ಸುದ್ದಿಬಿಂದು ಬ್ಯೂರೋ ವರದಿ
ಮಡಗಾಂವ್–ದಕ್ಷಿಣ ಗೋವಾ : ಅನಮೋಡ್ ಘಟ್ಟದ ರಾಷ್ಟ್ರೀಯ ಹೆದ್ದಾರಿ (NH-748) ವಿಭಾಗದಲ್ಲಿ ಸಂಭವಿಸಿರುವ ಭೂಕುಸಿತದ ಹಿನ್ನೆಲೆಯಲ್ಲಿ, 60 ದಿನಗಳ ಕಾಲ ಭಾರೀ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ದಕ್ಷಿಣ ಗೋವಾ ಜಿಲ್ಲಾಧಿಕಾರಿ ಎಗ್ನಾ ಕ್ಲೀಟಸ್ ಆದೇಶಿಸಿದ್ದಾರೆ. .

ಇಂದು ಕರ್ನಾಟಕ-ಗೋವಾ ಸಂಪರ್ಕದ ಅನಮೋಡ್ ಘಟ್ಟ ವಿಭಾಗದಲ್ಲಿ ಭೂಕುಸಿತ ಸಂಭವಿಸಿದ್ದು, ರಸ್ತೆಯ ಒಂದು ಭಾಗದ ಕುಸಿತದಿಂದ ಅಪಾಯದಲ್ಲಿದೆ. ಇದರಿಂದ ಸಾರ್ವಜನಿಕರ ಜೀವ ಹಾಗೂ ಆಸ್ತಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ, ತಾತ್ಕಾಲಿಕ ನಿರ್ಬಂಧ ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಭಾರೀ ವಾಹನಗಳ ಸಂಚಾರ ನಿರ್ಬಂಧ:
ಅನಮೋಡ್ ಘಟ್ಟದ NH-748 ವಿಭಾಗದಲ್ಲಿ (ಕರ್ನಾಟಕದಿಂದ ಪೊಂಡಾ-ಗೋವಾಕ್ಕೆ ಸಾಗುವ ಮಾರ್ಗದಲ್ಲಿ) ಭಾರೀ ವಾಣಿಜ್ಯ ವಾಹನಗಳ ಸಂಚಾರವನ್ನು 2025ರ ಸೆಪ್ಟೆಂಬರ್ 2ರವರೆಗೆ (60 ದಿನಗಳ ಕಾಲ) ನಿರ್ಬಂಧಿಸಲಾಗಿದ್ದು,ಅಗತ್ಯ ಸೇವಾ ವಾಹನಗಳು ಮತ್ತು ಸಾರ್ವಜನಿಕ ಸಾರಿಗೆ ಬಸ್ಸುಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಅನಮೋಡ್ ಬಳಿ ಸಂಭವಿಸಿದ ಭೂಕುಸಿತದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ರಸ್ತೆ ಮೂಲಸೌಕರ್ಯದ ರಕ್ಷಣೆಗಾಗಿ ಈ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ. ಸಂಬಂಧಿತ ಅಧಿಕಾರಿಗಳು ದುರಸ್ತಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಇದನ್ನೂ ಓದಿ: