ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಅಧಿಕಾರ ದುರುಪಯೋಗ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲಾ ಗೃಹರಕ್ಷಕದಳದ ಗೌರವ ಸಮಾದೇಷ್ಠ ಡಾ.ಸಂಜು ಟಿ. ನಾಯಕ ಅವರನ್ನು ಹುದ್ದೆಯಿಂದ ಸಮಾಲೋಪನೆಗೊಳಿಸಿ ಗೃಹರಕ್ಷಕ ದಳದ ಮಹಾ ಸಮಾದೇಷ್ಠರು ಮತ್ತು ನಿರ್ದೇಶಕರು ಪೌರ ರಕ್ಷಣೆ ಇಲಾಖೆಯ ಆರಕ್ಷಕ ಮಹಾ ನಿರ್ದೇಶಕರು ಆದೇಶಿಸಿದ್ದಾರೆ.

ಅವರು ತಮ್ಮ ಆದೇಶದಲ್ಲಿ ಕರ್ನಾಟಕ ಗೃಹರಕ್ಷಕ ನಿಯಮಗಳು ೧೯೬೩ರ ಉಪ ನಿಯಮ ೩ಸಿ(೫) ನ್ನು ಉಲ್ಲಂಘಿಸಿ ಗೌರ ಸಮಾದೇಷ್ಠರ ಹುದ್ದೆಯ ಅಧಿಕಾರಿ ದುರುಪಯೋಗ ಮಾಡಿಕೊಂಡಿರುವುದರಿಂದ ಉಲ್ಲೇಖ(೧)ರ ಸರ್ಕಾರದ ಆದೇಶನ್ವಯ ಈ ತಕ್ಷಣ ಜಾರಿಗೆ ಬರುವಂತೆ ಸಮಾಲೋಪನೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ಮುಂದಿನ ಸಮಾದೇಷ್ಠರ ನೇಮಕದವರೆಗೂ ಜಿಲ್ಲೆಯಲ್ಲಿನ ಗೃಹರಕ್ಷಕ ದಳದ ಮೇಲ್ವಿಚಾರಣೆಗಾಗಿ ಆಡಳಿತಾತ್ಮಕ ದೃಷ್ಠಿಯಿಂದ ಉತ್ತರಕನ್ನಡ ಹೆಚ್ಚುವರಿ ಪೋಲಿಸ್‌ ಅಧೀಕ್ಷಕ ಅವರನ್ನು ಗೌರವ ಸಮಾದೇಷ್ಠರ ಹುದ್ದೆಯ ಪ್ರಭಾರವನ್ನು ವಹಿಸಲು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಪ್ರಸನ್ನ ಶೆಟ್ಟಿ ಪಕ್ಷದ‌ ಹಿರಿಯ ನಾಯಕರ ವಿರುದ್ಧ ಹೇಳಿಕೆ ನೀಡುವು ಎಷ್ಟು ಸರಿ ; ಅನಂತಮೂರ್ತಿ ಹೆಗಡೆ