ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದ ದೀಪಾವಳಿ ಹಬ್ಬದ ಸಂದರ್ಭದಲ್ಲಿ, ತಾಲ್ಲೂಕಿನ ಕೇಣಿ ಗ್ರಾಮದವರಿ ನಿರ್ಮಿಸಿದ ಕಲಾಕೃತಿ ಉತ್ಸವದಲ್ಲಿ ನೆರೆದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ಉತ್ಸವದಲ್ಲಿ ಸ್ಥಳೀಯ ಕಲಾತಂಡ “ಕಾಂತಾರ ಚಾಪ್ಟರ್ 1” ಚಿತ್ರದ ದೃಶ್ಯ ಪ್ರೇಕ್ಷಕರ ಗಮನ ಸೆಳೆಯುವಂತೆ ಮಾಡಿತ್ತು.
ಕ್ಷತ್ರಿಯ ಕೋಮರಪಂಥ ಸಮಾಜದ ಕಲಾವಿದರು ಜೇಡಿ ಮಣ್ಣಿನಲ್ಲಿ ವಿಶಿಷ್ಟ ಕಲಾಕೃತಿ ನಿರ್ಮಿಸಿ ಅದನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಿದರು. ವಿಶೇಷವಾಗಿ, ರಿಷಬ್ ಶೆಟ್ಟಿ ಅಭಿನಯದ ದೃಶ್ಯವನ್ನು ಪ್ರತಿಬಿಂಬಿಸುವ ಆ ಕಲಾಕೃತಿ ನೋಡುಗರಿಗೆ ಪಕ್ಕಾ ರಿಷವ್ ಶೆಟ್ಟಿ ಅವತಾರವೇ ನೋಡಿದಂತೆ ಕಾಣುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು ಈ ಕಲಾಕೃತಿ ನೋಡಿ ಖುಷಿಪಟ್ಟರು. ಕೇಣಿ ಗ್ರಾಮಸ್ಥರ ಸೃಜನಾತ್ಮಕ ಕೌಶಲ್ಯ ಹೊಂಡೆ ಉತ್ಸವವನ್ನು ಮತ್ತಷ್ಟು ವಿಶೇಷವಾಗಿ ಗಮನ ಸೆಳೆಯುವಂತೆ ಮಾಡಿತ್ತು..