ಸುದ್ದಿಬಿಂದು ಬ್ಯೂರೋ ವರದಿ

ಕಾರವಾರ : ಕಳೆದ ಒಂದು ವರ್ಷದಿಂದ ಉತ್ತರಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಎಂ ನಾರಾಯಣ ಅವರನ್ನ ಸರಕಾರ ವರ್ಗಾವಣೆ ಮಾಡಿ ಆದೇಶಿಸಿದ್ದು,ಈ ಹಿನ್ನಲೆಯಲ್ಲಿ ನಾಳೆ ಬುಧವಾರ ಬೆಳಿಗ್ಗೆ ೧೧ ಗಂಟೆಗೆ ಪೊಲೀಸ್‌ ಇಲಾಖೆಯಿಂದ ಆತ್ಮೀಯ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಎಂ ನಾರಾಯಣ ಅವರು ಜಿಲ್ಲೆಗೆ ಬಂಧ ಬಳಿಕ ಪೊಲೀಸ್‌ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ.ಇನ್ನೂ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬರ ಸಿಬ್ಬಂದಿಗಳನ್ನು ಸಹ ಇವರು ಆತ್ಮೀಯವಾಗಿ ಕಾಣುತ್ತಿದ್ದರು. ಎಸ್‌ ಪಿ ಅವರ ವರ್ಗಾವಣೆ ಇಲಾಖೆಯ ಸಿಬ್ಬಂದಿಗಳಲ್ಲೂ ಸಹ ಬೇಸರ ತಂದಿದೆ. ಇವರು ಜಿಲ್ಲೆಯಲ್ಲಿ ಅಧಿಕಾರ ನಡೆಸಲಾರಂಭಿಸಿದ ದಿನದಿಂದ ಇಲ್ಲಿವರೆಗೆ ಬಹುತೇಕ ಎಲ್ಲಾ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರು.ಅದೆಷ್ಟೋ ಪುಡಿ ರೌಡಿಗಳು ಬಾಲ ಮುದುಡಿಕೊಂಡು ಬಿಲ ಸೇರಿಕೊಳ್ಳುವಂತಾಗಿತ್ತು. ಆದರೆ ಸರಕಾರದ ಆದೇಶದಂತೆ ಇದೀಗ ಎಂ ನಾರಾಯಣ ಅವರನ್ನ ವರ್ಗಾವಣೆ ಮಾಡಲಾಗಿದೆ, ಜಿಲ್ಲೆಯಿಂದ ಹೊರಡಲಿರುವ ನಾರಾಯಣ ಅವರಿಗೆ ನಾಳೆ ಆತ್ಮೀಯ ಬೀಳ್ಕೊಡುಗೆ ನಡೆಯಲಿದೆ.

ಇದನ್ನೂ ಓದಿ:”ಇದು ಆರೈಕೆಯೋ ಕ್ರೂರತೆಯೋ ? ಗೃಹ ಬಂಧನದಲ್ಲಿದ್ದ ಮಾನಸಿಕ ಅಸ್ವಸ್ಥನ ದುಸ್ಥಿತಿ” ಕಾಲಿಗೆ ಸರಪಳಿ ಕಟ್ಟಿ ಗೃಹ ಬಂಧನದಲ್ಲಿರಿಸಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ