ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ತವರು ಮನೆಗೆ ಹೋಗಿದ್ದ ಪತ್ನಿ ದೀಪಾವಳಿ ಹಬ್ಬಕ್ಕೂ ಬಂದಿಲ್ಲ ಎಂದು ಮನನೊಂದ ಪತಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭಾವಿಕೇರಿಯಲ್ಲಿ ನಡೆದಿದೆ.
ಶಿವಾನಂದ ಶಂಕರ್ ಆಗೇರ್ (34) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಶಿವಾನಂದ ಕುಟುಂಬದ ಖರ್ಚುಗಳಿಗೆ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ನಡುವೆ ದಂಪತಿಗಳ ಆಗಾಗ ಸಣ್ಣಪುಟ್ಟ ಗಲಾಟೆ ನಡೆದಿತ್ತು ಎನ್ನಲಾಗಿದೆ ಇದೆ ವಿವಾರಕ್ಕೆ ಮೃತ ಶಿವಾನಂದ ಆಗೇರ್ ಪತ್ನಿ ತವರು ಮನೆಗೆ ತೆರಳಿದ್ದರು.
ಅದೇನೆ ಇದ್ದರೂ ಹಬ್ಬಕ್ಕಾದರೂ ತನ್ನ ಪತ್ನಿ ಮರಳಿ ಬರುವ ಎಂಬ ನಿರೀಕ್ಷೆಯಲ್ಲಿ ಶಿವಾನಂದ ಇದ್ದರು ಅವರೆ .ಹಬ್ಬಕ್ಕೂ ಪತ್ನಿ ಮನೆಗೆ ಬಾರದೆ ತವರು ಮನೆಯಲ್ಲೆ ಉಳಿದಿಕೊಂಡಿರುವುದಕ್ಕೆ ಮನನೊಂದು ಶಿವಾನಂದ ಆಗೇರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ .
ಇದನ್ನೂ ಓದಿ/ಚಿಪ್ಪಿಕಲ್ಲು ಆರಿಸಲು ಹೋದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು