ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ–ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ತಮ್ಮ ಜನ್ಮದಿನದ ಅಂಗವಾಗಿ ಕಾರವಾರ ನಗರದ ಹೂವಿನಚೌಕ ಕೋಡಿಬಾಗ ಆಟೋ ಸ್ಟ್ಯಾಂಡ್‌ನಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಅನ್ನದಾನ ಕಾರ್ಯಕ್ರಮವನ್ನು ನೆರವೇರಿಸಿದರು.

ಜನ್ಮದಿನದ ಈ ವಿಶೇಷ ಸಂದರ್ಭದಲ್ಲಿ ದೇವರ ಪೂಜೆ ಹಾಗೂ ಪವಿತ್ರ ಅನ್ನದಾನ ಕಾರ್ಯಕ್ರಮ ನಡೆಸಿರುವುದರಿಂದ ಸಂತೋಷ ಉಂಟಾಗಿದೆ ಎಂದು ರೂಪಾಲಿ ಎಸ್. ನಾಯ್ಕ ತಿಳಿಸಿದರು. ಅನ್ನಸಂತರ್ಪಣೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಅವರಿಗೆ ಜನ್ಮದಿನದ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪುತ್ರ ಪರ್ಬತ್ ಸಂತೋಷ ನಾಯ್ಕ, ಸೊಸೆ ರೇಖಾ ಪಿ. ನಾಯ್ಕ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ಆಟೋ ಸ್ಟ್ಯಾಂಡ್ ಅಧ್ಯಕ್ಷ ಶ್ರೀಧರ ವೆರ್ಣೇಕರ, ಮೋಹನ ನಾಯ್ಕ, ದೀಪಕ ಶಿರೋಡ್ಕರ್, ನಾರಾಯಣ ಬಾಂದೇಕರ, ಅಜಯ ರೇವಂಡಿಕರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು

ಇದನ್ನೂ ಓದಿ: ನಾಳೆಯೂ ಉತ್ತರಕನ್ನಡ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ