ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಜಿಲ್ಲಾ ಕೇಂದ್ರ ಕಾರವಾರ ಸೇರಿದಂತೆ ಕೆಲವೆಡೆ ಸಹಾಯಕ ಕಮಿಷನರ್ ಅಧಿಕಾರಿಗಳ ಕೊರತೆಯಿಂದಾಗಿ ಇಡಿ ಜಿಲ್ಲೆಯ ಕಂದಾಯ ಇಲಾಖೆಯ. ಸಮಸ್ಯೆಗಳು ಉಲ್ಬಣಗೊಳ್ಳುವಂತಾಗಿದೆ..
ಜಿಲ್ಲೆಯ ಆಡಳಿತಾತ್ಮಕ ಕಾರ್ಯಗಳಲ್ಲಿ ವಿಳಂಬ ಉಂಟಾಗುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಳೆದ ಒಂದು ವರ್ಷದಿಂದ ಸಹಾಯಕ ಕಮಿಷನರ್ ಹುದ್ದೆಗಳ ಕೊರತೆಯಿಂದ ಜನತೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಕೇವಲ ಕುಮಟಾ ಮತ್ತು ಶಿರಸಿ ತಾಲೂಕುಗಳ ಸಹಾಯಕ ಕಮಿಷನರ್‌ಗಳ ಸಂಪೂರ್ಣ ಜಿಲ್ಲೆಯ ಕಾರ್ಯಭಾರವನ್ನು ನಿಭಾಯಿಸುತ್ತಿರುವ ಪರಿಸ್ಥಿತಿ ಇದೆ.
ಜಿಲ್ಲೆಯಲ್ಲಿ ಒಟ್ಟು ನಾಲ್ವರು ಸಹಾಯಕ ಕಮಿಷರನ್ ಕಾರ್ಯನಿರ್ವಹಿಸಬೇಕುಮ. ಆದರೆ ಕಳೆದ ಒಂದು ವರ್ಷದಿಂದ ಇಬ್ಬರು ಅಧಿಕಾರಿಗಳೆ ಜಿಲ್ಲಾದ್ಯಂತ ಕಾರ್ಯನಿರ್ವಹಿಸಬೇಕಿದೆ. ಹುದ್ದೆಗಳು ಖಾಲಿ ಉಳಿದಿರುವುದರಿಂದ ಕಚೇರಿ ಕಾರ್ಯಗಳು ಸರಿಯಾಗಿ ನಡೆಯದೆ, ಸಾರ್ವಜನಿಕರು ಅದರಲ್ಲೂ ರೈತ ವರ್ಗ ನಿತ್ಯವೂ ಕಚೇರಿಗಳಿಗೆ ಅಲೆದಾಡುವಂತಾಗಿದೆ.
ಆದಾಯ, ಭೂಮಿಯ ದಾಖಲೆ, ಪರವಾನಗಿ ಸೇರಿದಂತೆ ಅನೇಕ ಪ್ರಮುಖ ಕೆಲಸಗಳು ತಿಂಗಳತಿಂಗಳ ಬಾಕಿಯಾಗಿರುವುದರಿಂದ ಜನರ ಕಳವಳ ಹೆಚ್ಚಾಗಿದೆ. ಅಧಿಕಾರಿಗಳ ಕೊರತೆಯಿಂದ ಆಡಳಿತ ಕಾರ್ಯಗಳಲ್ಲಿ ವಿಳಂಬ ಉಂಟಾಗಿದ್ದು, ಇಲಾಖೆಯ ಮೇಲಿನ ಜನರ ವಿಶ್ವಾಸ ಕಳೆದುಕೊಳ್ಳುವಂತಾಗಿದೆ.. ಸರಕಾರ ಆದಷ್ಟು ಶೀಘ್ರದಲ್ಲಿ ಜಿಲ್ಲೆಯಲ್ಲಿ ಕೊರತೆ ಇರುವ ಸಹಾಯಕ ಕಮಿಷನರ್ ಅಧಿಕಾರಿಗಳನ್ನ ನೇಮಕ ಮಾಡುವ ಮೂಲಕ ಜನರ ಕಚೇರಿ ಕೆಲಸದ ಸಮಸ್ಯೆ ಬಗೆಹರಿಸಬೇಕಿದೆ..
ಇದನ್ನೂ ಓದಿ/ಮೀನುಗಾರ ಯುವಕನ ನಿಧನಕ್ಕೆ ರೂಪಾಲಿ ನಾಯ್ಕ ಸಂತಾಪ, ಹೆಚ್ಚಿ ಪರಿಹಾರಕ್ಕೆ ಆಗ್ರಹ