ಸುದ್ದಿಬಿಂದು ಬ್ಯೂರೋ ವರದಿ.
ಭಟ್ಕಳ : ತಾಲೂಕಿನ ಖಾಸಗಿ ನರ್ಸಿಂಗ್ ಹೋಂ ಒಂದರಲ್ಲಿ ಅಪರೂಪದ ಶಿಶು ಜನಿಸಿದ್ದು ಸ್ಥಳೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಮಗುವಿನ ಅಳು ಹಾಗೂ ಧ್ವನಿ ಸಾಮಾನ್ಯ ಶಿಶುಗಳಂತೆಯೇ ಇದ್ದರೂ,ದೇಹದ ಬಾಹ್ಯ ರೂಪ ವಿಭಿನ್ನವಾಗಿರುವುದರಿಂದ ಜನರಲ್ಲಿ ಚರ್ಚೆಗೆ ಕಾರಣವಾಗಿದೆ. ಮೂಲಗಳ ಪ್ರಕಾರ, ಭಟ್ಕಳದಲ್ಲಿ ವಾಸಿಸುತ್ತಿರುವ ಮುಸ್ಲಿಂ ದಂಪತಿಗಳ ಮೂರನೇ ಪುತ್ರಿಯಾಗಿರುವ ಈ ಶಿಶುವನ್ನು ಮೊದಲಿಗೆ ಸ್ಥಳೀಯ ನರ್ಸಿಂಗ್ ಹೋಂನಲ್ಲಿ ನೋಡಿಕೊಳ್ಳಲಾಗಿತ್ತು.ನಂತರ ಹೆಚ್ಚಿನ ತಾಂತ್ರಿಕ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಮಗುವಿನ ಜನನ ಸಮಯ ಹಾಗೂ ಇತ್ತೀಚೆಗೆ ಸಂಭವಿಸಿದ ಚಂದ್ರಗ್ರಹಣವನ್ನು ಕೆಲವರು ಪರಸ್ಪರ ತಾಳ್ಮೆಗೆ ಜೋಡಿಸುತ್ತಿದ್ದಾರೆ. ಆದರೆ ವೈದ್ಯಕೀಯ ತಜ್ಞರು ಇದೊಂದು ವೈಚಿತ್ರ್ಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಯಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿದ್ದು, ಚಿಕಿತ್ಸೆಯ ಕುರಿತು ಕುಟುಂಬಸ್ಥರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
Bhatkal: The birth of a rare baby at a private nursing home in the taluk has sparked curiosity in the local area.Although the baby’s cries and sounds are like those of a normal infant, the external appearance of the body is different, leading to discussions among the public. According to sources, this baby is the third child of a Muslim couple living in Bhatkal. Initially, the baby was cared for at the local nursing home, but was later transferred to a hospital in Manipal for more advanced medical tests and treatment.Some people are linking the baby’s birth time with the recent lunar eclipse. However, medical experts say this is an anomaly, and the baby is currently under strict medical supervision at Manipal Hospital. The family has high hopes for the treatment and recovery.
ಇದನ್ನೂ ಓದಿ:ಹಕ್ಕಿಗಾಗಿ ಮತ್ತೊಮ್ಮೆ ಹೋರಾಟಕ್ಕೆ ಇಳಿದ ಅರಣ್ಯವಾಸಿಗಳು: ಶಿರಸಿಯಲ್ಲಿ ಬೃಹತ್ ಪ್ರತಿಭಟನೆ