ರೈತರ ಹಿತಾಸಕ್ತಿಯನ್ನು ಪ್ರಮುಖವಾಗಿ ಪರಿಗಣಿಸಿ ಸಹಕಾರಿ ಸಂಸ್ಥೆಗಳು ಕೆಲಸ ಮಾಡುವುದು ಕಾಲದ ಅವಶ್ಯಕತೆ. ಈ ಗುರಿಯನ್ನು ಸಾಧಿಸಲು ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕಿನ ಪ್ರಾಮಾಣಿಕ ಸಹಕಾರ ಅತ್ಯಂತ ಅಗತ್ಯವಾಗಿದೆ. ಬ್ಯಾಂಕ್ ಕಾರ್ಯವೈಖರಿ ಉತ್ತಮವಾಗಲು ದಕ್ಷ ಆಡಳಿತ ಮತ್ತು ಅನುಭವಿಗಳಾದ ನಿರ್ದೇಶಕರ ಮಾರ್ಗದರ್ಶನ ಅಗತ್ಯವಾಗಿದೆ. 

ಈ ರೀತಿಯ ಗುಣಲಕ್ಷಣಗಳು ಸರಸ್ವತಿ ಎನ್. ರವಿ ಅವರಲ್ಲಿ ಸ್ಪಷ್ಟವಾಗಿ ಕಾಣುತ್ತವೆ. ಶಿರಸಿಯ ಸ್ಕೋಡ್‌ವೆಸ್ ಸಹಕಾರಿ ಸಂಘದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಎಂಬಿಎ ಪದವೀಧರರು. ಹಣಕಾಸು ಹಾಗೂ ನಿರ್ವಹಣಾ ಕ್ಷೇತ್ರಗಳಲ್ಲಿ ತಜ್ಞತೆಗೆ ಜೊತೆಗೆ, ನಿರಂತರ ಅಧ್ಯಯನ ಹಾಗೂ ಹೊಸ ಆವಿಷ್ಕಾರಗಳಿಗೆ ಬದ್ಧರಾಗಿದ್ದಾರೆ. ಅವರ ಆಲೋಚನಾ ಶೈಲಿ ಸಹಕಾರಿ ಕ್ಷೇತ್ರಕ್ಕೆ ನವ ಚೈತನ್ಯ ನೀಡುತ್ತಿದೆ.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಮಂಡಳಿಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅನುಭವದಿಂದ ಅವರು ಸಹಕಾರಿ ವ್ಯವಸ್ಥೆಯ ಒಳಹೊರಗಳನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. 11 ವರ್ಷಗಳ ವ್ಯಾಪಕ ಅನುಭವವನ್ನು ಹೊಂದಿರುವ ಸರಸ್ವತಿ ಅವರು, ಡಿಸಿಸಿ ಬ್ಯಾಂಕ್ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ನಂಬಿಕೆ ಕೃಷಿಕ ವಲಯದಲ್ಲಿ ಮೂಡಿದೆ.

ರೈತರಿಗೆ ಸಮಯಕ್ಕೆ ಸಾಲದ ಅನುಕೂಲ, ಪ್ರಕೃತಿ ವೈಪರೀತ್ಯದಿಂದ ಉಂಟಾಗುವ ಹಾನಿಗೆ ಪರಿಹಾರ, ಮತ್ತು ಬೆಳೆ ವಿಮೆ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ — ಇವುಗಳೆಲ್ಲ ಸುಧಾರಿತ ಸಹಕಾರಿ ವ್ಯವಸ್ಥೆಯ ಭಾಗವಾಗಬೇಕು ಎಂಬ ಅಭಿಪ್ರಾಯವನ್ನು ವಿಜಯಲಕ್ಷ್ಮೀ ಹೆಗಡೆ ಡೊಂಬೆಕಾಯಿ ವ್ಯಕ್ತಪಡಿಸಿದ್ದಾರೆ.

ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲದ ಸರಸ್ವತಿ ಎನ್. ರವಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸುತ್ತಿದ್ದಾರೆ. ಜನಪರ ನಿಲುವು, ಸಹಕಾರದ ಮನೋಭಾವ ಹಾಗೂ ಹಿರಿಯರ ಆಶೀರ್ವಾದ ಪಡೆದಿರುವ ಅವರ ನಾಯಕತ್ವದ ಮೇಲೆ ಸ್ಥಳೀಯರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದು,ತುರ್ತು ಹಣಕಾಸು ಸಮಸ್ಯೆಗಳಲ್ಲಿ ಮಾರ್ಗದರ್ಶನ ನೀಡುವುದು, ಮತ್ತು ರೈತರ ಅಗತ್ಯಗಳಿಗೆ ತಕ್ಷಣ ಸ್ಪಂದಿಸುವ ಶಕ್ತಿ ಇರುವ ಕಾರಣ, “ಸರಸ್ವತಿ ಎನ್. ರವಿ ಅವರು ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಲಿ” ಎಂಬ ಆಶಯವನ್ನು ಕುಮಟಾದ ಸುನಂದಾ ಪೈ ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ :ಶಾಲೆಗಳಿಗೆ ಇನ್ನೂ ಹತ್ತು ದಿನ ರಜೆ ವಿಸ್ತರಣೆ :ಸಿ ಎಂ ಸಿದ್ದರಾಮಯ್ಯ