ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ತಾಲೂಕಿನ ಬರ್ಗಿಯ ಘಟಬೀರ ದೇವಸ್ಥಾನದ ರಸ್ತೆಯ ಪಕ್ಕದಲ್ಲಿದ್ದ ಅಂಗಡಿಯೊಂದಕ್ಕೆ ಬೆಂಕಿ ತಗುಲಿ ಮತ್ತೊಂದು ದುರಂತ ತಪ್ಪಿದಂತಾಗಿದೆ.
ವಿನಾಯಕ ಹರಿಕಾಂತ ಎಂಬುವವರಿಗೆ ಸೇರಿದೆ ಎನ್ನಲಾದ ಅಂಗಡಿಯೊಂದಕ್ಕೆ ಬೆಂಕಿ ತಗುಲಿ ಸ್ಥಳೀಯರಲ್ಲಿ 2015ರಲ್ಲಿ ನಡೆದ ಮಾಹಾ ಬೆಂಕಿ ದುರಂತ ನೆನಪಿಸುವಂತೆ ಮಾಡಿದ್ದು, ಸ್ಥಳೀಯರಲ್ಲಿ ಭೀತಿ ಹುಟ್ಟಿಸುವಂತೆ ಮಾಡಿದೆ. ಒಂದೊಮ್ಮೆ ಅದೆ ಬೆಂಕಿ ದೊಡ್ಡಮಟ್ಟದಲ್ಲಿ ಹತ್ತಿಕೊಂಡಿದ್ದರೆ. ಅಕ್ಕ-ಪಕ್ಕದಲ್ಲಿದ್ದ ಇನ್ನೂ ಒಂದಿಷ್ಟು ಮನೆಗಳಿಗೆ ಹೊತ್ತಿಕೊಳ್ಳುವ ಸಾಧ್ಯತೆ ಇತ್ತು. ಬೆಂಕಿ ತಗುಲಿದ ಅಂಗಡಿಯೊಳಗೆ ಸುಮಾರು ನಾಲ್ಕು ಸಿಲೆಂಡರ್ ಇರುವುದು ಪತ್ತೆಯಾಗಿದೆ.ಅಂಗಡಿ ಮಾತ್ರ ಇದ್ದು, ಇಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಸದೆ ಬಾಗಿಲು ಮುಚ್ಚಲಾಗಿದ್ದು, ಹೀಗಾಗಿ ಸಿಲೆಂಡರ್ ಸೇರಿದಂತೆ ಕೆಲವೊಂದಿಷ್ಟು ವಸ್ತುಗಳನ್ನ ಅಂಗಡಿಯಲ್ಲಿ ಇಡಲಾಗಿತ್ತು.
ರಾತ್ರಿ ವೇಳೆಯಲ್ಲಿ ಅಂಗಡಿಗೆ ಬೆಂಕಿ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಜನರು ಮನೆ ಬಿಟ್ಟು ಓಡಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿಂದೆ 2015ರಲ್ಲಿ ಸಿಲೆಂಡರ್ ಟ್ಯಾಂಕರ್‌ನಿಂದ ಅನಿಲ್ ಸೋರಿ ಉಂಟಾಗಿ ಇದೇ ಭಾಗದ ಸುತ್ತ ಮುತ್ತ ಒಟ್ಟು 13ಮಂದಿ ದುರಂತದಲ್ಲಿ ಸಾವು ಕಂಡಿದ್ದರು. ಹೀಗಾಗಿ ಈ ಭಾಗದಲ್ಲಿ ಸಣ್ಣದೊಂದು ಬೆಂಕಿ ಕಿಡಿ ಹೊತ್ತಿಕೊಂಡರು ಸಹ ಇಂದಿಗೂ ಜನ ಭಯ ಪಡುವಂತಹ ಪರಿಸ್ಥಿತಿ ಇದೆ. ಹೀಗಿರುವಾಗ ಅದೆ ಸ್ಥಳದಲ್ಲಿ ಇಂದು ಬೆಂಕಿ ಹೊತ್ತಿಕೊಂಡ ಪರಿಣಮ ಮತ್ತೆ ಅಲ್ಲಿನ ಜನರಲ್ಲಿ ಭಯ ಹುಟ್ಟುವಂತಾಗಿದೆ.
ಬೆಂಕಿ ಬಿದ್ದ ತಕ್ಷಣ ಸ್ಥಳಕ್ಕೆ ಆಗಮಿಸಿದ ಕುಮಟಾದ ಅಗ್ನಿಶಾಮ ದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿದ್ದಾರೆ. ಆದರೆ ಏಕಾಏಕಿಯಾಗಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಇದುವರೆಗೆ ನಿಖರ ಕಾರಣ ತಿಳಿದುಬಂದಿಲ್ಲ..ಈ ಬಗ್ಗೆ ಪೊಲೀಸರೇ ಸಮಗ್ರ ತನಿಖೆ ನಡೆಸಬೇಕಿದೆ..
ಇದನ್ನೂ ಓದಿ/ನಿವೃತ್ತ PWD ಅಧಿಕಾರಿ ಅಳ್ವೆಕೋಡಿಯ ಜೈಯಂತ ಪಟಗಾರ ವಿಧಿವಶ