ಬೆಂಗಳೂರು: ಚಿನ್ನ ಹಾಗೂ ಬೆಳ್ಳಿಯ ದರ ದಿನದಿಂದ ದಿನಕ್ಕೆ ಹಾವು-ಏಣಿಯ ಆಟದಂತೆ ಏರಿಳಿತ ಕಾಣಿಸುತ್ತಿದೆ. ಇ ನಡುವೆ, ಇದು ದಸರಾ ಸಮಯದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲವು ದಿನಗಳ ಏರಿಕೆಯ ಬಳಿಕ ಮತ್ತೆ ಇಳಿಕೆಯ ಹಾದಿ ಹಿಡಿದಿದೆ. ದಸರಾ ಮತ್ತು ದೀಪಾವಳಿ ಹಬ್ಬಗಳು ಹತ್ತಿರವಾಗುತ್ತಿದ್ದಂತೆ ಖರೀದಿದಾರರ ಸಂಖ್ಯೆಯೂ ಏರಿಕೆಯಾಗುವ ನಿರೀಕ್ಷೆಯಿದೆ.
ಇಂದು (ಸೆಪ್ಟೆಂಬರ್ 13) ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ಮತ್ತು ಬೆಳ್ಳಿಯ ದರಗಳಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದ್ದು, ನಿನ್ನೆಗಿಂತ ತುಸು ಇಳಿಕೆಯಾಗಿರುವುದು ಗಮನಾರ್ಹವಾಗಿದೆ.
ಇಂದಿನ 8 ಗ್ರಾಂ ಬಂಗಾರ ದರ
22 ಕ್ಯಾರೆಟ್ – ₹81,520
24 ಕ್ಯಾರೆಟ್ (ಅಪರಂಜಿ) – ₹88,936
ಇಂದಿನ 10 ಗ್ರಾಂ ಬಂಗಾರ ದರ
22 ಕ್ಯಾರೆಟ್ – ₹1,01,900 (ನಿನ್ನೆಗಿಂತ ₹100 ಇಳಿಕೆ)
24 ಕ್ಯಾರೆಟ್ (ಅಪರಂಜಿ) – ₹1,11,170
ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಬಂಗಾರ ದರ (10 ಗ್ರಾಂ)
ಬೆಂಗಳೂರು – ₹1,01,900
ಚೆನ್ನೈ – ₹1,02,200
ಮುಂಬೈ – ₹1,01,900
ಕೋಲ್ಕತ್ತಾ – ₹1,01,900
ನವದೆಹಲಿ – ₹1,02,050
ಹೈದರಾಬಾದ್ – ₹1,01,900
ವಿವಿಧ ನಗರಗಳಲ್ಲಿ 24 ಕ್ಯಾರೆಟ್ ಬಂಗಾರ ದರ (10 ಗ್ರಾಂ)
ಬೆಂಗಳೂರು – ₹1,11,170
ಚೆನ್ನೈ – ₹1,11,709
ಮುಂಬೈ – ₹1,11,170
ಕೋಲ್ಕತ್ತಾ – ₹1,11,170
ನವದೆಹಲಿ – ₹1,11,300
ಹೈದರಾಬಾದ್ – ₹1,11,170
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ. ಲೆಕ್ಕದಲ್ಲಿ)
ಇಂದು ₹1,000 ಏರಿಕೆ
ಬೆಂಗಳೂರು – ₹1,33,000
ಚೆನ್ನೈ – ₹1,43,000
ಮುಂಬೈ – ₹1,33,000
ಕೋಲ್ಕತ್ತಾ – ₹1,33,000
ನವದೆಹಲಿ – ₹1,33,000
ಹೈದರಾಬಾದ್ – ₹1,43,000
ಮುಂಬರುವ ದಿನಗಳ ನಿರೀಕ್ಷೆ
ದಸರಾ, ದೀಪಾವಳಿ ಮುಂತಾದ ಹಬ್ಬಗಳು ಹತ್ತಿರವಾಗಿರುವುದರಿಂದ ಖರೀದಿ ಹೆಚ್ಚಾಗುವ ನಿರೀಕ್ಷೆಯಿದ್ದು, ಮುಂದಿನ ದಿನಗಳಲ್ಲಿ ದರ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಅಥವಾ ಏರಿಕೆಯ ಸಾಧ್ಯತೆ ಇರುವುದರಿಂದ ಖರೀದಿದಾರರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ತೀರ್ಮಾನ ಮಾಡುವುದು ಸೂಕ್ತ.
ಒಟ್ಟಿನಲ್ಲಿ, ಈಗಿನ ದರ ಹಬ್ಬದ ಶಾಪಿಂಗ್‌ಗಾಗಿ ಅನುಕೂಲಕರವಾಗಿದೆ.ಈ ಸಂದರ್ಭದಲ್ಲಿ ಬಂಗಾರ ಮತ್ತು ಬೆಳ್ಳಿ ಖರೀದಿಸುವುದು ಉತ್ತಮ ಆಯ್ಕೆಯಾಗಿದೆ.