ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ನಡುವೆ ಬಿರುಕು ಉಂಟಾಗಿರುವ ಲಕ್ಷಣಗಳು ಗೊಚರಿಸುತ್ತಿದೆ.. ಮೈತ್ರಿಗೂ ಮೊದಲು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದ ನಾಯಕರು ಮೈತ್ರಿ ಬಳಿಕ ಹೊಂದಾಣಿಕೆ ಮಾಡಿಕೊಂಡು ಒಂದೇ ವೇದಿಕೆಯನ್ನ ಹಂಚಿಕೊಳ್ಳುತ್ತಿದ್ದರು.ಕಳೆದ ಎರಡು ದಿನಗಳ ಹಿಂದೆ ನಡೆದ ಬಿಜೆಪಿ ವಿಜಯೋತ್ಸವ ನೋಡಿದರೆ ಎರಡು ಪಕ್ಷದಲ್ಲಿ ಯಾವುದು ಸರಿಯಾಗಿಲ್ಲ ಎನ್ನುವುದು ಕಂಡು ಬರುವಂತಾಗಿದೆ. ಇದರಿಂದಾಗಿ ಕುಮಟಾ ಕ್ಷೇತ್ರದಲ್ಲಿ ಮೈತ್ರಿ ಸವತಿ ಮಕ್ಕಳಾದರಾ ಜೆಡಿಎಸ್..? ಬಿಜೆಪಿ ಹೀಗೇಕೆ ಮಾಡಿತು ಎನ್ನುವ ಚರ್ಚೆ ಆರಂಭವಾಗಿದೆ..

ಹೈಕೋರ್ಟ್ ಶಾಸಕ ದಿನಕರ ಶೆಟ್ಟಿ ಅವರ ಚುನಾವಣಾ ಗೆಲುವಿಗೆ ಅಂತಿಮ ಮುದ್ರೆ ನೀಡಿದ್ದು ಬಳಿಕ, ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ನಡೆಸಿದರು. ಈ ವಿಜಯೋತ್ಸವ ಜೆಡಿಎಸ್ ಕಾರ್ಯಕರ್ತರ ಮನಸ್ಸಿಗೆ ಬೇಸರ ತಂದಿದ್ದು, ಸ್ಥಳೀಯ ಮಟ್ಟದಲ್ಲಿ ಅಸಮಾಧಾಕ್ಕೆ‌ ಕಾರಣವಾಗುವಂತೆ ಮಾಡಿದೆ ಎನ್ನಲಾಗಿದೆ..ಮೈತ್ರಿಗೂ ಮೊದಲು ದಿನಕರ ಶೆಟ್ಟಿ ವಿರುದ್ಧ ನಡೆದ ಕಾನೂನು ಹೋರಾಟದಲ್ಲಿ ಜೆಡಿಎಸ್ ಕೂಡ ಸಕ್ರಿಯವಾಗಿತ್ತು. ಆದರೆ ಮೈತ್ರಿ ಬಳಿಕ ತೀರ್ಪು ಬಂದ ತಕ್ಷಣ ಬಿಜೆಪಿ ವಿಜಯೋತ್ಸವ ಆಚರಿಸಿದ್ದು, ಜೆಡಿಎಸ್ ಕಾರ್ಯಕರ್ತರಲ್ಲಿ ತಾವು ‘ಸವತ್ತಿ ಮಕ್ಕಳು’ ಆಗಿಬಿಟ್ಟಾರಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದೆ.

ಸ್ಥಳೀಯ ಜೆಡಿಎಸ್ ನಾಯಕರು, ಕಾರ್ಯಕರ್ತರು ಬಿಜೆಪಿ ನಡೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಒಳಗೊಳಗೆ ಮೈತ್ರಿ ಬಿರುಕು ಬಿಟ್ಟಿದೆ ಎನ್ನುವ ವದಂತಿ ಹರಿದಾಡುತ್ತಿದೆ. ಇದರ ಪರಿಣಾಮವಾಗಿ, ಕುಮಟಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಮೈತ್ರಿ ಪಕ್ಷಗಳ ನಡುವಿನ ಸಂಬಂಧ ಇನ್ನಷ್ಟು ಗೊಂದಲಕ್ಕೆ ಕಾರಣವಾಗುವ ಸಾಧ್ಯತೆಗಳು ವ್ಯಕ್ತವಾಗಿವೆ.

ರಾಜ್ಯ ಮಟ್ಟದಲ್ಲೂ ಈ ಬೆಳವಣಿಗೆ ಚರ್ಚೆಗೆ ಗ್ರಾಸವಾಗಿದ್ದು, ಮೈತ್ರಿಯ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ತೀವ್ರಗೊಂಡಿದೆ.

Kumta: Rift Emerging Between BJP-JDS Alliance in Constituency
Kumta: Signs of a rift are becoming evident in the BJP-JDS alliance within the Kumta Assembly constituency. Before the alliance, leaders from both parties were fierce rivals, often clashing publicly. However, after joining hands, they were seen sharing the same stage and presenting a united front.

The recent BJP victory celebration, held just two days ago, has raised eyebrows and sparked speculation that all is not well between the two sides. This has led to a growing debate over whether the JDS has been sidelined and reduced to a “stepchild” in the alliance.

Following the Karnataka High Court’s final verdict validating MLA Dinkar Shetty’s election victory, BJP workers organized a grand celebration. This move reportedly upset JDS workers, creating resentment at the grassroots level.

Before the alliance, JDS leaders had actively supported the legal battle against Dinkar Shetty. However, after the verdict, the BJP’s independent celebration — without the involvement of JDS — has left their workers questioning their relevance in the partnership.

Local JDS leaders and workers are openly expressing dissatisfaction, while behind the scenes, rumors of cracks in the alliance are spreading rapidly. Political observers believe this tension could escalate, leading to further conflicts between the two parties in the coming days.

At the state level, this development has become a hot topic, fueling curiosity about the future of the BJP-JDS alliance and whether it can withstand growing internal strains.

ಇದನ್ನೂ ಓದಿ ಪಾಕಿಸ್ತಾನಕ್ಕೆ ಪಾಠ ಕಲಿಸಿದ ಟೀಂ ಇಂಡಿಯಾ – 9ನೇ ಕಿರೀಟ ಭಾರೀ ಸಂಭ್ರಮ