ಸುದ್ದಿಬಿಂದು ಬ್ಯೂರೋ ವರದಿ
ಧರ್ಮಸ್ಥಳ: ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆ ಸಂಭವಿಸಿದ್ದು, ಮಾನವನ ಅಸ್ಥಿಪಂಜರದ ಅವಶೇಷಗಳು ಇಂದು (ಸೋಮವಾರ) ಮತ್ತೆ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ದೂರುದಾರನು ತೋರಿಸಿದ್ದ ಬಂಗ್ಲಗುಡ್ಡೆಯ 11ನೇ ಪಾಯಿಂಟ್‌ನಲ್ಲಿ ಈ ಅವಶೇಷಗಳು ಪತ್ತೆಯಾಗಿದ್ದು, ಶವದ ತಲೆಬುರುಡೆ ಮತ್ತು ಮೂಳೆಗಳು ದೊರೆತಿವೆ ಎಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆಯಿಂದ ಎಸ್‌ಐಟಿ ತಂಡ ಬಂಗ್ಲಗುಡ್ಡೆಯ 11ನೇ ಪಾಯಿಂಟ್‌ನಲ್ಲಿ ತೀವ್ರ ಶೋಧ ನಡೆಸುತ್ತಿತ್ತು. ಈ ವೇಳೆ ದೂರುದಾರನ ಮಾರ್ಗದರ್ಶನದಲ್ಲಿ ಇನ್ನೊಂದು ಸ್ಥಳದಲ್ಲಿಯೂ ಅಗೆಯಲಾಗಿದ್ದು, ಅಲ್ಲಿ ಒಂದಕ್ಕಿಂತ ಹೆಚ್ಚು ಶವಗಳ ಅವಶೇಷಗಳು ಪತ್ತೆಯಾದಂತಾಗಿದೆ.

ಇದುವರೆಗೆ ದೂರುದಾರ ತೋರಿಸಿದ್ದ 11ಪಾಯಿಂಟ್‌ಗಳಿಂದ ಶೋಧನೆ ನಡೆಸಲಾಗಿದ್ದು, 6ನೇ ಮತ್ತು 11ನೇ ಪಾಯಿಂಟ್‌ಗಳಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾದಂತಾಗಿದೆ…

ಇದನ್ನೂ ಓದಿ:ಜನಾನುರಾಗಿಯಾಗಿದ್ದ ಗೌರಸ್ಸಿಯ ನಾರಾಯಣ ನಾಯ್ಕ ವಿಧಿವಶ