ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಭಾದ್ರಪದ ಮಾಸದ ಶುಕ್ಲಪಕ್ಷ ಪೂರ್ಣಿಮೆಯ ದಿನವಾದ ಸೆಪ್ಟೆಂಬರ್ 7, 2025 ಭಾನುವಾರ ರಾತ್ರಿ ಮಹತ್ವದ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಈ ಚಂದ್ರಗ್ರಹಣವು ಧಾರ್ಮಿಕ ಹಾಗೂ ಖಗೋಳಶಾಸ್ತ್ರೀಯ ದೃಷ್ಟಿಯಿಂದ ಪ್ರಮುಖವಾಗಿದೆ.
ಗ್ರಹಣವು ರಾತ್ರಿ 9.56 ಗಂಟೆಗೆ ಆರಂಭವಾಗಿ, ರಾತ್ರಿ 11.42ಕ್ಕೆ ಮಧ್ಯಕಾಲ ತಲುಪುತ್ತದೆ. ಪೂರ್ಣ ಚಂದ್ರಗ್ರಹಣದ ಅಂತ್ಯ ಬೆಳಿಗ್ಗೆ 1.27 ಗಂಟೆಗೆ ಆಗಲಿದೆ.
ಭೋಜನ ನಿಯಮಗಳು:ಗ್ರಹಣದ ದಿನದಲ್ಲಿ ಸೂರ್ಯೋದಯದಿಂದ ಮಧ್ಯಾಹ್ನ 12.15 ಗಂಟೆಯವರೆಗೆ ಮಾತ್ರ ಭೋಜನಕ್ಕೆ ಅವಕಾಶವಿದೆ. ಅಶಕ್ತರು, ವೃದ್ಧರು, ರೋಗಿಗಳು ಮಧ್ಯಾಹ್ನ 3.15 ಗಂಟೆಯವರೆಗೆ ಆಹಾರ ಸೇವಿಸಬಹುದು. ವಯಸ್ಸಾದ ವೃದ್ಧರು ಹಾಗೂ ಗರ್ಭಿಣಿಯರಿಗೆ ಈ ನಿಯಮಗಳು ಅನ್ವಯಿಸುವುದಿಲ್ಲ.
ಶಾಂತಿ ಸಂಬಂಧಿಸಿದ ಸೂಚನೆಗಳು:
ಶತಭಿಷಾ ಮತ್ತು ಪೂರ್ವಾಭಾದ್ರ ನಕ್ಷತ್ರದವರು, ಜೊತೆಗೆ ಕುಂಭ ಹಾಗೂ ಮೀನ ರಾಶಿಯವರು, ಚಂದ್ರಗ್ರಹಣದ ಸಂದರ್ಭದಲ್ಲಿ ವಿಶೇಷ ಶಾಂತಿ ಕ್ರಮ ಕೈಗೊಳ್ಳುವುದು ಶ್ರೇಯಸ್ಕರ.
ಗ್ರಹಣದ ಮುನ್ನ ಈ ಶ್ಲೋಕವನ್ನು ಬರೆದು ಇಟ್ಟುಕೊಂಡು,ಗ್ರಹಣಾನಂತರ ಯಥಾಶಕ್ತಿ ಎರಡು ತಾಂಬೂಲ ದಕ್ಷಿಣೆ ಸಮೇತ ದೇವಾಲಯ ಅಥವಾ ಸತ್ಪಾತ್ರರಿಗೆ ದಾನ ಮಾಡಬಹುದಾಗಿದೆ..ಇದೇ ಸಂದರ್ಭದಲ್ಲಿ ಭಕ್ತರು ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಳ್ಳಲು, ಉಪವಾಸ ಆಚರಿಸಲು ಹಾಗೂ ಪಾರಂಪರಿಕ ವಿಧಿ-ವಿಧಾನಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ:ದೇಶಪಾಂಡೆ ಹೇಳಿಕೆ ವಿರುದ್ಧ ಎಲ್ಲೆಡೆ ಆಕ್ರೋಶ : ರಾಜೀನಾಮೆಗೆ ತೀವ್ರ ಒತ್ತಾಯ