ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಭಾರೀ ಸಿಡಿಲು ಬಡಿದ ಪರಿಣಾಮವಾಗಿ ಉತ್ತರಕನ್ನಡ ಜಿಲ್ಲೆಯ ಕುಮಟಾದ ತಾಲೂಕಾ ಆಡಳಿತ ಕಚೇರಿಗೆ ಭಾರೀ ಪ್ರಮಾಣದಲ್ಲಿ ಸಿಡಿಲು ಬಡಿದಿದ್ದು ಕಚೇರಿಯ ಮೇಲ್ಭಾಗದಲ್ಲಿ ಹಾಕಲಾಗಿದ್ದ ಕಾಂಕ್ರೀಟ್ ಹಾರಿಹೋಗಿರುವ ಘಟನೆ ನಡೆದಿದೆ.
ಸಂಜೆ ಸುರಿದ ಮಳೆಗೆ ಆಡಳಿತ ಭವನದ ಮೇಲೆ ಸಿಡಿಲು ಬಡಿದು ಕಾಂಕ್ರೀಟ್ ಹಾರಿ ಹೋಗಿರುವುದಲ್ಲದೆ ನಾಮಫಲಕ ಕೂಡ ಕಿತ್ತು ಹೋಗಿದೆ. ಘಟನೆಯಿಂದಾಗಿ ಕೆಲಕಾಲ ಭೀತಿಯ ವಾತಾವರಣ ಉಂಟಾಗುವಂತಾಗಿದೆ. ಕಚೇರಿಗೆ ಸಿಡಲು ಬಡಿತವಾಗುತ್ತಿದ್ದಂತೆ ಕಚೇರಿಯಲ್ಲಿದ್ದ ಇದ್ದ ಸಿಬ್ಬಂದಿಗಳು ಒಂದು ಕ್ಷಣ ಖುರ್ಚಿಯನ್ನ ಬಿಟ್ಟು ಓಡಿ ಹೋದ ಪ್ರಸಂಗ ಕೂಡ ನಡೆದಿದೆ.
ಸಿಡಿಲು ಬಡಿತವಾಗಿರುವುದರಿಂದ ಕಚೇರಿಯ ಕೆಲವು ವಿಭಾಗಗಳಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿತು. ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್, ಶಿರಸ್ತೇದಾರ ಜಗದೀಶ ಪೂಜಾರಿ, ಹಾಗೂ ಗ್ರೇಡ್-2 ತಹಶೀಲ್ದಾರ್ ಸತೀಶ್ ಗೌಡ ತಕ್ಷಣ ಸ್ಥಳಕ್ಕೆ ಧಾವಿಸಿ ಸಿಬ್ಬಂದಿಯ ಸುರಕ್ಷತೆ ಪರಿಶೀಲಿಸಿದ್ದಾರೆ..
ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯಗಳಾಗಿಲ್ಲ, ದೊಡ್ಡ ಪ್ರಮಾಣದ ಹಾನಿ ಸಂಭವಿಸದೆ ಇರುವುದರಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ವಿದ್ಯುತ್ ವ್ಯತ್ಯಯ ಉಂಟಾಗಿದ್ದು ಸದ್ಯ ಕಚೇರಿಯಲ್ಲಿ ಕತ್ತಲು ಆವರಿಸಿದೆ.