ಸುದ್ದಿಬಿಂದು ಬ್ಯೂರೋ ವರದಿ
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ತಂದೆಯ ರಾಜಕೀಯ ಬದುಕಿನ ಕುರಿತು ಮಹತ್ವದ ಹೇಳಿಕೆ ನೀಡಿದ್ದು, ರಾಜಕೀಯ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಕಪ್ಪಲಗುದ್ದಿಯಲ್ಲಿ ನಡೆದ ಶ್ರೀ ಸಂತ ಕನಕದಾಸರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಯತೀಂದ್ರ, “ಸಿಎಂ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದ ಕೊನೆಯ ಘಟ್ಟದಲ್ಲಿದ್ದಾರೆ. ಮುಂದೆ ಅವರು ಸಚಿವ ಸತೀಶ್ ಜಾರಕಿಹೊಳಿಗೆ ಮಾರ್ಗದರ್ಶಕರಾಗಲಿದ್ದಾರೆ” ಎಂದು ತಿಳಿಸಿದ್ದಾರೆ.
“ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ನ ತತ್ವ, ಸಿದ್ದಾಂತಗಳನ್ನು ಎತ್ತಿ ಹಿಡಿಯುವ, ಪಕ್ಷದ ಪರ ಕೆಲಸ ಮಾಡುವ ಸೈದ್ದಾಂತಿಕ ನಾಯಕರು. ಇಂಥ ನಾಯಕರಿಂದ ಪಕ್ಷ ಇನ್ನಷ್ಟು ಗಟ್ಟಿಯಾಲಿದೆ. ಅವರು ನಾಯಕತ್ವದಲ್ಲಿ ಪಕ್ಷ ಇನ್ನಷ್ಟು ಸಂಘಟಿತವಾಗಲಿ ಎಂದಿದ್ದಾರೆ..
ಈ ಹೇಳಿಕೆಯಿಂದ ಸಿದ್ದರಾಮಯ್ಯ ಅವರ ನಂತರದ ನಾಯಕತ್ವ ಯಾರ ಕೈ ಸೇರಲಿದೆ ಎಂಬ ಚರ್ಚೆ ಗಟ್ಟಿಯಾಗಿದೆ. ರಾಜಕೀಯ ವೀಕ್ಷಕರು, “ಯತೀಂದ್ರನ ಮಾತುಗಳಿಂದ ಸಿದ್ದರಾಮಯ್ಯ ಉತ್ತರಾಧಿಕಾರಿಯಾಗಿ ಸತೀಶ್ ಜಾರಕಿಹೊಳಿಯವರನ್ನು ಪರಿಗಣಿಸುತ್ತಾರೆಯೇ?” ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.. ರಾಜ್ಯ ರಾಜಕೀಯದಲ್ಲಿ ಈಗಾಗಲೇ ಸಿಎಂ ಸಿದ್ದರಾಮಯ್ಯ ನಂತರದ ನಾಯಕರಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಎಂ.ಬಿ. ಪಾಟೀಲ್ ಹೆಸರುಗಳು ಚರ್ಚೆಯಲ್ಲಿವೆ. ಇಂತಹ ಸಮಯದಲ್ಲಿ ಯತೀಂದ್ರ ಅವರ ಈ ಹೇಳಿಕೆ ಹೊಸ ತಿರುವು ಪಡೆದುಕೊಂಡಿದೆ..
ಇದನ್ನೂ ಓದಿ/ಶಾಸಕರ ಕಾರಿಗೆ ಡಿಕ್ಕಿ ಹೊಡೆದ ಸ್ಪಿಫ್ಟ್ ಕಾರು : ಪುತ್ರಿ, ಸಹೋದರನ ಪುತ್ರ ಅಪಾಯದಿಂದ ಪಾರು