ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ತಾಲೂಕಿನ ಕಿಮಾನಿಯ ಗಜನಿ ಪ್ರದೇಶದಲ್ಲಿ ವ್ಯಕ್ತಿ ಓರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅತನ ಸಾವಿನ ಕುರಿತಾಗಿ ತನಿಖೆ ನಡೆಸುತ್ತಿದ್ದು, ಮಹತ್ವದ ಬೆಳವಣಿಗೆ ನಡೆದಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಕಿಮಾನಿ ಭಾಗದ ಗಜನಿ ಪ್ರದೇಶದಲ್ಲಿ ಇಸ್ಮಾಯಿಲ್ ಎಂಬಾತನ ಶವ ಪತ್ತೆಯಾಗಿದೆ ಎನ್ನಲಾಗಿದೆ. ಈತನ ಸಾವಿನ ಕುರಿತಾಗಿ ಸ್ಥಳೀಯ ಪೊಲೀಸರು ತನಿಖೆ ತೀವ್ರಗೊಳಿಸಿದ್ದು ಸತ್ಯ ಶೋಧ ಆರಂಭಿಸಿದ್ದಾರೆ. ಈತ ಮೀನು ಹಿಡಿಯಲು ಹೋಗಿದ್ದ ಎನ್ನಲಾದ ಕಾರಣಕ್ಕೆ ರಾತ್ರಿ ವೇಳೆಯಲ್ಲಿ ಆತನ ಮೇಲೆ ಬರ್ಬರವಾಗಿ ಹಲ್ಲೆ ಮಾಡಿ ಬೇರೊಂದು ಸ್ಥಳದಲ್ಲಿ ಎಸೆದು ಹೋಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಘಟನೆ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಕೂಡ ನೀಡದೆ ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿದ್ದಾರೆನ್ನಲಾಗಿದೆ. ಇದು ಕೂಡ ಸಾಕಷ್ಟು ಅನುಮಾನ ಹುಟ್ಟುಹಾಕಲು ಕಾರಣವಾಗಿದೆ. ಅನುಮಾನಾಸ್ಪದವಾಗಿ ಶವ ಸಿಕ್ಕಾಗ ಅವರ ಸಮಾಜದ ಕೆಲವರು ದೂರು ನೀಡುವಂತೆಯೂ ಸೂಚನೆ ನೀಡಿದ್ದರು ಎನ್ನಲಾಗಿದೆ. ಆದರೆ ಅದ್ಯಾಕೊ ಇಸ್ಮಾಯಿಲ್ ಕುಟುಂಬಸ್ಥರು ದೂರು ನೀಡಲು ಹಿಂದೇಟು ಹಾಕಿದ್ದಾರೆನ್ನಲಾಗಿದೆ. ಇದು ಕೂಡ ಸಾಕಷ್ಟು ಅನುಮಾನಕ್ಕೆ ಕಾರಣವಾಗಿರುವಂತಿದೆ..
ಈ ಸಂಬಂಧ ಸುದ್ದಿಬಿಂದು ಸುದ್ದಿ ಪ್ರಕಟಿಸಿದ ಬಳಿಕ ಎಚ್ಚೇತ್ತುಕೊಂಡ ಪೊಲೀಸರು ಇದೀಗ ಶವ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದ್ದಾರೆ. ಅದು ಅಲ್ಲದೆ ಆತನ ಕುಟುಂಬಸ್ಥರನ್ನ ಕೂಡ ಪೊಲೀಸರು ವಿಚಾರಣೆ ಮಾಡಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.. ಈ ವೇಳೆ ಆತನಿಗೆ ಮೊದಲಿನಿಂದಲ್ಲೂ ಹೃದಯ ಸಂಭಂಧಿಸಿದ ಕಾಯಿಲೆ ಇತ್ತು ಎನ್ನುವ ಬಗ್ಗೆ ಆತನ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಮೃತ ವ್ಯಕ್ತಿಗೆ ಹಿಂದಿನಿಂದಲ್ಲೂ ಯಾವುದಾದರೂ ಖಾಯಿಲೆ ಇದಿದ್ದರೆ . ಆತ ಎಷ್ಟು ವರ್ಗಳಿಂದ ಖಾಯಿಲೆಗೆ ಒಳಗಾಗಿದ್ದ, ಯಾವ ವೈದ್ಯರ ಬಳಿ ತಪಾಷಣೆ ಮಾಡಿಕೊಡಿಕೊಳ್ಳುತ್ತಿದ್ದ ಎನ್ನುವುದು ಕೂಡ ತಿಳಿದು ಬರಬೇಕಿದೆ. ಆ ಬಗ್ಗೆ ಕುಟುಂಬಸ್ಥರ ಬಳಿ ದಾಖಲೆಗಳು ಏನಾದ್ದರೂ ಇದ್ದಲ್ಲಿ ಅದನ್ನೂ ಸಹ ಕುಟುಂಬಸ್ಥರು ಪೊಲೀಸರಿಗೆ ಒಪ್ಪಿಸಬೇಕಿದೆ. ಜೀವನದಲ್ಲಿ ಬದುಕಿ ಬಾಳಬೇಕಾದ ವ್ಯಕ್ತಿ ರಾತ್ರಿ ಸಮಯದಲ್ಲಿ ಮನೆಬಿಟ್ಟು ಹೋಗಿ ಬೇರೊಂದು ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ ಎಂದಾದರೆ ಯಾರಿಗಾದರೂ ಅನುಮಾನ ಹುಟ್ಟುವುದು ಸಹಜ. ಕುಟುಂಬಸ್ಥರು ಹೇಳಿದ ಮಾತ್ರಕ್ಕೆ ಪೊಲೀಸ್ ತನಿಖೆ ನಿಂತೂ ಹೋಗುತ್ತದೆ ಎನ್ನುವುದು ಕಷ್ಟಸಾಧ್ಯ ಎನ್ನುವುದು ಕಾನೂನು ತಜ್ಞನರ ಅಭಿಪ್ರಾಯ ಕೂಡ..
ಆತ ಆ ಸಮಯದಲ್ಲಿ ಯಾಕೆ ಅಲ್ಲಿಗೆ ಹೋಗಿದ್ದ, ನಿತ್ಯವೂ ಆ ಭಾಗದಲ್ಲಿ ಓಡಾಡುತ್ತಿದ್ದನ್ನ. ಎಲ್ಲದರ ಬಗ್ಗೆಯೂ ಸಹ ತನಿಖೆ ನಡೆಸಲೇ ಬೇಕಿದೆ. ಹೀಗಾಗಿ ಪೊಲೀಸರು ಸತ್ಯ ಶೋಧಕ್ಕಾಗಿ ಎಲ್ಲಾ ಹಂತದಲ್ಲೂ ತನಿಖೆ ಕೈಕೊಂಡಿದ್ದಾರೆನ್ನಲಾಗಿದೆ. ನಿರ್ಜನ ಪ್ರದೇಶದಲ್ಲಿ ಆತ ಸಾವನ್ನಪ್ಪಿದಾಗ ಆತನ ಕುಟುಂಬಸ್ಥರು ಯಾಕೆ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎನ್ನುವ ಬಗ್ಗೆ ಸಹ ಪೊಲೀಸ್ ತನಿಖೆ ಚುರುಕುಕೊಂಡಿದೆ..ಅನಾರೋಗ್ಯಕ್ಕೆ ಒಳಾಗಿದ್ದರೆ ಆತ ರಾತ್ರಿ ವೇಳೆಯಲ್ಲಿ ಮನೆಯಿಂದ ಅಷ್ಟೊಂದು ದೂರಕ್ಕೆ ಹೋಗಿರೋದು ಯಾಕೆ.? ಹೀಗೆ ಹತ್ತಾರು ಮಜಲುಗಳಲ್ಲಿ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಆದರೆ ಅದೇನೆ ಇರಲಿ ಅನುಮಾನಾಸ್ಪದ ಸಾವಿನ ಬೆನ್ನು ಬಿದ್ದ ಪೊಲೀಸರಿಗೂ ಇದೀಗ ಹತ್ತಾರೂ ಅನುಮಾನಗಳು ಹುಟ್ಟಿಕೊಂಡಿದ್ದು, ತನಿಖೆ ತೀವೃಗೊಂಡಿದೆ. ಈ ಬಗ್ಗೆ ಕುಟುಂಬಸ್ಥರು ಸಹ ಪೊಲೀಸ್ ತನಿಖೆಗೆ ಸರಿಯಾಗಿ ಸ್ಪಂಧಿಸದೆ ಹೋದರೆ ಹೂತ ಶವವನ್ನ ತೆಗೆದು ತನಿಖೆ ನಡೆಸಬೇಕಾದ ಪರಿಸ್ಥಿತಿ ಎದುರಾದರು ಅಚ್ಚರಿ ಪಡಬೇಕಾಗಿಲ್ಲ.
ಇನ್ನಷ್ಟು ಸುದ್ದಿಗಳು ಮುಂದಿನ ಭಾಗದಲ್ಲಿ
ಇದನ್ನೂ ಓದಿ/ ಲವ್ ಜಿಹಾದ್’ ಆರೋಪ : ಮುಕಳೆಪ್ಪ ವಿರುದ್ಧ ಕ್ರಮಕ್ಕೆ ಮುತಾಲಿಕ್ ಆಗ್ರಹ