ಸುದ್ದಿಬಿಂದು ಬ್ಯೂರೋ ವರದಿ
ಜೊಯಿಡ, ಸೆಪ್ಟೆಂಬರ್ 30, 2025: ಉದ್ಯೋಗ ಹುಡುಕಾಟದಲ್ಲಿ ತೊಡಗಿದ್ದ ಜೊಯಿಡಾ ತಾಲೂಕಿನ ಕ್ಯಾಸಲ್‌ರಾಕ್ ಸರ್ಕಾರಿ ಆಸ್ಪತ್ರೆ ಹತ್ತಿರ ವಾಸವಿದ್ದ ರಮಾದೇವಿ ಎಂಬ ಗೃಹಿಣಿ, ಆನ್‌ಲೈನ್ `ವರ್ಕ್ ಫ್ರಮ್ ಹೋಮ್’ ಕೆಲಸದ ಭರವಸೆಗೆ ನಂಬಿ, ಒಟ್ಟು ₹2,49,249 ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ರಮಾದೇವಿ ಅವರು ಕೆಲಸವಿಲ್ಲದೇ ಕಂಗಾಲಾಗಿದ್ದ ಸಂದರ್ಭದಲ್ಲಿ ಆಗಸ್ಟ್ 19ರಂದು ಇನ್‌ಸ್ಟಾಗ್ರಾಮ್ ಮೂಲಕ ಅನನ್ಯ ಪಟೇಲ್ ಎಂಬಾತರ ಜೊತೆ ಸಂಪರ್ಕಕ್ಕೆ ಬಂದರು. “ಸಣ್ಣ ಸಣ್ಣ ಟಾಸ್ಕ್ ಮಾಡಿದರೆ ಹಣ ನೀಡುತ್ತೇವೆ” ಎಂದು ಭರವಸೆ ನೀಡಿದ ಅನನ್ಯ, ಮೊದಲಿಗೆ 120 ರೂ. ಹಾಗೂ ನಂತರ 200 ರೂ. ಅವರ ಖಾತೆಗೆ ಜಮಾ ಮಾಡಿದರು. ಯಾವುದೇ ಕೆಲಸವಿಲ್ಲದೆ 320 ರೂ. ಬಂದ ಹಿನ್ನೆಲೆಯಲ್ಲಿ ರಮಾದೇವಿ ಅವರು ನಂಬಿಕೆ ಬೆಳೆಸಿಕೊಂಡರು.
ಮೊದಲ ಹಂತದ ಮೋಸ
ಆಗಸ್ಟ್ 21ರಂದು ಅನನ್ಯ ಪಟೇಲ್, “500 ರೂ. ಹೂಡಿಕೆ ಮಾಡಿದರೆ 910 ರೂ. ಲಾಭ” ಎಂದು ಮತ್ತೊಂದು ಟಾಸ್ಕ್ ನೀಡಿದರು. ಇದಕ್ಕಾಗಿ ಬಿಟ್‌ಕಾಯಿನ್ ಖಾತೆ ತೆಗೆಯಬೇಕು ಎಂದು ಹೇಳಿ, ಸಾಯಿಲ್ ಹುಸೈ, ಪೂಜಾ, ರಾವಿ, ಬಿರೇಂದ್ರ ಕುಮಾರ್ ಮತ್ತು ದೀಪಾಂಕರ ದೇ ಅವರನ್ನು ಪರಿಚಯಿಸಿ ಟೆಲಿಗ್ರಾಂ ಗುಂಪೊಂದನ್ನು ರಚಿಸಿದರು.ಗುಂಪಿನಲ್ಲಿರುವ ಇತರರು ₹3,000, ₹10,000, ₹30,000 ಹೂಡಿಕೆ ಮಾಡಿದ ದಾಖಲೆಗಳನ್ನು ತೋರಿಸಿದ ನಂತರ, ರಮಾದೇವಿ ಕೂಡ ಹಣ ಹೂಡಲು ಮುಂದಾದರು.
ಈ ವೇಳೆ ಶ್ವೇತಾ ಎಂಬ ಹೆಣ್ಣುಮಗಳು ಪ್ರತ್ಯಕ್ಷವಾಗಿ, “ನೀವು ಹೂಡಿಕೆ ಮಾಡುವಾಗ ತಪ್ಪು ಮಾಡಿಕೊಂಡಿದ್ದೀರಿ. ಖಾತೆ ಸರಿಪಡಿಸಲು ₹50,000 ಹೆಚ್ಚುವರಿ ಹೂಡಿಕೆ ಮಾಡಬೇಕು” ಎಂದು ಹೇಳಿದರು. ನಂಬಿಕೆ ಬೆಳೆಸಿಕೊಂಡ ರಮಾದೇವಿ ಅವರು ₹50,000 ನೀಡಿದ ಬಳಿಕ, ಮತ್ತೆ ₹1 ಲಕ್ಷ ಹೂಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಒತ್ತಾಯಿಸಿದರು. ಒಟ್ಟು ₹1,93,700 ಹೂಡಿಕೆ ಮಾಡಿದರೂ ಕೇವಲ ₹6,230 ಮಾತ್ರ ಹಿಂದಿರುಗಿತು. ಉಳಿದ ಹಣ ವಂಚಕರು ಕಸಿದುಕೊಂಡರು.
ಎರಡನೇ ಭಾರೀ ಮೋಸ
ಮೊದಲ ಬಾರಿ ಮೋಸಕ್ಕೆ ಒಳಗಾದ ನಂತರವೂ,ರಮಾದೇವಿ ಅವರು ಮತ್ತೆ ಇನ್‌ಸ್ಟಾಗ್ರಾಮ್ ಮೂಲಕ ಕಾವ್ಯಾ ಅಗರವಾಲ್ ಎಂಬಾತರೊಂದಿಗೆ ಸಂಪರ್ಕಕ್ಕೆ ಬಂದರು.“₹800 ಹೂಡಿಕೆ ಮಾಡಿದರೆ ₹14,999 ಲಾಭ ಕೊಡುತ್ತೇವೆ” ಎಂದು ಹೇಳಿದ ಕಾವ್ಯಾ ಅವರ ಮಾತು ನಂಬಿ, ಅವರು ಮತ್ತಷ್ಟು ಹಣ ಹೂಡಿದರು. ನಂತರ “ನೀವು ಯುಎಸ್ ಡಾಲರ್ ವರ್ಗಾವಣೆ ಮಾಡಬೇಕು, ನಮ್ಮ ಕಂಪನಿ ಉದ್ಯೋಗಿಯಾಗಬೇಕು, ಜಿಎಸ್‌ಟಿ ಪಾವತಿಸಬೇಕು” ಎಂದು ಸುಳ್ಳು ಹೇಳಿ ಒಟ್ಟು ₹55,549 ಕಸಿದುಕೊಂಡರು.
ಮೋಸದ ವಿಚಾರ ಪತಿ ಬಳಿ ಬಿಚ್ಚಿಟ್ಟ ರಮಾದೇವಿ
ಎರಡು ಬಾರಿ ಮೋಸಕ್ಕೆ ಒಳಗಾಗಿ, ಬ್ಯಾಂಕ್ ಖಾತೆಯಲ್ಲಿದ್ದ ಎಲ್ಲಾ ಹಣ ಕಳೆದುಕೊಂಡ ರಮಾದೇವಿ, ಬೇರೆ ದಾರಿ ಕಾಣದೆ ಪತಿ ಸುರೇಶ ಅವರಿಗೆ ವಿಷಯವನ್ನು ತಿಳಿಸಿದ್ದಾರೆ.ನಂತರ ಅವರು 1930 ದೂರು ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಪ್ರಕರಣವನ್ನು ರಾಮನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಸದ್ಯ ಪೊಲೀಸರು ವಂಚಕರನ್ನು ಪತ್ತೆಹಚ್ಚಿ ಹಣ ವಾಪಸ್ ಪಡೆಯಲು ತನಿಖೆ ಕೈಗೊಂಡಿದ್ದಾರೆ.
Joida, September 30, 2025:
Ramadevi, a housewife residing near the Castle Rock Government Hospital in Joida taluk, lost a total of ₹2,49,249 after falling victim to an online work-from-home scam, according to reports.
Ramadevi, who was struggling financially due to unemployment, came into contact with a person named Ananya Patel via Instagram on August 19. Ananya promised her small tasks that would generate income. Initially, Ramadevi received ₹120 and later ₹200 directly into her account without doing any actual work, which built her trust in the scheme.
First Stage of Fraud On August 21, Ananya offered her another task, saying,“Invest ₹500 and earn ₹910 in return.”He further instructed her to open a Bitcoin account and introduced her to a Telegram group that included people named Soil Husai, Pooja, Ravi, Birendra Kumar, and Dipankar Dey.
The group members showed fake proofs of their own investments of ₹3,000, ₹10,000, and ₹30,000, luring Ramadevi into investing as well.
Later, a woman named Shweta intervened, claiming Ramadevi had made a mistake while investing. She demanded an additional ₹50,000 to correct the account issue. Believing this, Ramadevi paid the amount.
Soon after, they pressured her to invest another ₹1,00,000, promising even greater returns.In total, Ramadevi invested ₹1,93,700, but only ₹6,230 was returned to her. The rest of the money was stolen by the fraudsters.
Second Stage of Fraud Even after the first scam, Ramadevi again fell victim when she connected with another person named Kavya Agarwal on Instagram. Kavya promised, “Invest ₹800 and get a return of ₹14,999.”
After Ramadevi invested, Kavya demanded more money under various false pretexts — such as USD currency conversion, becoming a company employee, and GST payments.
Through these lies, Kavya managed to swindle ₹55,549 from Ramadevi.
Complaint Registered Having lost all her savings and facing financial devastation, Ramadevi finally revealed everything to her husband, Suresh.
They immediately called the 1930 fraud helpline and reported the incident. Following this, a case was registered at the Ramanagar Police Station.Police have begun an investigation to trace the scammers and recover the stolen money.
ಇದನ್ನೂ ಓದಿ: ಕೊಂಕಣ ರೈಲ್ವೆಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ : ಹಳದೀಪುರ ಬಳಿ ಘಟನೆ