ಸುದ್ದಿಬಿಂದು ಬ್ಯೂರೋ ವರದಿ
ಹಾವೇರಿ : ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೈರುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಹಾವೇರಿ ಮೂಲದ ಖ್ಯಾತ ವೈದ್ಯರೊಬ್ಬರು ನಡೆಸುತ್ತಿರುವ ಹೋಂ ಸ್ಟೇಗೆ ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಅಕ್ರಮ ಚಟುವಟಿಕೆ ನಡೆಸಲು ಅಕ್ರಮವಾಗಿ ಈ ಹೋಂ ಸ್ಟೇ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ
ಕಳೆದ ಎರಡು ದಿನಗಳ ಹಿಂದಷ್ಟೆ ಇದೇ ಹೋಂ ಸ್ಟೇ ಒಂದರಲ್ಲಿ ಹಾವೇರಿ ಹಾಗೂ ದಾವಣಗೇರಿ ಮೂಲದ ವ್ಯಕ್ತಿಗಳು ಇಸ್ಪೀಟ್ ಆಟ ಆಡುತ್ತಿದ್ದ ವೇಳೆ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರು ದಾಳಿ ನಡೆಸಿ ಹೋಂ ಸ್ಟೇ ಮಾಲೀಕ ಸೇರಿ ೧೯ ಮಂದಿಯನ್ನ ವಶಕ್ಕೆ ಪಡೆದು ಶಿರಸಿ ಪೊಲೀಸ್ ಠಾಣೆಯಲ್ಲಿ ವೈದ್ಯನ ವಿರುದ್ಧ ಕೂಡ FIR ದಾಖಲಿಸಿದ್ದಾರೆ. ಈ ಅಕ್ರಮ ಹೋಂ ಸ್ಟೇ ಮೇಲೆ ದಾಳಿ ನಡೆಸುತ್ತಿರುವಂತೆ ಹೋ ಸ್ಟೇ ಅಕ್ರಮವನ್ನ ಸಾರ್ವಜನಿಕರು ಬಯಲಿಗೆ ತರುತ್ತಿದ್ದಾರೆ. ಈ ವೈದ್ಯ ಕಳೆದ ನಾಲ್ಕೈದು ವರ್ಷದಿಂದ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿಯನ್ನೆ ಪಡೆದಿಲ್ಲ, ಈ ಕ್ಷಣದವರೆಗೂ ಸಹ ಈ ಹೋಂ ಸ್ಟೇ ಗೆ ಪ್ರವಾಸೋದ್ಯಮ ಇಲಾಖೆ ಅನುಮತಿ ಕೊಟ್ಟಿಲ್ಲ ಎನ್ನುವುದು ಇಲಾಖೆಯ ಮಾಹಿತಿಯಿಂದಲ್ಲೆ ಹೊರಬಿದ್ದಿದೆ.ಈ ಸ್ಥಳದಲ್ಲಿ ಹೋಂ ಸ್ಟೇ ಆರಂಭಿಸಿದ ದಿನದಿಂದಲ್ಲೂ ಅನುಮತಿ ನೀಡಬಾರದು ಎಂದು ಗ್ರಾಮ ಪಂಚಾಯತ ಕೆಲ ಸದಸ್ಯರು ಹಾಗೂ ಸ್ಥಳೀಯರು ಗ್ರಾ.ಪಂ ಹಾಗೂ ಜಿಲ್ಲಾಧಿಕಾರಿಗಳಿಗೂ ದೂರು ನೀಡಿದ್ದಾರೆನ್ನಲಾಗಿದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆ ಅನುಮತಿ ನೀಡದೆ ಬಾಕಿ ಉಳಿಸಿಕೊಂಡಿದೆ.
ಸಂಬಂಧಿಸಿದ ಇಲಾಖೆಯಿಂದ ಅನುಮತಿ ಸಿಗದೆ ಇದ್ದರೂ ಕೂಡ ವೈದ್ಯ ಅಕ್ರಮವಾದ ತನ್ನ ಹೋಂ ಸ್ಟೇದಲ್ಲಿ ಅಕ್ರಮವಾದ ಚುವಟಿಕೆ ನಡೆಸಲು ಅವಕಾಶ ನೀಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಷ್ಟೆ ಅಲ್ಲದೆ, ಇಷ್ಟು ವರ್ಷಗಳ ಕಾಲ ಅಕ್ರಮವಾಗಿ ಹೋಂ ಸ್ಟೇ ಮಾಡಿರುವ ಇವರ ವಿರುದ್ಧ ತಕ್ಷಣ ಕ್ರಮ ಜರುಗಿಸುವ ಮೂಲಕ ದಂಡ ವಸೂಲಿ ಮಾಡಿ ತಕ್ಷಣ ಬೀಗ ಜಡಿಯುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಇದರ ಜೊತೆ ಈ ಬಾಗದಲ್ಲಿ ಇನ್ನೂ ಅನೇಕ ಅಕ್ರಮ ಹೋಂ ಸ್ಟೇ ಹಾಗೂ ರೇಸಾರ್ಟ್ ಗಳು ತಲೆ ಎತ್ತಿದ್ದು ಅವೆಲ್ಲದಕ್ಕೂ ಕಡಿವಾಣ ಹಾಕದೆ ಇದ್ದರೆ, ಈ ಭಾಗದಲ್ಲಿ ಇನ್ನಷ್ಟು ಇಸ್ಪೀಟ್ ಆಟವಷ್ಟೆ ಅಲ್ಲದೆ ಇನ್ನೂ ಬೇರೆ ಬೇರೆ ಅಕ್ರಮ ಚುವಟಿಕೆ ಮುಂದುವರೆಯಲಿದೆ ಎಂದು ಸ್ಥಳೀಯರು ಕಳವಳ ವ್ಯಕ್ತ ಪಡಿಸಿದ್ದಾರೆ, ಹೀಗಾಗಿ ಪ್ರವಾಸೋದ್ಯಮ ಇಲಾಖೆ ತಕ್ಷಣದಿಂದ ಕ್ರಮಕ್ಕೆ ಮುಂದಾಗಬೇಕಿದ್ದು, ಇಂತಹ ಅಕ್ರಮ ರೇಸಾರ್ಟ್ ಗಳಿಂದ ತಮ್ಮ ಕ್ಷೇತ್ರದಕ್ಕೆ ಕೆಟ್ಟ ಹೆಸರು ಬರುವ ಮುನ್ನ ಅಲ್ಲಿನ ಜನಪ್ರತಿನಿಧಿಗಳು ಅಕ್ರಮ ರೇಸಾರ್ಟ್ ಹಾಗೂ ಹೋಂ ಸ್ಟೇ ಗಳ ಮೇಲೆ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕಿದೆ.
ಮುಂದುವರೆಯುವುದು…………………
ಇದನ್ನೂ ಓದಿ:ಉತ್ತರಕನ್ನಡದಲ್ಲಿ ರೆಡ್ ಅಲರ್ಟ್ : ಎಚ್ಚರಿಕೆಯಿಂದಿರಲು ಸೂಚನೆ