ಸುದ್ದಿಬಿಂದು ಬ್ಯೂರೋ ವರದಿ
ಧಾರವಾಡ: ಖ್ಯಾತ ಯೂಟ್ಯೂಬರ್ ಖಾಜಾ ಅಲಿಯಾಸ್ ಮುಕಳೆಪ್ಪ ಅವರ ವಿವಾಹ ವಿವಾದ ದಿನೇದಿನೇ ಗಂಭೀರ ತಿರುವು ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಕಳೆಪ್ಪ ಮತ್ತು ಅವರ ಕುಟುಂಬಕ್ಕೆ ಬೆಂಬಲವಾಗಿ ಕರ್ನಾಟಕ ರಾಜ್ಯ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಣ್ಣ ಶಿವಳ್ಳಿ ಅವರು ಮುಕಳೆಪ್ಪನ ಮನೆಗೆ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ದೈರ್ಯ ತುಂಬಿ ಮನೆಗೆ ಪೊಲೀಸ್ ಭದ್ರತೆ ನೀಡಬೇಕೆಂದು ಒತ್ತಾಯಿಸಿದ್ದಾರೆ..

ಮುತ್ತಣ್ಣ ಶಿವಳ್ಳಿ ಅವರು ಮುಕಳೆಪ್ಪ ಹಾಗೂ ಅವರ ಕುಟುಂವಸ್ಥರನ್ನ ಸಮಾಧಾನ ಪಡಿಸಿ,ಭಯದಲ್ಲಿರುವ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾತನಾಡಿ, “ಇದು ಎರಡು ಕುಟುಂಬಗಳ ನಡುವಿನ ವಿಷಯ. ಸಮಾಜದ ಕೆಲವು ದುರುದ್ದೇಶಿತ ಅಂಶಗಳು ಧರ್ಮದ ಹೆಸರಿನಲ್ಲಿ ಯುವಕರ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಖಂಡನೀಯ. ಮುಕಳೆಪ್ಪ ಮತ್ತು ಗಾಯತ್ರಿ ಇಬ್ಬರೂ ಕಾನೂನು ಬದ್ಧವಾಗಿ ವಿವಾಹವಾಗಿದ್ದಾರೆ. ಆದ್ದರಿಂದ ಅವರಿಗೆ ಯಾವುದೇ ರೀತಿಯ ಕಿರುಕುಳ ನೀಡುವುದು ಸರಿಯಲ್ಲ.

ಮುಕಳೆಪ್ಪನ ಮನೆಗೆ ತಕ್ಷಣವೇ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದ ಅವರು. “ಸಾಮಾಜಿಕ ಜಾಲತಾಣಗಳಲ್ಲಿ ಮುಕಳೆಪ್ಪನ ವಿರುದ್ಧ ದುರುದ್ದೇಶಪೂರಿತ ಕಮೆಂಟ್‌ಗಳು ಹರಿದಾಡುತ್ತಿವೆ. ಕುಟುಂಬದ ಮೇಲೆ ಬೆದರಿಕೆ ಸಂದೇಶಗಳು ಬರುತ್ತಿವೆ. ಇದರಿಂದ ಯಾವುದೇ ಅಶಾಂತಿ ಉಂಟಾಗುವ ಮುನ್ನವೇ ಪೊಲೀಸರು ಕ್ರಮ ಕೈಗೊಳ್ಳಬೇಕು,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅದೇ ರೀತಿ ಸರ್ಕಾರಕ್ಕೂ ಮನವಿ ಸಲ್ಲಿಸಿರುವ ಮುತ್ತಣ್ಣ ಶಿವಳ್ಳಿ, “ಈ ಪ್ರಕರಣವನ್ನು ರಾಜಕೀಯ ಅಥವಾ ಧಾರ್ಮಿಕ ದೃಷ್ಠಿಯಿಂದ ನೋಡುವ ಬದಲು, ಕಾನೂನುಬದ್ಧವಾಗಿ ಪರಿಹರಿಸುವುದು ಮುಖ್ಯ. ಕುಟುಂಬದ ಸುರಕ್ಷತೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದಿದ್ದಾರೆ. ಮುತ್ತಣ್ಣ ಶಿವಳ್ಳಿ ಅವರು ಮುಕಳೆಪ್ಪನ ಬೆಂಬಲದಲ್ಲಿ ನಿಂತಿರುವುದು ಈ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಅಹಿಂದ ಸಂಘಟನೆಯ ಬೆಂಬಲದಿಂದ ಮುಕಳೆಪ್ಪನ ಕುಟುಂಬಕ್ಕೆ ಸದ್ಯ ಮಾನಸಿಕ ಧೈರ್ಯ ಸಿಕ್ಕಿರುವಂತಾಗಿದೆ.

ಘಟನೆ ಹಿನ್ನೆಲೆ:
ಮುಕಳೆಪ್ಪ, ಖಾಜಾ ತಮ್ಮ ಯೂಟ್ಯೂಬ್ ಕಾಮಿಡಿ ವೀಡಿಯೊಗಳಿಂದ ಕರ್ನಾಟಕದಲ್ಲಿ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ಅವರು ಗಾಯತ್ರಿ ಎಂಬ ಯುವತಿಯನ್ನು ವಿವಾಹವಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಉಂಟಾಗಿದೆ. ಕೆಲವರು ಈ ವಿವಾಹವನ್ನು ಲವ್ ಜಿಹಾದ್ ಎಂದು ಆರೋಪಿಸಿದರೆ, ಮುಕಳೆಪ್ಪ ಸ್ವತಃ ಬಂದು ಈ ಆರೋಪಗಳನ್ನು ಖಂಡಿಸಿದ್ದಾರೆ.

AHINDA Leader Demands Police Protection for YouTuber Mukaleppa Amid Marriage Controversy
Dharwad: The controversy surrounding popular YouTuber Khaja, also known as Mukaleppa, over his interfaith marriage is taking a more serious turn day by day. In a show of support, Karnataka State AHINDA Organization President Muttanna Shivalli visited Mukaleppa’s residence, spoke with his family, and urged the authorities to provide immediate police protection to ensure their safety.

During his visit, Shivalli consoled Mukaleppa and his family, who have been living in fear due to increasing threats. He emphasized that this issue is purely between two families and condemned certain elements in society who are interfering in the personal lives of young individuals under the guise of religion.

“Mukaleppa and Gayathri have legally married each other, and no one has the right to harass or intimidate them,” Shivalli stated. He strongly demanded that the police take proactive steps to prevent any untoward incidents. “There are malicious and abusive comments spreading on social media against Mukaleppa, and the family is also receiving threatening messages. Before this escalates into violence or unrest, the police must act swiftly,” he said.

Shivalli further appealed to the government to handle the matter lawfully, rather than through political or religious lenses. “It is the government’s responsibility to ensure the safety and security of this family,” he added.

The open support extended by the AHINDA organization has given Mukaleppa’s family a much-needed sense of relief and mental strength amid the ongoing controversy. Shivalli’s intervention is seen as adding a new dimension to the case, potentially influencing how it is addressed by both authorities and the public.

ಇದನ್ನೂ ಓದಿ: ಜಲಪಾದಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ಪತ್ತೆ