ಸುದ್ದಿಬಿಂದು ಬ್ಯೂರೋ ವರದಿ

ಕುಮಟಾ: ಪ್ರಕೃತಿಗೂ ಸೂರಜ್ ನಾಯ್ಕ ಸೊನಿ ಅಂದ್ರೆ ಅಚ್ಚುಮೆಚ್ಚು, ಹತ್ತು ದಿನಗಳಿಂದ ಜಿಲ್ಲೆಯಾದ್ಯಂತ ಮಳೆ ನಿರಂತರ ಸುರಿಯುತ್ತಿದ್ದರೆ, ಸೂರಜ್ ನಾಯ್ಕ ಅವರ ಕಾರ್ಯಕ್ರಮದ ದಿನ ಮಳೆ ಕಡಿಮೆಯಾಗಿರುವುದು ಪ್ರಕೃತಿಯ ಪ್ರೀತಿಯ ಸಂಕೇತ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರ ಸ್ವಾಮಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಟೌನ್‌ ಹಾಲ್‌ ನಲ್ಲಿ ನಡೆದ ಜನರೊಂದಿಗೆ ಜನತಾ ದಳ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದರು,ಕೇಂದ್ರದ ಎನ್‌ ಡಿಎ ಸರಕಾರದಲ್ಲಿ ಹೊಂದಾಣಿಕೆ ಮಾಡಿಕೊಂಡಿರುವುದರಿಂದಾಗಿ ಕುಮಟಾ ಕ್ಷೇತ್ರ ಸೇರಿದಂತೆ ಅನೇಕ ಕಡೆಯಲ್ಲಿ ನಮ್ಮ ಪಕ್ಷದ ನಾಯಕರಿಗೆ ಟಿಕೆಟ್‌ ಸಿಗಲಿದೆ ಎನ್ನುವ ಅನುಮಾನ ಕಾರ್ಯಕರ್ತರಲ್ಲಿ ಇದೆ, ಅದೇ ರೀತಿ ಕುಮಟಾ-ಹೊನ್ನಾವರ ಕ್ಷೇತ್ರದ ಕಾರ್ಯಕರ್ತರಾದ ನಿಮ್ಮಲ್ಲಲ್ಲಿ ಇರುವುದು ಸಹ. ಆದರೆ ಈ ವೇದಿಕೆ ಮೂಲಕ ಹೇಳತ್ತಾ ಇದ್ದೇನೆ ಆ ಭಾವನೆಯನ್ನ ಈ ಕ್ಷಣದಿಂದ ನೀವೆಲ್ಲರೂ ಬಿಟ್ಟು ಬಿಡಬೇಕು, ಇದನ್ನ ನಾನು ಸೂಕ್ಷ್ಮವಾಗಿ ಹೇಳುತ್ತಿದ್ದೆನೆ, ಸೂರಜ್ ನಾಯ್ಕ ಅವರು ಕುಮಟಾ-ಹೊನ್ನಾವರ ಕ್ಷೇತ್ರದಿಂದಲೇ ಸ್ಪರ್ಧಿಸುವುದು ಖಚಿತ ಎನ್ನುವ ಮೂಲಕ ಕಾರ್ಯಕರ್ತರಲ್ಲಿ ಮತ್ತಷ್ಟು ವಿಶ್ವಾಸ ಮೂಡಿಸಿದರು.

ಸೂರಜ್ ನಾಯ್ಕ ಅವರು ಸದಾ ಜನರ ಧ್ವನಿಯಾಗಿದ್ದಾರೆ.ಅವರು ಹಣದಲ್ಲಿ ಶ್ರೀಮಂತರಾಗದೆ ಇರಬಹುದು ಆದರೆ ಹೃದಯದಲ್ಲಿ ಶ್ರೀಮಂತರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತರೂ ಅದು ನಿಜವಾದ ಸೋಲು ಅಲ್ಲ,” ಎಂದು ಅಭಿಪ್ರಾಯಪಟ್ಟರು.

ಅಭಿವೃದ್ಧಿ ಕೊರತೆಯ ವಿರುದ್ಧ ಕಿಡಿ

ಪ್ರಸ್ತುತ ಕಾಂಗ್ರೆಸ್ ಸರಕಾರದ ಮೇಲೆ ನಾಯಕರವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.”ಜಿಲ್ಲೆಯಲ್ಲಿ ಇನ್ನೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವುದು ಜನರ ದುರದೃಷ್ಟ. ಆಸ್ಪತ್ರೆ ಆಗಬೇಕು ಎನ್ನುವ ಬಗ್ಗೆ ಅನೇಕ ಹೋರಾಟಗಳು ನಡೆದಿರುವುದನ್ನ ಗಮನಿಸಿದ್ದೇನೆ, ಆದರೆ ಸರಕಾರಗಳು ಆಶ್ವಾಸನೆ ನೀಡುವುದರಲ್ಲೇ ಕಾಲಹರಣ ಮಾಡಿದೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಕೂಡ ಜನರಿಗೆ ಅವಶ್ಯಕವಾಗಿರುವ ಸಮಸ್ಯೆಗೆ ಸ್ಪಂಧಿಸುವ ಕೆಲಸ ಮಾಡಬೇಕು, ಅಂದಾಗ ಅದು ಜನಪರ ಸರಕಾರವಾಗಲು ಸಾಧ್ಯ, ಇನ್ನೂ ಮೀನುಗಾರರಿಗೆ ಶಾಶ್ವತ ಪರಿಹಾರ ಸಿಗದೆ ಜನರು ಸಂಕಷ್ಟದಲ್ಲಿದ್ದಾರೆ,ಎಂದು ಅವರು ಟೀಕಿಸಿದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮೀನುಗಾರರ ಹಿತಕ್ಕಾಗಿ ಹಲವಾರು ಕೆಲಸಗಳನ್ನು ಮಾಡಿದ ವಿಚಾರವನ್ನು ಜನರು ಇನ್ನೂ ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೂ ಈ ಕ್ಷೇತ್ರವನ್ನು ಗೆಲ್ಲಬೇಕೆಂಬ ಹಂಬಲವಿದೆ ಎಂದು ನಿಖಿಲ್ ಹೇಳಿದರು.”ಎಲ್ಲರೂ ಸೂರಜ್ ನಾಯ್ಕ ಪರ ನಿಲ್ಲಬೇಕು, ನೆರೆದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಕೇಳಿಕೊಂಡರು. ಈ ಕಾರ್ಯಕ್ರಮದಲ್ಲಿ ಬೃಹತ್ ಪ್ರಮಾಣದ ಜನಸಮೂಹ ಭಾಗವಹಿಸಿದ್ದು, ಜೆಡಿಎಸ್‌ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಇದನ್ನೂ ಓದಿ: ವೈದ್ಯರ ಹೋಂ ಸ್ಟೇ ಅಕ್ರಮ : ಪ್ರವಾಸೋದ್ಯಮ ಇಲಾಖೆಯಿಂದ ಸಿಕ್ಕಿಲ್ಲ ಅನುಮತಿ