ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ನಗರದ ಹೂವಿನ ಚೌಕದ ಟೌನ್ ಸೆಂಟರ್‌ನಲ್ಲಿರುವ ರಿಮ್ಸ್ ಅಂಗಡಿಯಲ್ಲಿ ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್‌ಗಳು ಹಾಗೂ ನಿಕೋಟಿನ್ ವೆಪ್ಸ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಬಂಧಿಸಿ, ಒಟ್ಟು 2,39 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಭಟ್ಕಳದ ಮುಗ್ದುಂ ಕಾಲೋನಿಯ ಮಕ್ಬುಲ್ ಇಸ್ಮಾಯಿಲ್ ಮಡಿಕಲ್,ಬಂದರು ರಸ್ತೆ, ಗುಲ್ಜಾರ್ ಸ್ಟ್ರೀಟ್,ಭಟ್ಕಳ ಎಂಬಾತ ಯಾವುದೇ ಪರವಾನಿಗೆಯಿಲ್ಲದೆ ನಿಷೇಧಿತ ವಸ್ತುಗಳನ್ನು ತನ್ನ ಅಂಗಡಿಯಲ್ಲಿ ಸಂಗ್ರಹಿಸಿಕೊಡಿರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ ಪತ್ತೆ ಹಚ್ಚಿದ್ದಾರೆ..
ದಾಳಿಯ ವೇಳೆ ಒಟ್ಟು 51ಎಲೆಕ್ಟ್ರಾನಿಕ್ ಸಿಗರೇಟ್‌ಗಳು ಹಾಗೂ 154 ನಿಕೋಟಿನ್ ಲಿಕ್ವಿಡ್ ರಿಫಿಲ್‌ಗಳನ್ನು (Vapes) ವಶಕ್ಕೆ ಪಡೆಯಲಾಗಿದೆ. ಗುನ್ನಾ ನಂ: 102/2025, ಕಲಂ: 7 ಮತ್ತು 8, Prohibition of Electronic Cigarettes Act – 2019 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ (ಐಪಿಎಸ್), ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ಜಿ, ಹೆಚ್ಚುವರಿ ಎಸ್‌ಪಿ-2 ಜಗದೀಶ ನಾಯ್ಕ ಮತ್ತು ಭಟ್ಕಳ ಉಪಾಧೀಕ್ಷಕ ಮಹೇಶ್ ಎಂ.ಕೆ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಭಟ್ಕಳ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಮ್ ಅವರ ನೇತೃತ್ವದಲ್ಲಿ, ಪಿಎಸ್‌ಐ ನವೀನ್ ಎಸ್. ನಾಯ್ಕ, ಪಿಎಸ್‌ಐ ತಿಮ್ಮಪ್ಪ ಎಸ್. ಸೇರಿದಂತೆ ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಕಾರ್ಯಾಚರಣೆಯಲ್ಲಿ ಸಿ.ಹೆಚ್.ಸಿ ದಿನೇಶ್ ನಾಯ್ಕ, ಸಿ.ಹೆಚ್.ಸಿ ದೀಪಕ ನಾಯ್ಕ, ಸಿ.ಪಿ.ಸಿ ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ, ಜಗದೀಶ ನಾಯ್ಕ, ಕೃಷ್ಣಾ ಎನ್.ಜಿ, ಮಲ್ಲಿಕಾರ್ಜುನ ಉಟಗಿ, ಕಿರಣ ಪಾಟೀಲ್, ಲೊಕೇಶ ಕತ್ತಿ, ರೇವಣಸಿದ್ದಪ್ಪ ಮಾಗಿ, ವಿಶ್ವನಾಥ ಬೇವಿನಗಿಡ, ಅಮಗೋತ ಮಹೇಶ್ ನಾಯ್ಕ ಸೇರಿದಂತೆ ಹಲವು ಸಿಬ್ಬಂದಿ ಸಹಕರಿಸಿದರು.ಪೊಲೀಸರು ಆರೋಪಿಯ ವಿರುದ್ಧ ತನಿಖೆ ಮುಂದುವರಿಸಿದ್ದಾರೆ.
Student suicide/ಪೊಲೀಸ್ ಅಧಿಕಾರಿ ಮಗಳು ಆತ್ಮಹತ್ಯೆ ; ಉತ್ತರ ಕನ್ನಡದಲ್ಲಿ ಘಟನೆ