ಸುದ್ದಿಬಿಂದು ಬ್ಯೂರೋ ವರದಿ Bindu News Network

ಬೆಂಗಳೂರು: ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯೊಬ್ಬ ಸೆಲ್ಪಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ರ಼್ಯಾಗಿಂಗ್‌ ಗೆ ಭಯಗೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ವಿದ್ಯಾರ್ಥಿ ಅರುಣ್ ಎಂಬಾತನೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾನೆ, ಈತ ಆತ್ಮಹತ್ಯೆ ಮಾಡಿಕೊಳ್ಳುವ ರ಼್ಯಾಗಿಂಗ್‌ ಕುರಿತಾಗಿ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಈತ ಹಾಸನ ಜಿಲ್ಲೆಯ ಚನ್ನಕೇಶವ ಮತ್ತು ತುಳಸಿ ದಂಪತಿಗಳ ಪುತ್ರ ಅರುಣ್, ಬೆಂಗಳೂರಿನ ನಂದರಾಮಯ್ಯನ ಪಾಳ್ಯದಲ್ಲಿ ವಾಸವಾಗಿದ್ದು,  ಈತ ಬೆಂಗಳೂರಿನ ಖಾಸಗಿ ಆರ್ಕಿಟೆಕ್ಚರ್ ಕಾಲೇಜೊಂದರಲ್ಲಿ ಟಾಪರ್ ವಿದ್ಯಾರ್ಥಿಯಾಗಿದ್ದ.ಆತ್ಮಹತ್ಯೆಗೆ ಮೊದಲು, ರ಼್ಯಾಗಿಂಗ್‌ನ ಶೋಷಣೆಯ ಬಗ್ಗೆ ವಿವರವಾಗಿ ತಿಳಿಸಿರುವ ವಿಡಿಯೋವನ್ನು ತನ್ನ ಕಾಲೇಜಿನ ವಾಟ್ಸಾಪ್ ಗ್ರೂಪ್‌ ನಲ್ಲಿ ಹಂಚಿಕೊಂಡಿದ್ದಾನೆ.

ಅರುಣ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ  ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣವಾದ ರ್ಯಾಗಿಂಗ್ ಹಿನ್ನೆಲೆಯ ಕುರಿತು ನಿಖರ ಮಾಹಿತಿ ನಿರೀಕ್ಷೆಯಲ್ಲಿದ್ದು,ಕಾಲೇಜು ಆಡಳಿತ ಮಂಡಳಿಯ ಪ್ರತಿಕ್ರಿಯೆ ಇನ್ನಷ್ಟೇ ಹೊರಬರಬೇಕಿದೆ.ವಿದ್ಯಾರ್ಥಿಗಳ ಮನಸ್ಸುಗಳಿಗೆ ಹಾನಿಯುಂಟುಮಾಡುವ ಈ ರೀತಿ ಘಟನೆಗಳು ಮತ್ತೆಂದೂ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ ಎಂಬ ಒತ್ತಾಯ ಪೋಷಕರು ಮತ್ತು ವಿದ್ಯಾರ್ಥಿ ಸಂಘಟನೆಯಿಂದ ಸಹ ಕೇಳಿಬರುತ್ತಿದೆ.

ಇದನ್ನೂ ಓದಿ :ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಗೋಕರ್ಣ ಗ್ರಾಪಂ ಕೂಟದ ಸದ್ಭಕ್ತರಿಂದ ಗುರು ಸೇವೆ