ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರ ಕಲ್ಕಟ್ಟೆ ಬಳಿ ರೈಲ್ವೆಗೆ ತಲೆಕೊಟ್ಟು ವ್ಯಕ್ತಿ ಓರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ..

ಮೃತ ವ್ಯಕ್ತಿ ಹಳದೀಪುರ ಸಾಲಿಕೇರಿಯ ಗುಂದಾ ನಿವಾಸಿ ಹನುಮಂತ ತಿಮ್ಮು ಗೌಡ (42) ಎಂದು ಗುರುತಿಸಲಾಗಿದೆ. ಐದು ವರ್ಷಗಳ ಹಿಂದೆ ಆತನ ಪತ್ನಿ ತೀರಿಕೊಂಡಿದ್ದು, ಆ ಘಟನೆ ಬಳಿಕ ಆತನು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ. ಹೊನ್ನಾವರದ ಸೆಂಟ್ ಇನ್ನೇಶಿಯಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಆರೋಗ್ಯದಲ್ಲಿ ಚೇತರಿಸಿಕೊಂಡಿರಲಿಲ್ಲ.

ಇದೆ ಕಾರಣಕ್ಕೆ ಇಂದು ಸೋಮವಾರ   ಬೆಳಗ್ಗೆ ಮಂಗಳೂರಿನಿಂದ ಮಡಗಾವ್ ಕಡೆಗೆ ತೆರಳುತ್ತಿದ್ದ ಗೂಡ್ಸ್ ಟ್ರೈನ್‌ಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ಕುರಿತು ಮೃತನ ಅಣ್ಣ ಮಾದೇವ ತಿಮ್ಮು ಗೌಡ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ನೆಟ್ವರ್ಕ್ ಸಮಸ್ಯೆ: ಕರ್ನಾಟಕದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಗೋವಾದಲ್ಲಿ