ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿಯವರು ಅನಧಿಕೃತ ಕಟ್ಟಡಕ್ಕೆ ಅನುಮತಿ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆಂದು ಮುಖ್ಯಾಧಿಕಾರಿ ವಿರುದ್ದ ಪತ್ರ ಬರೆದು ನಾಪತ್ತೆಯಾದ ಸಿಬ್ಬಂದಿ ಇದೀಗ ಬೆಳಗಾವಿಯಲ್ಲಿ ಪತ್ತೆಯಾಗಿದ್ದಾನೆ.
ಕುಮಟಾ ಪುರಸಭೆಯಲ್ಲಿ ಆರ್.ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ ಆರ್ ಮಂಗಳವಾರ ರಾತ್ರಿ ಭಟ್ಕಳದಲ್ಲಿರುವ ಮನೆಯಿಂದ ನಾಪತ್ತೆಯಾಗಿದ್ದು, ಇದಕ್ಕೂ ಪೂರ್ವದಲ್ಲಿ ಮುಖ್ಯಾಧಿಕಾರಿ ನೀಡುತ್ತಿದ್ದ ಕಿರುಕುಳದ ಬಗ್ಗೆ ಪತ್ರವೊಂದನ್ನ ಬರೆದು ಪುರಸಭೆಯ ಸದಸ್ಯರ ವಾಟ್ಸಾಪ್ ಗ್ರೂಪ್ಗೆ ಕಳುಹಿಸಿ ನಾಪತ್ತೆಯಾಗಿದ್ದ. ಈ ಬಗ್ಗೆ ಆತನ ಕುಟುಂಬಸ್ಥರು ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಾಪತ್ತೆಯಾಗಿದ್ದ ವೆಂಕಟೇಶ ಆರ್ ಬೆಳಗಾವಿಯಿಂದ ಮನೆಯವರಿಗೆ ದೂರವಾಣಿ ಕರೆ ಮಾಡಿ ತಾನು ಬೆಳಗಾವಿಯಲ್ಲಿ ಇರುವುದಾಗಿ ತಿಳಿಸಿದ್ದ. ಬಳಿಕ ಅಲ್ಲಿಗೆ ತೆರಳಿದ್ದ ಭಟ್ಕಳ ಪೊಲೀಸರು ಈಗಷ್ಟೆ ಆತನನ್ನ ಪತ್ತೆಹಚ್ಚಿದ್ದಾರೆ. ಆತನಿನ್ನೆಯಿಂದ ಸರಿಯಾಗಿ ಊಟ, ತಿಂಡಿ ಇಲ್ಲದೆ ಆಯಾಸವಾಗಿದ್ದಾನೆ ಎನ್ನಲಾಗಿದೆ..
ಇದನ್ನೂ ಓದಿ/ Bigg Boss show/ಬಿಗ್ ಬಾಸ್ ಶೋ ಮತ್ತೆ ಓಪನ್ : ಎಂಟ್ರಿ ಕೊಟ್ಟ 17 ಸ್ಪರ್ಧಿಗಳು!