ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಕ್ಷೇತ್ರದ ಶಾಸಕರ ದಿನಕರ ಶೆಟ್ಟರ ಅವರು ನಿನ್ನೆ ಬಿಜೆಪಿ ಕಾರ್ಯಾಲಯದಲ್ಲಿ ಅಭಿವೃದ್ಧಿ ಹಾಗೂ ಭ್ರಷ್ಟಾಚಾರ ಕುರಿತಾಗಿ ನೀಡಿರುವ ಹೇಳಿಕೆಯನ್ನ ತೀವ್ರವಾಗಿ ಖಂಡಿಸಿರುವ ಕೆಪಿಸಿಸಿ ಸಂಯೋಜಕ ಭಾಸ್ಕರ್ ಪಟಗಾರ ಶಾಸಕರಿಗೆ ತಾಕತ್ತಿದ್ದರೆ ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ಸವಾಲು ಎಸೆದಿದ್ದಾರೆ..

ಅಭಿವೃದ್ಧಿ ಹಾಗೂ ಭ್ರಷ್ಟಾಚಾರ ವಿಚಾರವಾಗಿ ತಮ್ಮ ಅವಧಿಯಲ್ಲಿ ಆದ ಭ್ರಷ್ಟಾಚಾರ ಹಾಗೂ ಅಭಿವೃದ್ಧಿ ಚರ್ಚೆಗೆ ಸಿದ್ದನಿದ್ದೇನೆ. ಸಾಹೇಬರು ತಾಕತ್ತಿದ್ದರೆ ಚರ್ಚೆಗೆ ಬನ್ನಿ ನಾವು ಕೇಳುವ ಪ್ರಶ್ನೆಗೆ ಉತ್ತರಿಸಲಿ. ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಾಕಷ್ಟು ವಿಚಾರವನ್ನು ಹೇಳಿಕೊಂಡಿದ್ದಾರೆ ಕೆಲವು ವಿಚಾರಗಳಿಗೆ ನಾನು ಅವರ ಪಕ್ಷ ಹಾಗೂ ಅವರ ವೈಯಕ್ತಿಕವಾಗಿ ಮಾತನಾಡಿದ್ದಾರೆ ಆ ವಿಚಾರವಾಗಿ ನಾನು ಮಾತನಾಡುವುದಿಲ್ಲ ಆದರೆ ಕ್ಷೇತ್ರದಲ್ಲಿ ಶಾಸಕರು ಮೂರು ಬಾರಿ ಶಾಸಕರಾಗಿದ್ದಾರೆ. ಅಂದಿನಿಂದ ಇಂದಿನ ತನಕ ಆಗಿರುವ ಅಭಿವೃದ್ಧಿ ಹಾಗೂ ಭ್ರಷ್ಟಾಚಾರ ವಿಚಾರದಲ್ಲಿ ಮಾತನಾಡಿದ್ದಾರೆ ಶಾಸಕರು ಕ್ಷೇತ್ರದ ಜನಪ್ರತಿನಿಧಿಗಳು ಇರುವಾಗ ಮಾತನಾಡುವಾಗ ಪತ್ರಿಕೆಯಲ್ಲಿ ಹೇಳಿಕೆ ನೀಡುವಾಗ ತಾವು ಮಾತನಾಡಿದಂತೆ ನಡೆದುಕೊಂಡರೆ ಮಾತನಾಡಬಹುದಿತ್ತು ಆದರೆ ಭ್ರಷ್ಟಾಚಾರ ವಿಚಾರದಲ್ಲಿ ಶಾಸಕರು ಸಂಪೂರ್ಣ ಅವರ ಅವಧಿಯಲ್ಲಿ ಆಗಿರುವಷ್ಟು ಭ್ರಷ್ಟಾಚಾರ ಯಾರ ಅವಧಿಯಲ್ಲಿ ಆಗದಿರುವುದಕ್ಕೆ ಅನೇಕ ಸಂಘಡನೆಗಳ ಪತ್ರಿಕಾ ಹೇಳಿಕೆಗಳು ಹಾಗೂ ಹೋರಾಟಗಳು ಸಾಕ್ಷಿ.

ಸಾಕಷ್ಟು ಹೋರಾಟಗಳನ್ನು ಮಾಡಿದರು ಯಾವುದೇ ರೀತಿಯ ಕ್ರಮಗಳನ್ನ ಕೈಗೊಳ್ಳದೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವಂತಹ ಕೆಲಸವನ್ನ ಶಾಸಕರು ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಸಾಕಷ್ಟು ಕಾಮಗಾರಿಯಲ್ಲಿ ಭ್ರಷ್ಟಾಚಾರ ಹಾಗೂ ಕಮಿಷನ್ ಪಡೆಯುವುದು ಮಾಮೂಲಾಗಿದೆ ನೇರವಾಗಿ ಚರ್ಚೆಗೆ ಬಂದರೆ ಪ್ರತಿಯೊಂದು ಕಾಮಗಾರಿಯ ವಿವರ ಹಾಗೂ ದಾಖಲೆಯನ್ನ ನೀಡುತ್ತೇನೆ. ಅಭಿವೃದ್ಧಿ ಎನ್ನುವ ಅರ್ಥವೇ ಗೊತ್ತಿಲ್ಲದ ಶಾಸಕರು ಏನಾದರೂ ರಾಜ್ಯದಲ್ಲಿ ಇದ್ದಾರೆ ಎನ್ನುವುದಾದರೆ ಅದು ನಮ್ಮ ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ್ ಶೆಟ್ಟಿ ಅವರು ಮಾತ್ರ ಎಂದಿದ್ದಾರೆ.

ಕ್ಷೇತ್ರದಲ್ಲಿ ಸಾಮಾನ್ಯ ಮೂಲಭೂತ ಸೌಕರ್ಯಗಳು ರಸ್ತೆಯ ಹೊಂಡ ಮುಚ್ಚುವ ಕೆಲಸವನ್ನ ಎಂದೂ ಸಹ ಮಾಡಿಲ್ಲ ಆರೋಗ್ಯ ವಿಚಾರದಲ್ಲಿ ಸಂಪೂರ್ಣ ಬೇಜವಾಬ್ದಾರಿ ಪ್ರವಾಸೋದ್ಯಮ ವಿಚಾರದಲ್ಲಿ ಒಮ್ಮೆಯೂ ಯಾವುದೇ ರೀತಿಯ ಅಭಿವೃದ್ಧಿ ಮಾಡದೇ ಸಂಪೂರ್ಣ ಪ್ರವಾಸೋದ್ಯಮವನ್ನು ಕೆಳಹಂತಕ್ಕೆ ತಲುಪಿಸಿದ್ದಾರೆ. ನೂರಾರು ಕೋಟಿ ಅನುದಾನ ತಂದಿರುವುದಾಗಿ ಹೇಳಿಕೊಳ್ಳುತ್ತಾರೆ ಒಂದಾದರೂ ದೊಡ್ಡ ಯೋಜನೆಯನ್ನ ತಂದಿರುವ ಬಗ್ಗೆ ಮಾಹಿತಿ ನೀಡಲಿ.

ಇವರ ಅವಧಿಯಲ್ಲಿ ನಡೆದಿರುವ ಕಾಮಗಾರಿಯ ಪರಿಚಯ ಆಗಲಿ ಕಾಂಗ್ರೆಸ್ ಅವಧಿಯಲ್ಲಿ ಆಗಿರುವಂತ ಗಂಗಾವಳಿ ಐಗಳ ಕುರುವೆ ಹೆಬೈಲ್ ಸೇತುವೆಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಗಿಸದೆ ಸಾರ್ವಜನಿಕರಿಗೆ ಕಿರಿಕಿರಿ ಕೊಟ್ಟಂತದ್ದು ಇವರಿಗೆ ಸಲ್ಲಿಸುತ್ತದೆ. ಐ ಆರ್ ಬಿ ವಿಚಾರದಲ್ಲಿ ಒಮ್ಮೆಯೂ ಧ್ವನಿ ಎತ್ತದೆ ಅವರ ಪರವಾಗಿ ನಿಂತಿರುವುದೇ ಜಾಸ್ತಿ. ಶಿರಸಿ ಕುಮುಟಾ ರಸ್ತೆ ಬಗ್ಗೆ ಒಮ್ಮೆಯು ಮಾತನಾಡದೆ ಸುಮ್ಮನಿರುವುದು ನೋಡಿದರೆ ಇವರನ್ನ ಸಂಶಯದಿಂದ ಕಾಷಬೇಕಾಗುತ್ತದೆ..

ಕುಮಟಾಪಟ್ಟಣ ಹಾಗೂ ಹೊನ್ನಾವರ ಪಟ್ಟಣದ ಅವ್ಯವಸ್ಥೆ ಇವರ ಅವಧಿಯಲ್ಲಿ ಆಗಿದೆ. ಒಂದು ಶೌಚಾಲಯವನ್ನು ನಿರ್ಮಾಣ ಮಾಡಲು ಶಾಸಕರಿಂದ ಸಾಧ್ಯವಾಗಿಲ್ಲ ರಸ್ತೆಯಂತೂ ಸಂಪೂರ್ಣ ಕಳಪೆ ಕಾಮಗಾರಿಯಿಂದ ಕೂಡಿದೆ. ಪ್ರತಿ ವರ್ಷ ಮಳೆಗಾಲ ಬಂದರೆ ರಸ್ತೆಗಳಲ್ಲಿ ಹೊಂಡಗಳೆ ತೆರೆದುಕೊಳ್ಳುತ್ತದೆ.‌ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ದಾರಿ ದೀಪ ಇಲ್ಲದೆ ಜನರ ಪರದಾಡುವಂತಾಗಿದೆ. ಅವರ ಅವಧಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ಮ ಮಾತನಾಡಲು ನಾನು ತಯಾರಿದ್ದೇನೆ ಸಾಹೇಬರು ಯಾವುದಾದರೂ ವೇದಿಕೆ ಕಲ್ಪಿಸಿಕೊಟ್ಟರೆ ಚರ್ಚೆಗೆ ಬರಲು ಸಿದ್ಧ ಎಂದು ಪತ್ರಿಕಾ ಪ್ರಕಟಣೆ ಮೂಲಕ ಶಾಸಕರಿಗೆ ನೇರವಾಗಿ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಕುಮಟಾ ಪುರಸಭೆ ಮುಖ್ಯಾಧಿಕಾರಿ ವಿರುದ್ದ ಸಿಬ್ಬಂದಿ ಯಿಂದ ಕುರುಕು ಆರೋಒ