ಕುಮಟಾ: ಮಿರ್ಜಾನ (ಉತ್ತರ ಕನ್ನಡ) : ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟಿರುವ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಮಿರ್ಜಾನ ಬಳಿ ಕೊಂಕಣ ರೈಲ್ವೆ ಹಳಿಯ ಮೇಲೆ ನಡೆದಿದೆ.
ಕೇರಳದ ಬೇಬಿ ಥಾಮಸ್ ಪರಕಡನ್ (56) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.ಐವರು ಸ್ನೇಹಿತರು ಸೇರಿ ಕೇರಳದಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.ಆದರೆ ಎಲ್ಲರ ಜೊತೆಯಲ್ಲಿ ಮಲ್ಲಗಿದ್ದ ಬೇಬಿ ಪರಕಡನ್ ಎಂಬಾತ ಮಿರ್ಜಾನ ಸಮೀಪ ಬಂದಾಗ ರೈಲಿನ ಬಾಗಿಲು ಬಳಿ ಹೋಗಿರುವ ವೇಳೆ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಆದರೆ ಆತನ ಜೊತೆಯಲ್ಲಿದ್ದ ಇನ್ನೂಳಿದವರು ನಿದ್ದೆಯಲ್ಲಿದ್ದರು ಎನ್ನಲಾಗಿದೆ, ಉಳಿದ ಸ್ನೇಹಿತರು ಗೋವಾ ಸಮೀಪ ಹೋಗುತ್ತಿದ್ದಂತೆ ಎದ್ದು ನೋಡಿದಾಗ ಜೊತೆಯಲ್ಲಿದ್ದ ಬೇಬಿ ಥಾಮಸ್ ಪರಕಡನ್ ಇಲ್ಲದಿರುವುದು ಗೊತ್ತಾಗಿದೆ.ಆದರೆ ಆತ ಎಲ್ಲಿ ಹೋಗಿದ್ದಾನೆ ಎನ್ನುವುದು ಗೊತ್ತಾಗಿಲ್ಲ ಎನ್ನಲಾಗಿದೆ.ಗೋವಾ ತಲುಪಿದ ಆತನ ಸ್ನೇಹಿತರು ತಕ್ಷಣ ತಮ್ಮ ಜೊತೆಗಿದ್ದ ಸ್ನೇತನೋರ್ವ ಕಾಣೆಯಾಗಿರುವ ಬಗ್ಗೆ ಅಲ್ಲಿನ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆನ್ನಲಾಗಿದೆ.
ಇನ್ನೂ ನೇತ್ರಾವತಿ ಎಕ್ಸೆಪ್ರೇಸ್ ರೈಲ್ವೆಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಓರ್ವ ಬಿದ್ದು ಮೃತ ಪಟ್ಟಿರುವುದಾಗಿ ಕುಮಟಾ ಠಾಣೆಯ ಪೊಲೀಸರು ಸಹ ರೈಲ್ವೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆನ್ನಲಾಗಿದ್ದು,ಈ ಮಾಹಿತಿಯನ್ನ ತಿಳಿದ ಗೋವಾ ಪೊಲೀಸರು ಗೋವಾದಲ್ಲಿ ದೂರು ನೀಡಿದ್ದ ವ್ಯಕ್ತಿಗಳಿಗೆ ಕುಮಟಾದಲ್ಲಿ ಓರ್ವ ವ್ಯಕ್ತಿ ಸಿಕ್ಕಿದ್ದಾರೆ ಆತ ನಿಮ್ಮ ಸ್ನೇತನೆ ಆಗಿರಬಹುದು ಎಂದು ಹೇಳಿದ್ದಾರೆನ್ನಲಾಗಿದೆ, ತಕ್ಷಣ ಆತನ ಸ್ನೇಹಿತರು ಕುಮಟಾಕ್ಕೆ ವಾಪಸ್ ಆಗಿದ್ದಾರೆ, ಇಲ್ಲಿಗೆ ಬಂದು ನೋಡಿದಾಗಲೇ ಅವರಿಗೆ ಬೇಬಿ ಥಾಮಸ್ ಪರಕಡನ್ ಮೃತ ಪಟ್ಟಿರುವ ವಿಚಾರ ಗೊತ್ತಾಗಿದೆ. ಈಗಾಗಲೇ ಘಟನೆಯಲ್ಲಿ ಮೃತ ಪಟ್ಟಿರುವ ವ್ಯಕ್ತಿಯ ಮೃತ ದೇಹವನ್ನ ಕೇರಳಕ್ಕೆ ಕಳುಹಿಸಾಗಿದೆ.ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.