ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ತಾಲೂಕಿನ ಮಳಲಿ ಗ್ರಾಮದ ಹೊಸಮನೆ ಬಳಿ ಕಾಡು ಪ್ರಾಣಿ ಭೇಟೆ ಆಡಲು ಇರಿಸಲಾಗಿದ್ದ ನಾಡ ಬಾಂಬ್ ಸಿಡಿದು ಹಸುವೊಂದು ಮಾರಣಾಂತಿಕವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಹೊಸಮನೆ ನಿವಾಸಿ ಲಕ್ಷ್ಮಣ ಗೌಡ ಅವರಿಗೆ ಸೇರಿದ ಈ ಹಸು, ಅಕೇಶಿಯಾ ತೋಪಿನಲ್ಲಿ ಮೇಯುತ್ತಿದ್ದಾಗ ಆಹಾರವೆಂದು ತಿಳಿದು ಬಾಂಬ್ ಅನ್ನು ಬಾಯಿಯಲ್ಲಿ ಹಾಕಿಕೊಂಡಿದೆ. ಬಾಂಬ್ ಸ್ಫೋಟದ ರಭಸಕ್ಕೆ ಹಸುವಿನ ಮುಖದ ಭಾಗಗಳು ಛಿದ್ರಗೊಂಡಿವೆ. ಹಸು ಆಹಾರ ಸೇವಿಸಲಾಗದೆ, ನೀರು ಕುಡಿಯಲಾಗದೆ ಸಾವಿಗೂ ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ಈ ರೀತಿಯ ಘಟನೆಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿದ್ದು, ಅನೇಕ ಜಾನುವಾರುಗಳು ನಾಡ ಬಾಂಬ್‌ಗಳಿಗೆ ಬಲಿಯಾಗುತ್ತಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುರಿತು ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ. ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : Bhatkal/ಭಟ್ಕಳದಲ್ಲಿ ನಿಷೇಧಿತ ಇ-ಸಿಗರೇಟ್ ವಶಕ್ಕೆ, ಆರೋಪಿ ಬಂಧನ