ಸುದ್ದಿಬಿಂದು ಬ್ಯೂರೋ ವರದಿ

ಶಿರಸಿ: ನಗರದ ಬಸ್‌ ನಿಲ್ಲಾಣದಲ್ಲಿ ಬಸ್‌ ಗಾಗಿ ಕಾದು ಕುಳಿತಿದ್ದ ಮಹಿಳೆ ಓರ್ವಳ ಜೊತೆ ಅನುಚಿತವಾಗಿ ವರ್ತಿಸಿದ ವ್ಯಕ್ತಿ ಓರ್ವನಿಗೆ ಬಸ್‌ ನಿಲ್ದಾಣದಲ್ಲೆ ಕಾಮುಕ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದು ಕಾಮದ ನಶೆ ಇಳಿಸಿರುವ ಘಟನೆ ನಡೆದಿದ್ದು, ಮಹಿಳೆ ದಿಟ್ಟತನದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗತ್ತಾ ಇದೆ.

ಬಸ್‌ ನಿಲ್ದಾಣದಲ್ಲಿ ಮಹಿಳೆ ಊರಿಗೆ ಹೋಗಲು ಬಸ್‌ಗಾಗಿ ಕಾಯುತ್ತ ಕುಳಿತ್ತಿದ್ದು, ಈ ವೇಳೆ ಕಂಠಪೂರ್ತಿ ಕುಡಿದು ಬಂದ ಶಿರಸಿ ಮೂಲದ ವ್ಯಕ್ತಿ ಓರ್ವ ಆ ಮಹಿಳೆ ಪಕ್ಕದಲ್ಲೆ ಕುಳಿತುಕೊಂಡಿದ್ದಾನೆ,ನಿದಾನವಾಗಿ ಆಕೆಯೊಂದಿಗೆ ಮಾತನಾಡುತ್ತಾ ನಗರದಲ್ಲಿ ಒಂದ “ರೂಮ್‌ ಮಾಡ್ತೀನಿ ಬಾʼ  ಎಂದು ಆ ಮಹಿಳೆಯನ್ನ ಕರೆದಿದ್ದಾನೆ ಎನ್ನಲಾಗಿದೆ.ಕುಡುಕನ ಬಾಯಿಂದ ಆ ಶಬ್ದ ಹೊರ ಬರುತ್ತಿದ್ದಂತೆ ಕುಳಿತ ಜಾಗದಿಂದ ಎದ್ದ ಮಹಿಳೆ ತಕ್ಷಣ ಚಪ್ಪಲಿ ತೆಗೆದು ಬಸ್‌ ನಿಲ್ದಾಣದಲ್ಲಿ ಹಿಗ್ಗಾ ಮುಗ್ಗವಾಗಿ  ಚಪ್ಪಲಿಯಿಂದ ಹೊಡೆದಿದ್ದಾಳೆ, ಮಹಿಳೆಯ ಚಪ್ಪಲಿಯ ಪೆಟ್ಟಿಗೆ ಕಾಮುನ ಬಾಯಲ್ಲಿದ್ದ ಎಲೆ ಅಡಿಕೆ  ಜೊತೆ ಒಂದೇರಡು ಹಲ್ಲು ಮುರಿದು ಹೊರ ಬಂದಿದೆ ಎನ್ನಲಾಗಿದೆ.

ಇನ್ನೂ ಮಹಿಳೆ ಕಾಮಕನಿಗೆ ಹೊಡೆಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗತ್ತಾ ಇದೆ. ಮಹಿಳೆಯ ದಿಟ್ಟತನಕ್ಕೆ ಬಸ್ ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಪ್ರಕಾರ,ಈ ವ್ಯಕ್ತಿ ಹಿಂದಿನಿಂದಲ್ಲೂ ಇದೇ ರೀತಿ ಅನೇಕ ಮಹಿಳೆಯರಿಗೆ ಹಾಗೂ ಯುವತಿಯರಿಗೆ ಕಿರುಕುಳ ನೀಡತ್ತಿರುವ ಮಾಹಿತಿ ಈ ಘಟನೆ ಬಳಿಕ ಕೇಳಿ ಬರುತ್ತಿದೆ.