ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಶಿರಡಿ ಮತ್ತು ಅಯೋಧ್ಯೆ ಪ್ರವಾಸ ಮುಗಿಸಿ ಊರಿಗೆ ಮರಳುತ್ತಿದ್ದ ಕುಮಟಾ ತಾಲೂಕಿನ ಕತಗಾಲದ ಮಾಸ್ತಿಹಳ್ಳ ಮೂಲದ ಕುಟುಂಬದ ಮೇಲೆ ಮಹಾರಾಷ್ಟ್ರದ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ದರೋಡೆ ಯತ್ನ ನಡೆದ ಘಟನೆ ವರದಿಯಾಗಿದೆ.

ಗಜಾನನ ಟ್ರಾವೆಲ್ಸ್ ಸಂಸ್ಥೆಯ ಟಿಟಿ ವಾಹನದಲ್ಲಿ ಕುಟುಂಬವೊಂದು ಪ್ರವಾಸ ಮುಗಿಸಿ ಹಿಂದಿರುಗುತ್ತಿದ್ದಾಗ, ಸೋಲಾಪುರದ ಬಳಿಯಲ್ಲಿ ಈ ಘಟನೆ ನಡೆದಿದೆ. ಮೂವರು ಬೈಕ್‌‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಟಿಟಿ ವಾಹನವನ್ನು ಹಿಂಬಾಲಿಸಿ ಸಿನಿಮೀಯ ರೀತಿಯಲ್ಲಿ ದರೋಡೆ ಯತ್ನ ನಡೆಸಿದ್ದಾರೆ.

ಚಲಿಸುತ್ತಿದ್ದ ವಾಹನದ ಹಿಂದಿನ ಬಾಗಿಲಿಗೆ ಜಿಗಿದ ದುಷ್ಕರ್ಮಿಗಳು ಒಳಗೆನುಗ್ಗಿ ಹಿಂಬದಿಯಲ್ಲಿದ್ದ ಬ್ಯಾಗ್‌ಗಳನ್ನು ಎಳೆದು ಹೊರನಡೆದಿದ್ದಾರೆ. ಈ ಘಟನೆ ವೇಳೆ ವಾಹನದಲ್ಲಿದ್ದ ಮಹಿಳೆಯರು ಮತ್ತು ಮಕ್ಕಳು ಆತಂಕಕ್ಕೆ ಒಳಗಾಗಿದ್ದರು

ಘಟನೆಯನ್ನು ಗಮನಿಸಿದ ಚಾಲಕ ತಕ್ಷಣ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿದ್ದು, ತನ್ನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವನ್ನು ತಪ್ಪಿಸಿದೆ, ದುಷ್ಕರ್ಮಿಗಳು ಕದ್ದುಕೊಂಡ ಬ್ಯಾಗ್‌ಗಳಲ್ಲಿ ಬಟ್ಟೆ ಹೊರತುಪಡಿಸಿ ಯಾವುದೇ ನಗದು ಅಥವಾ ಚಿನ್ನಾಭರಣ ಇರದ ಕಾರಣ ದರೋಡೆ ವಿಫಲವಾಗಿದೆ.

Solapur (Maharashtra):A family from Mastihalla near Katagala in Kumta taluk had a narrow escape after a dramatic robbery attempt on National Highway 52 near Solapur, Maharashtra, while returning home from their Shirdi–Ayodhya pilgrimage.

The family was travelling in a Gajanan Travels TT vehicle when a group of miscreants, riding on three bikes, began following them and tried to loot the vehicle in a filmy style.

According to sources, the robbers jumped onto the moving vehicle’s rear door, entered inside, and threw out several travel bags. The family, including women and children, was terrified during the incident.

However, the alert driver immediately stopped the vehicle and, with his quick action, managed to prevent a major mishap.

Fortunately, the stolen bags contained only clothes and no cash or gold ornaments, foiling the robbers’ attempt.

No official complaint has been registered so far, but the incident has sparked concern among travelers on the Solapur stretch of National Highway 52.

The daring robbery attempt has now become a talking point on social media, highlighting growing safety concerns on long-distance routes in Maharashtra.

ಇದನ್ನೂ ಓದಿ : ಕುಮಟಾದಲ್ಲಿ “ಪೊಲೀಸ್ ಕೈಯಿಂದ ತಪ್ಪಿಸಿಕೊಂಡ ಕಳ್ಳ