದರೂ ಅಧಿಕಾರಿಗಳು ದಾಳಿ ಮಾಡಿದ ವೇಳೆ ಸಿಕ್ಕಿ ಬಿದ್ದರೆ ತಮ್ಮ ಬಳಿ ಕರ್ನಾಟಕ ಮದ್ಯ ಮಾತ್ರ ಇದೆ ಎಂದು ಹೇಳಿಕೊಂಡು ಕಾನೂನು ಕುಣಿಕೆಯಿಂದ‌ ತಪ್ಪಿಸಿಕೊಳ್ಳುವ ಹುನ್ನಾರವಾಗಿದೆ ಎನ್ನಲಾಗಿದೆ. ನಕಲಿ ಮದ್ಯ ಮಾರಾಟ ತಡೆಯುಂತೆ ಈಗಾಗಲೇ ಜಿಲ್ಲೆಯ ಹಲವು ಕಡೆಯಲ್ಲಿ ಮಹಿಳಾ ಸಂಘಟನೆಗಳು ಮನವಿಯನ್ನ ಕೂಡ ಸಲ್ಲಿಕೆ ಮಾಡಿದರು ಇದುವರಗೆ ಕಾಟಚಾರದ ದಾಳಿಯೂ ನಡೆಯದೆ ಇರುವುದರಿಂದ ನಕಲಿ ಮದ್ಯದ ಮಾರಾಟಗಾರರ ಜೊತೆ ಅಕ್ರಮ ಮದ್ಯ ತಡೆಯಬೇಕಾದ ಇಲಾಖೆ ಕೂಡ ಶಾಮೀಲಾಗಿದೆ ಎನ್ನುವ ಅನುಮಾನ ಇದೆ ಎಂದು ಮಹಿಳಾ ಹೋರಾಟಗಾರರು ಆರೋಪಿಸುತ್ತಿದ್ದಾರೆ.

ಮುಂದುವರೆಯುವುದು…..

ಇನ್ನೂ ಓದಿ/ಬಾವಿಗೆ ಹಾರಿ ಯುವತಿ ಆತ್ಮಹತ್ಯೆ : ಗುಂಡಿಬೈಲ್‌ನಲ್ಲಿ ದುರ್ಘಟನೆ