ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಕಾರವಾರ ಮೆಡಿಕಲ್ ಕಾಲೇಜು ಹಾಗೂ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಅಧೀನ ಆಸ್ಪತ್ರೆ ಅಧೀಕ್ಷಕ ಶಿವಾನಂದ ಕುಡಲ್ತಕರ್ ಅವರನ್ನು ಆರೋಗ್ಯ ಮತ್ತು ವೈದ್ಯಕೀಯ ಕಾಲೇಜು ಶಿಕ್ಷಣ ಇಲಾಖೆ ಇಲಾಖೆಯ ಕಮಿಷನರ್ ಕೆ.ಬಿ. ಶಿವಕುಮಾರ್ ಅವರನ್ನು ಅಮಾನತ್ ಮಾಡಿ ಗುರುವಾರ ಆದೇಶ ಹೊರಡಿಸಿದ್ದಾರೆ.

ಕಾರವಾರ ಮೆಡಿಕಲ್ ಕಾಲೇಜು ಅಧೀನ ಸರ್ಕಾರಿ ಆಸ್ಪತ್ರೆಯ ಅಧೀಕ್ಷಕ‌ ಹಾಗೂ ಹೆರಿಗೆ ವೈದ್ಯ ಶಿವಾನಂದ ಕುಡ್ತಲಕರ್ ಜುಲೈ 10ರಂದು ಲೋಕಾಯುಕ್ತರ ಬಲೆಗೆ ಬಿದ್ದಿದ್ದರು.ಆಸ್ಪತ್ರೆಗೆ ಹಾಸಿಗೆ ಸರಬರಾಜು ಮಾಡಿದ ಗುತ್ತಿಗೆದಾರನಿಂದ 30ಸಾವಿರ ಲಂಚ ಪಡೆಯುವಾಗ ಆಸ್ಪತ್ರೆ ಕಚೇರಿಯಲ್ಲಿ ಸಿಕ್ಕಿ ಬಿದ್ದಿದ್ದರು. ಲೋಕಾಯುಕ್ತರ ಬಲೆಗೆ ಬಿದ್ದ ವೈದ್ಯ ಕಳೆದ ಒಂದು ವಾರದಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ವರದಿ ಹೆಲ್ತ್ ‌ಕಮಿಷನರ್ ಗೆ ತಲುಪಿದ ತಕ್ಷಣ ಡಾ.ಶಿವಾನಂದ ಕುಡ್ತಲಕರ್ ಅವರನ್ನು ಅಮಾನತ್ ಮಾಡಿ ಆದೇಶ ಹೊರಡಿಸಲಾಗಿದೆ. ಈ ಆದೇಶ ಇಂದು ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಹಾಗೂ ನಿರ್ದೇಶಕರನ್ನು ತಲುಪಿದೆ.

ಇದನ್ನೂ ಓದಿ:”ರೂಮ್ ಮಾಡ್ತೀನಿ ಬಾ..! ಚಪ್ಪಲಿಯಿಂದ ಕಾಮುಕನ ಕಾಮದ ಕಿಕ್ ಇಳಿಸಿದ ಮಹಿಳೆ