ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರಕನ್ನಡ ಜಿಲ್ಲೆಗೆ, ಅದರಲ್ಲೂ ಕರಾವಳಿ ಭಾಗಕ್ಕೆ ಯಾವುದೇ ಒಂದು ಯೋಜನೆ ಬಂದರೂ ಕೆಲ ಡೊಂಗಿ ಹೋರಾಟಗಾರರು “ಪಂಚೆ ಕಟ್ಟಿ, ದಿಢೀರ ಮೇಲಿನಿಂದ ಕೆಳಗೆ ಹೋರಾಟಕ್ಕೆ ಇಳಿಯುತ್ತಾರೆ.” ಆದರೆ ಜಿಲ್ಲೆಯಲ್ಲಿ ಸುಸಜ್ಜಿತ (ಸೂಪರ್ ಸ್ಪೆಷಾಲಿಟಿ) ಆಸ್ಪತ್ರೆ ಅಗಬೇಕು ಎನ್ನುವ ವಿಷಯದಲ್ಲಿ ಮಾತ್ರ ಹೋರಾಟ ನಡೆಸುತ್ತಿಲ್ಲ ಎಂಬ ಚರ್ಚೆ ಇತ್ತೀಚಿನ ದಿನಗಳಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.
ಕೇಣಿ ಬಂದರು ವಿಚಾರಕ್ಕೆ ಸಂಬಂಧಿಸಿ ಕೆಲ ದಿನಗಳ ಹಿಂದೆ ಅಂಕೋಲಾದಲ್ಲಿ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ, ಸ್ಥಳೀಯರ ವಿರೋಧಕ್ಕಿಂತ ಹೆಚ್ಚು ಇಂತಹ ಡೊಂಗಿ ಹೋರಾಟಗಾರರ ವಿರೋಧದ ಮಾತುಗಳು ಕೇಳಿಬಂದವು.ಆದರೆ ಸ್ಥಳೀಯ ಜನರು ಯೋಜನೆ ಕುರಿತು ಅಷ್ಟಾಗಿ ವಿರೋಧಿಸುತ್ತಿರುವಂತೆ ಕಂಡುಬಂದಿಲ್ಲ.
ಇದಕ್ಕೂ ಮೊದಲು, ಎರಡು ದಶಕಗಳ ಹಿಂದೆ ಕರಾವಳಿ ಮತ್ತು ಮಲೆನಾಡಿನ ಸಂಪರ್ಕ ಕೊಂಡಿಯಾಗಬೇಕಿದ್ದ ಅಂಕೋಲಾ–ಹುಬ್ಬಳ್ಳಿ ರೈಲ್ವೆ ಯೋಜನೆ ಕೈತಪ್ಪಿ, ಜಿಲ್ಲೆಯ ಆರ್ಥಿಕತೆಗೆ ದೊಡ್ಡ ಹೊಡೆತ ಬಿಳುವಂತೆ ಮಾಡಿ ನ್ಯಾಯಾಲಯದಿಂದ ಛೀ ಮಾರಿ ಹಾಕಿಸಿಕೊಂಡ ಡೊಂಗಿ ಹೋರಾಟಗಾರರು ಮತ್ತೆ ಕೂಡ ಈ ಯೋಜನೆಗೆ ವಿರೋಧ ಮಾಡಲು ಬಂದಿರುವುದನ್ನ ನೋಡಿದ್ದರೆ ಇವರ ಉದ್ದೇಶ ಬೇರೇನೆ ಇದೆ ಎನ್ನುವಂತೆ ಕಾಣತ್ತಿದೆ.
ಕರಾವಳಿ ಜಿಲ್ಲೆಗೆ ಯಾವುದೇ ಯೋಜನೆ ಬಂದರೂ ಪರಿಸರಕ್ಕೆ ಮಾರಕ, ಆರೋಗ್ಯದ ಮೇಲೆ ದುಷ್ಪರಿಣಾಮ ಎಂದು ಬೊಬ್ಬೆ ಹೊಡೆಯುವ ಡೊಂಗಿ ಹೋರಾಟಗಾರರ ಕುಟುಂಬದವರು ರಾಜ್ಯದ ಬೇರೆಬೇರೆ ಕಡೆಗಳಲ್ಲಿ ನಿಜವಾಗಲು ಜೀವಕ್ಕೆ ಮಾರಕವಾಗಿರುವ, ತಮ್ಮ ಜೀವವನ್ನೆ ಕೈಯಲ್ಲಿ ಹಿಡಿದುಕೊಂಡು ಸಂಬಳಕ್ಕಾಗಿ ಅನೇಕ ಕಂಪನಿಗಳಲ್ಲಿ ದೊಡ್ಡ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆನ್ನಲಾಗಿದೆ. ಹೀಗಿರುವಾಗ, ಅಲ್ಲಿರುವ ಇವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗೆ ದುಷ್ಪರಿಣಾಮವಾಗುವುದಿಲ್ಲವೇ? ಎನ್ನುವುದು ಜನರಲ್ಲಿ ಮೂಡುತ್ತಿರುವ ಪ್ರಶ್ನೆ. ಅದೇನೆ ಆದ್ರೂ ತಮ್ಮ ಮಕ್ಕಳು ಮಾತ್ರ ಉದ್ದಾರವಾಗಬೇಕು, ಉಳಿದವರ ಮಕ್ಕಳು ಹಾಳಾಗಿ ಹೋಗಲಿ ಎನ್ನುವುದು ಇವರ ಉದ್ದೇಶವೇ..?
ವಾಸ್ತವವಾಗಿ ಜಿಲ್ಲೆಯ ಜನರ ಹಿತಾಸಕ್ತಿಯ ಬಗ್ಗೆ ಕಾಳಜಿ ಇದ್ದರೆ, ಇವರು “ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು” ಎನ್ನುವ ವಿಚಾರದಲ್ಲಿ ಹೋರಾಟ ನಡೆಸುತ್ತಿದ್ದರು. ಆದರೆ ಆಸ್ಪತ್ರೆ ಕುರಿತ ಹೋರಾಟಕ್ಕಿಂತ, ದೊಡ್ಡ ಯೋಜನೆಗಳ ವಿರೋಧಕ್ಕೆ ಮಾತ್ರ ಇವರು ಸದಾ ಸಿದ್ಧರಾಗಿರುವುದು ಜನರ ಮನಸ್ಸಿನಲ್ಲಿ ಅನುಮಾನ ಮೂಡಿಸಿದೆ.
ಡೊಂಗಿ ಹೋರಾಟಗಾರರಿಂದ ಲಾಭ ಆಗಿದ್ದು ಯಾರಿಗೆ..?
ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ಯೋಜನೆ ಕಾಲಿಟ್ಟರು ಕೂಡ ವಿರೋಧ ಮಾಡುತ್ತಾ ಬಂದಿರುವ ಈ ಡೊಂಗಿ ಹೊರಾಟಗಾರರು. ಇದುವರಗೆ ತಮ್ಮ ಅಸಲಿ ಹೋರಾಟದ ಮೂಲಕ.ಯಾವುದೇ ಒಂದು ಯೋಜನೆಯನ್ನ ತಂದು ಎಷ್ಟು ಬಡ ಕುಟುಂಬದ ಯುವಕರಿಗೆ ಉದ್ಯೋಗ ಕೊಡಿಸಿದ್ದಾರೆನ್ನುವುದನ್ನ ಜಿಲ್ಲೆಯ ಜನರ ಎದುರು ಬಿಚ್ಚಿಡಲಿ.ಯಾವ ಯೋಜನೆ ಬಂದರು ಬಡ ಜನರನ್ನ ಎತ್ತಿಕಟ್ಟಿ ತಾವುಗಳು ಒಂದಿಷ್ಟು ಲಾಭ ಮಾಡಿಕೊಂಡಿರುವುದು ಬಿಟ್ಟರೆ ಜನರ ಉದ್ದಾರ ಮಾಡಿದ ಉದಾರಣೆಗಳಿಲ್ಲ.ಮಾತಿನ ಮೂಲಕವೇ ಇವರು ಇಂದಿಗೂ ಜನರನ್ನ ಮಂಗನಾಗಿ ಮಾಡುತ್ತಿದ್ದಾರೆ. ಆರಂಭದಲ್ಲಿ ಹೋರಾಟದ ನಾಟಕ ಮಾಡಿ ಕೊನೆಗೆ ಒಳ ಒಳಗೆ ಆಯಾ ಕಂಪನಿ ಜೊತೆ ಕೈ ಜೋಡಿಸಿ ಜೀವನ ಪರ್ಯಂತ ಲಾಭ ಪಡೆದುಕೊಳ್ಳುತ್ತಿರುವುದು ಬಿಟ್ಟರೆ ಬೇರೆ ಏನು ಇಲ್ಲ ಎಂದು ಜನರೆ ಆಡಿಕೊಳ್ಳತ್ತಿದ್ದಾರೆ..
ಇದನ್ನೂ ಓದಿ:Fish market/ಮೀನು ಮಾರುಕಟ್ಟೆ ಸ್ಥಳಾಂತರವಿಲ್ಲ : ಸಚಿವ ಮಂಕಾಳ್ ವೈದ್ಯ