ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ನಗರದ ಬಾಡ 18 ಗ್ರಾಮದ ಮಹಾದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಅರವಿಂದ ಮಾರುತಿ ಗುನಗಿ ಅವರನ್ನು ಶುಕ್ರವಾರ ಆಯ್ಕೆ ಮಾಡಲಾಯಿತು.
ಸಮಿತಿಗೆ ಆಯ್ಕೆ ಆದ 9 ಜನ ಸದಸ್ಯರಲ್ಲಿ ಅರವಿಂದ ಗುನಗಿ, ಶಿವಾನಂದ ನಾಯ್ಕ, ಶಶಿಕಾಂತ ನಾಯ್ಕ, ಸದಾನಂದ ಬಾಂದೇಕರ್ ಇವರು ಅಧ್ಯಕ್ಷ ಸ್ಥಾನಕ್ಕೆ ಆಸಕ್ತಿ ವ್ಯಕ್ತಪಡಿಸಿದ್ದರು. ಶುಕ್ರವಾರ ನಡೆದ ಪ್ರಥಮ ಸಭೆಯಲ್ಲಿ ಒಟ್ಟು 9 ಜನ ಸದಸ್ಯರು ಚೀಟಿ ಮೂಲಕ ಆಯ್ಕೆ ಮಾಡಿ ಅರವಿಂದ ಗುನಗಿ ಅವರನ್ನು ದೇವಸ್ಥಾನದ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಇದೇ ವೇಳೆ ದೇವಸ್ಥಾನದ ಕಾರ್ಯದರ್ಶಿಯಾಗಿ ಗುರುದತ್ತ ಈಶ್ವರ ಬಂಟ, ಖಜಾಂಚಿ ಶಶಿಕಾಂತ ಆನಂದು ನಾಯ್ಕ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬಳಿಕ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವರ ಮುಂದೆ ಪ್ರಮಾಣ ಮಾಡಲಾಯಿತು.
ಸಭೆಯಲ್ಲಿ ದೇವಸ್ಥಾನದ ಸಮಿತಿಯ ಸದಸ್ಯರಾದ ಶಶಿಕಾಂತ ನಾಯ್ಕ, ದೀಪಕ ನಾಯ್ಕ, ಭಾರತಿ ಗುನಗಿ, ಸುಜಾತಾ ಮಡಿವಾಳ ಹಾಗೂ ದೇವಸ್ಥಾನದ ಪ್ರಸ್ತುತ ಅರ್ಚಕರು ಇದ್ದರು.
ಇದನ್ನೂ ಓದಿ: ಅಧ್ಯಯನಪೂರ್ಣ ವರದಿಗಾರಿಕೆ ಅಗತ್ಯ- ಪತ್ರಕರ್ತರ ಶ್ರಮ ದೊಡ್ಡದು : ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ