ಸುದ್ದಿಬಿಂದು ಬ್ಯೂರೋ ವರದಿ
Karwar/ಕಾರವಾರ: ಗುರುಪೂರ್ಣಿಮೆ ಹಿನ್ನಲೆ ನಗರದ ತಬಲಾ ವಾದಕ ಪಂಡಿತ ಚಂದ್ರಕಾಂತ ಗಡ್ಕರ್ ಅವರ ವಿದ್ಯಾರ್ಥಿಗಳಿಂದ ಶನಿವಾರ(ಜು.12) ಶಾಸ್ತ್ರೀಯ ವಾದನಗಳ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸದಾಶಿವಗಡದ ಶ್ರೀ ಮಹಾಮಾಯಾ ಶಾಂತದುರ್ಗಾ ದೇವಸ್ಥಾನದಲ್ಲಿ
ಸಂಜೆ 4 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಸಂಗೀತ ವಿದ್ಯಾರ್ಥಿಗಳು ವಿವಿಧ ಶಾಸ್ತ್ರೀಯ ವಾದನಗಳನ್ನು ನುಡಿಸುವ ಮೂಲಕ ಸಂಗೀತ ಗುರುವಿಗೆ ನಮನಗಳನ್ನು ಸಲ್ಲಿಸಲಿದ್ದಾರೆ.

ಈ ಸಂದರ್ಭದಲ್ಲಿ ಸಂಗೀತಾಸಕ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಗೀತ ಕಾರ್ಯಕ್ರಮವನ್ನು ಆಸ್ವಾದಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಸೈಬರ್ ಬಾಂಬ್ ಬೆದರಿಕೆ : ಭಟ್ಕಳ ಪೊಲೀಸರಿಗೆ ಶಾಕ್ ನೀಡಿದ ಇ-ಮೇಲ್