ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ :ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿರುವ ಪ್ರಸಿದ್ಧ ರಾಧಾಕೃಷ್ಣ ದೇವಸ್ಥಾನ ಮೇಲ್ಚಾವಣಿ ತೆಗೆದು ಕಳ್ಳತನ ನಡೆದ ಘಟನೆ ಬೆಳಕಿಗೆ ಬಂದಿದೆ. ದೇವಸ್ಥಾನದ ಒಳಗೆ ನುಗ್ಗಿದ ಕಳ್ಳರು ದೇವರ ಅಲಂಕಾರಕ್ಕೆ ಬಳಸುತ್ತಿದ್ದ ಬೆಳ್ಳಿ ಆಭರಣಗಳನ್ನು ಕದ್ದೊಯ್ದಿದ್ದಾರೆನ್ನಲಾಗಿದೆ.
ಬೆಳಿಗ್ಗೆ ದೇವಸ್ಥಾನ ಬಾಗಿಲು ತೆರೆಯುವ ವೇಳೆಯಲ್ಲಿ ದೇವಸ್ಥಾನದಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ.. ದೇವಸ್ಥಾನದ ಒಳಭಾಗದಲ್ಲಿ ಅಸ್ತವ್ಯಸ್ತ ಸ್ಥಿತಿ ಕಂಡುಬಂದಿದ್ದು, ತಕ್ಷಣವೇ ದೇವಸ್ಥಾನ ಸಮಿತಿ ಸದಸ್ಯರು ಮತ್ತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಕಾರವಾರ ನಗರ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ/ಗ್ರಾಹಕನ ವೇಷದಲ್ಲಿ ಕಳ್ಳ :ಅಂಗಡಿಯಿಂದ ಮೊಬೈಲ್ ಕದ್ದ ಘಟನೆ ವೈರಲ್