ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಆದೇಶದಂತೆ ,ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿನಾಯಕ ವಾಸುದೇವ ನಾಯ್ಕ ಅವರನ್ನು ತಕ್ಷಣ ಜಾರಿಗೆ ಬರುವಂತೆ ಸಹಾಯಕ ನಿರ್ದೇಶಕರನ್ನಾಗಿ (ನಗರಯೋಜನೆ–ದಕ್ಷಿಣ) ವಿಭಾಗದ ಬಿ.ಟಿ.ಎಂ. ಲೇಔಟ್ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ನಿಯೋಜನೆ ಮಾಡಿ ಆದೇಶಿಸಲಾಗಿದೆ.
ವಿನಾಯಕ ನಾಯ್ಕ ಅವರು ಈ ಮೊದಲು ಮಾರತ್ಹಳ್ಳಿ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರು ನಿಯೋಜನೆಗೊಂಡ ಸ್ಥಳದಲ್ಲಿದ್ದ ಅಲಗನಾಥನ್, ಸ.ಕಾ.ನಿ.ಅ ರವರನ್ನು ಮೂಲ ಸ್ಥಳವಾದ ಜಂಟಿ ನಿರ್ದೇಶಕರು (ನಗರಯೋಜನೆ-ಟಿ.ಡಿ.ಆರ್ ಕಛೇರಿ ಹಿಂದಿರುಗಿಸಲಾಗಿದೆ. ವಿನಾಯಕ ನಾಯ್ಕ ಅವರು ಈ ಹಿಂದೆ ಮಾರತ್ಹಳ್ಳಿ ಉಪ ವಿಭಾಗದಲ್ಲಿಯೂ ಸಹ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಮೂತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದಿಪುರ ಗ್ರಾಮದ ನಿವಾಸಿಗಿದ್ದಾರೆ. ಶ್ರೀಯುತರು ಕಳೆದ ಹದಿನೈದು ವರ್ಷಗಳಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಕಾರ್ಯನಿರ್ವಹಿಸುತ್ತಿದ್ದಾರೆ
ಇನ್ನೂ ವಿನಾಯಕ (ವಿನು) ಅವರು ಇಂದು (ನಗರಯೋಜನೆ–ದಕ್ಷಿಣ) ವಿಭಾಗದ ಸಹಾಯಕ ನಿರ್ದೇಶಕರನ್ನಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಅಲ್ಲಿನ ಸಿಬ್ಬಂದಿಗಳು ಆತ್ಮೀಯವಾಗಿ ಬರಮಾಡಿಕೊಂಡರು.ಈ ವೇಳೆಯಲ್ಲಿ ಹನುಮಂತಯ್ಯ ̧ಬಿ ಎಂ,ಅಜಿತ್ ಕಿರಣ್.ಎಚ್ , ಕಿಶನ್ ಜಿ, ವಾಸುದೇವ್ ಆರ್ ನಾಯ್ಕ ಸಾವಿತ್ರಿ ನಾಯ್ಕ, ಅಭಿನಂದಿಸಿದ್ದಾರೆ, ಅವರ ತಮ್ಮ ಅವಧಿಯಲ್ಲಿ ಇನ್ನೂ ಹೆಚ್ಚಿನ ಕೆಲಸವನ್ನ ಮಾಡುವಂತೆ ಹಾರೈಸಿದ್ದಾರೆ.