ಭರದಿಂದ ಸಾಗುತ್ತಿರುವ ಹಬ್ಬಗಳ ನಡುವೆ ‘ಗಣೇಶ ಚತುರ್ಥಿ’ ಹಬ್ಬವು ಇನ್ನೇನು ಹತ್ತಿರಕ್ಕೆ ಬರುತ್ತಿದೆ. ಭಾದ್ರಪದ ಶುಕ್ಲಾ ಚೌತಿಯ ದಿನದಂದು ಕೈಲಾಸದಿಂದ ಧರೆಗಿಳಿದು ಎಲ್ಲರಿಗೂ ತನ್ನ ದರುಶನ ನೀಡುವ ಗಣಪನಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸೋಣ..

ಗೌರಿ ದೇವಿ ಗಣೇಶನನ್ನು ಮಣ್ಣಿನಿಂದಲೇ ಸೃಷ್ಟಿಸಿದಳು ಎನ್ನುವುದು ಪುರಾಣಗಳಾದರೆ ಅದೇ ಜೇಡಿಮಣ್ಣುನ್ನು ಹದ ಮಾಡಿ ಅಷ್ಟೇ ನಿಷ್ಠೆ, ಜಾಗರೂಕತೆಯಿಂದ, ಗಣಪತಿ ಮೂರ್ತಿ ಮಾಡುವುದು ಸುಲಭದ ಮಾತಲ್ಲವೇ ಅಲ್ಲ, ಅದಕ್ಕೆ ಕಲೆಗಾರರ ಏಕಾಗ್ರತೆ ಅತೀ ಮುಖ್ಯವಾಗಿರುವುದು ಎನ್ನುವುದರಲ್ಲಿ ಎರಡು ಮಾತಿಲ್ಲ.
ರವಿವರ್ಮನ ಕುಂಚದಿಂದ ಹೊರ ಬಂದ ಕಲೆಯಂತೆ ಸಾಲು ಸಾಲು ವಿಧ ವಿಧವಾದ ಗಣಪತಿ. ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನ ತೆರೆಯ ಮೇಲೆ ನೋಡುವುದೇ ಚಂದವೋ ಚಂದ. ಬಟ್ ತೆರೆಯ ಹಿಂದಿನ ರಹಸ್ಯ ತೆರೆಮರೆಯ ಕಾಯಿಯಂತೆ..

ಇದು ಕುಮಟಾ ತಾಲ್ಲೂಕಿನ ಬೆಟ್ಕುಳಿ ಕಲಾಕಾರ ಜೈವಂತ ನಾಯ್ಕ ಮನೆಯಲ್ಲಿ ತಯಾರಿಸಿದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳು.ಮೂಲತಃ ಬರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಟ್ಕುಳಿ(ಗುಂದ)ಗ್ರಾಮದ ಯಕ್ಷಗಾನ ಕಲಾವಿದ ಗಣಪಯ್ಯ ನಾಯ್ಕ ಇವರ ಮಗನಾದ ಜೈವಂತ ನಾಯ್ಕ ಪರಿಸರ ಸ್ನೇಹಿ ಮಣ್ಣಿನ ಮೂರ್ತಿ ಮಾಡುವುದರಲ್ಲಿ ಎತ್ತಿದ ಕೈ ಎನ್ನಬಹುದು.

ಅಷ್ಟೇ ಆಸಕ್ತಿ,ಶೃದ್ಧಾ, ಭಕ್ತಿ ಕೂಡ ಇರುವುದು.
ಚಿಕ್ಕ ವಯಸ್ಸಿನಲ್ಲೇ ಗುಂದದ ಅರ್ಲು ಗುಂಡಿಯಿಂದ ಅರ್ಲನ್ನು ತಂದು ಹದ ಮಾಡಿ ಗಣಪತಿ ಮೂರ್ತಿ ಮಾಡುವುದು ಅಲ್ಲಿರೋದು ಮೂರೇ ಮೂರು ಮನೆ ಕಾರಣ ಅದೊಂದು ನಡುಗಡ್ಡೆ ಹಾಗೆ ಸುತ್ತಲೂ ನೀರು ಮಧ್ಯೆ ಮನೆ. ಆ ಮೂರು ಮನೆಯ ಮಕ್ಕಳೆಲ್ಲರೂ ಸೇರಿ ಪೂಜೆ ಪುರಸ್ಕಾರದ ಆಟ ಆಡ್ತಾ ಮತ್ತೆ ಕೆರೆಗೆ ಬಿಡ್ತಾ ಗಣಪತಿ ಬಪ್ಪಾ ಮೋರಯಾ ಅಂತಾ ಕೂಗಿದ್ದೇ ಕೂಗಿದ್ದು ಹೀಗೆ ಪ್ರತಿ ವರ್ಷ,ತಿಂಗಳು ಇಲ್ಲವೇ ವಾರಾಂಪ್ರತಿ ನಮ್ಮಗಳ ಆಟವೇ ನಮ್ಮಣ್ಣನ ಪಾಠವಾಯ್ತು ಅಂತಾ ಹಿಂದಿನ (ಬಾಲ್ಯದ)ನೆನಪುಗಳನ್ನೆಲ್ಲಾ ಮೆಲಕು ಹಾಕ್ತಾರೆ ಅವರ ತಂಗಿ ಗ್ರಂಥಪಾಲಕಿ ಕುಸುಮಾ ನಾಯ್ಕ.

ಮೊದ ಮೊದಲು ಸಹಾಯಕ್ಕಾಗಿ ಚೌತಿಗೆ ಒಂದು ವಾರ ಇಲ್ಲವೇ ೧೫ ದಿನಗಳ ಮೊದಲೇ ಮನೆ ಮಂದಿಯೆಲ್ಲಾ ಒಟ್ಟಾಗಿ ಸಣ್ಣ ಪುಟ್ಟ ಕೆಲಸ ಕಾರ್ಯಗಳಲ್ಲಿ ತೊಡಗುವರು. ಗಣಪನ ವಾಹನ ಇಲಿ ಹಾವು ಮಾಡಿ, ಮೂರ್ತಿಗೆ ಬಣ್ಣ ಬಳಿಯಲು ಸಹಕರಿಸುವುದು ಹೀಗೆ ಮನೆ ಮಂದಿಯೆಲ್ಲಾ ಒಟ್ಟೊಟ್ಟಿಗೆ ನೋಡುವುದೇ ಖುಷಿ ಆಗ್ತಿತ್ತು. ಈಗೀಗ ಎಲ್ಲರೂ ಒಂದೊಂದು ಉದ್ಯೋಗದ ನಿಮಿತ್ತ ಪರ ಊರು ಜಿಲ್ಲಾ ತಾಲ್ಲೂಕು ಹೋಗೋದ್ರಿಂದ ಮನೆಯಲ್ಲಿ ಉಳಿದವರಾದ ನಾವುಗಳೇ ಮನೆಯ ಯಜಮಾನ ಪುರುಷರೊಂದಿಗೆ ಮಣ್ಣನ್ನ ಹದಮಾಡೋದ್ರಿಂದ ಹಿಡಿದು ಮೂರ್ತಿಗಳನ್ನು ನೈಸ್ ಮಾಡಿ ಬಣ್ಣ ಬಳಿಯುವವರೆಗೂ ಹೆಚ್ಚು ಕಮ್ಮಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಸಹಕರಿಸುವಂತಾಗಿದೆ ಎನ್ನುವರು ಅವರ ಪತ್ನಿ ದೇವಕಿ (ರೇಖಾ) ನಾಯ್ಕ.

ಮೊದಲ ಬಾರಿಗೆ 1992_93ರಲ್ಲಿ ಮನೆಯಲ್ಲಿ ಜೇಡಿಮಣ್ಣು ತಂದು ಗಣಪತಿ ಮೂರ್ತಿ ಮಾಡಿ ಪೂಜೆ ಮಾಡಲು ಶುರುಮಾಡಿದೆವು ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಸುಮಾರು ೪೦_೫೦ ವಿಧವಿಧವಾದ ಗಣಪತಿ ಮೂರ್ತಿ ಮಾಡುವುದು, ಹಾಗೆ ಸುತ್ತ_ಮುತ್ತಲಿನ ಸಾರ್ವಜನಿಕವಾಗಿ/ ವಯಕ್ತಿಕವಾಗಿ ಅವರಿಗೆ ಬೇಕಾದ ರೀತಿಯಲ್ಲಿ ಮೂರ್ತಿ ತಯಾರಿಸಿ ಕೊಡುವುದಾಗಿ ಹೇಳುವರು. ನನ್ನದು ವೃತ್ತಿಯಲ್ಲಿ ಕಂಟ್ರಾಕ್ಟರ್ ಪ್ರವೃತ್ತಿಯಲ್ಲಿ ಪೇಂಟಿಂಗ್ ಡಿಸೈನ್ ಬಿಡಿಸುವುದು, ಮಣ್ಣಿನ ಮೂರ್ತಿ ತಯಾರಿಸುವುದು ಸಿಮೆಂಟ್ ಮೂರ್ತಿ, ಹಾಗೂ ಥರ್ಮಾಕೋಲ್ನಿಂದ ತರ ತರದ ಡೆಕೋರೇಟ್ ಮಾಡುವುದು ಇದೆ ಎನ್ನುವರು ಕಲಾಕಾರ ಜೈವಂತ ನಾಯ್ಕ ಇವರು.

ಒಟ್ಟಾರೆಯಾಗಿ ತೆರೆಮರೆಯ ಕಾಯಿಯಂತಿರುವ ಕಲಾಕಾರ ಜೈವಂತ ನಾಯ್ಕ ಇವರ ಕಲೆಯೂ ಇನ್ನೂ ಬೆಳಕಿಗೆ ಬಂದು ಪ್ರಸೌಂಶಿಸುವಂತಾಗಲಿ.ಶ್ರೀ ಮಹಾಗಣಪತಿಯ ದರುಶನ ಭಾಗ್ಯ ದಿಂದ ಎಲ್ಲರ ಮನ ಮನೆ ಬೆಳಕಾಗಲಿ..
ಸರ್ವೇ ಜನಾಃ ಸುಖಿನೋ ಭವಂತು…🙏
ಕು. ಜಿ… ✍️

ಇದನ್ನೂ ಓದಿ :Keni Port/ಕೇಣಿ ಬಂದರು ಅಹವಾಲು ಸಭೆಯಲ್ಲಿ ದಬ್ಬಾಳಿಕೆ – ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ