ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರೂಪಾಲಿ ಎಸ್ ನಾಯ್ಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ತೆರಳಿ, ಜಿಲ್ಲೆಗೆ ಇತ್ತೀಚೆಗೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎಸ್ ಅವರನ್ನು ಭೇಟಿಯಾಗಿ ಹೂವ ಗುಚ್ಚ ನೀಡಿ ಸ್ವಾಗತಿಸಿದರು.ಆಗಸ್ಟ್ 27 ರ ಬುಧವಾರದಿಂದ ಗಣೇಶ ಚತುರ್ಥಿಯ ಪ್ರಾರಂಭವಾಗುತ್ತಿರುವುದರಿಂದ 11 ದಿನಗಳ ಕಾಲ ಗಣೇಶ ಚತುರ್ಥಿಯು ಶಾಂತರೀತಿಯಿಂದ ನಡೆಯಲು ವ್ಯವಸ್ಥೆ ಕಲ್ಪಿಸುವಂತೆ ವಿನಂತಿಸಿದ್ದಾರೆ.

ಶನಿವಾರ ಅಂಕೋಲಾದಲ್ಲಿ ನಡೆದ ಉದ್ದೇಶಿತ ಕೇಣಿ ವಾಣಿಜ್ಯ ಬಂದರು ನಿರ್ಮಾಣ ಕುರಿತ ಸಾರ್ವಜನಿಕ ಅಹವಾಲು ಆಲಿಕೆಯ ಸಭೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ ನಿಯೋಜನೆ ಮಾಡಿ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ಕಾರವಾರ ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ನಾಗೇಶ ಕುರ್ಡೇಕರ, ಗ್ರಾಮೀಣ ಮಂಡಲ ಅಧ್ಯಕ್ಷರಾದಿ ಸುಭಾಷ ಗುನಗಿ, ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ದಿನಕರ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಬಂಧನ