ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ರಾಷ್ಟ್ರೀಯ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಬೈಕ್ ಸವಾರ ಓರ್ವನಿಗೆ ಹೊನ್ನಾವರ ಕಡೆಯಿಂದ ಉಡುಪಿ ಕಡೆ ಚಲಿಸುತ್ತಿದ್ದ ಕಾರ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಡಗುಂಜಿ ಕ್ರಾಸ್ ಬಳಿ ನಡೆದಿದೆ.

ಅಪಘಾತದಲ್ಲಿ ಬೈಕ್ ಸವಾರ ವಸಂತ ದೇವು ಗೌಡ, ಎಂಬುವವರಿಗೆ ಗಂಭೀರವಾಗಿ ಗಾಯವಾಗಿದೆ. ಇವರು ಮಾವಿನಕಟ್ಟಾದಿಂದ ಇಡಗುಂಜಿ ಕ್ರಾಸ್‌ ಮೂಲಕ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಹೊನ್ನಾವರ ಕಡೆಯಿಂದ ಉಡುಪಿಗೆ ಚಲಿಸುತ್ತಿದ್ದ‌ ಕಾರು ಡಿಕ್ಕಿ‌ ಹೊಡೆದಿದೆ. ಇದರಿಂದಾಗಿ ಬೈಕ್ ಸವಾರ ವಸಂತ ಗೌಡ ಎಂಬುವವರ ಕಾಲಿಗೆ ಗಂಭೀರ ಗಾಯವಾಗಿದೆ.

ತಕ್ಷಣ ಗಾಯಗೊಂಡ ಬೈಕ್ ಸವಾರನಿಗೆ ಹೊನ್ನಾವರ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಬಳಿಕ ಕಾರವಾರ. ಕ್ರಿಮ್ಸ್‌ಗೆ ಸಾಗಿಸಲಾಗಿದೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Accident: Bike-Car Collision on National Highway 66; Biker Severely Injured
​SuddiBindu
Honnavar: A biker sustained severe injuries after his motorcycle was struck by a car at the Idugunji Cross on National Highway 66. The accident occurred when the biker was crossing the national highway and a car traveling from Honnavar towards Udupi collided with him.

​The injured biker has been identified as Vasanth Devu Gowda. He was reportedly riding his bike from Mavinakatta, heading home via the Idugunji Cross when the car, moving towards Udupi, crashed into his motorcycle. As a result of the collision, Vasanth Gowda suffered a serious leg injury.

​The injured biker was immediately taken to a hospital in Honnavar for primary treatment before being shifted to for further care. ​A case regarding this incident has been registered at the Manki Police Station.

ಇದನ್ನೂ ಓದಿ/ ಬಲೆಗೆ ಸಿಲುಕಿದ್ದ ನಾಗರ ಹಾವು ರಕ್ಷಣೆ