ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಆರೋಗ್ಯ ಇಲಾಖೆಯ ವಿವಿಧ ಅಧೀನ ಸಂಸ್ಥೆಗಳ ಸಿಬ್ಬಂದಿಗೆ ಸಂಬಂಧಿಸಿದಂತೆ ಜೂನ್ 27 (ನಾಳೆ) ರಿಂದ ವರ್ಗಾವಣೆ ಪ್ರಕ್ರಿಯೆ ಕೌನ್ಸಿಲಿಂಗ್ ವಿಧಾನದಲ್ಲಿ ಆರಂಭವಾಗಲಿದೆ. ಅಂತಿಮ ವರ್ಗಾವಣೆ ಪಟ್ಟಿಯಲ್ಲಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೌನ್ಸಿಲಿಂಗ್ ದಿನಾಂಕವನ್ನು ಅವರ ಕ್ರಮ ಸಂಖ್ಯೆಯ ಆಧಾರದಲ್ಲಿ ಆರೋಗ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್ https://hfwcom.karnataka.gov.in ನಲ್ಲಿ ಪ್ರಕಟಿಸಲಾಗಿದ್ದು, ಭಾಗವಹಿಸಬೇಕಾದ ಸಿಬ್ಬಂದಿಗೆ ಈ ಮೂಲಕ ತಿಳಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ವ್ಯಾಪ್ತಿಗೆ ಒಳಪಟ್ಟ ಸಂಸ್ಥೆಗಳು ಹಾಗೂ ಜಿಲ್ಲಾ ಭೋಧಕ ಆಸ್ಪತ್ರೆ, ಕಾರವಾರದಲ್ಲಿನ ಅಧಿಕಾರಿಗಳು/ಸಿಬ್ಬಂದಿಗಳು ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಕಾರವಾರ ಗೆ ಹಾಜರಾಗಬೇಕಾಗಿದೆ.

ಕೌನ್ಸಿಲಿಂಗ್ ಪ್ರಕ್ರಿಯೆ ಬೆಳಿಗ್ಗೆ 9.00 ಗಂಟೆಗೆ ಆರಂಭವಾಗಲಿದ್ದು, ಭಾಗವಹಿಸುವ ಅಧಿಕಾರಿಗಳು/ಸಿಬ್ಬಂದಿಗಳು ತಮ್ಮ ಕೆ.ಜಿ.ಐ.ಡಿ ಸಂಖ್ಯೆಯಿರುವ ವೇತನ ಪ್ರಮಾಣ ಪತ್ರ,ಆಧಾರ್ ಕಾರ್ಡ್ ಪ್ರತಿಗೊಂಡು, ಹಾಗೂ ದೈನಂದಿನ ಸೇವಾ ಗುರುತಿನ ಚೀಟಿ ಜೊತೆಗೆ ಮುಂಚಿತವಾಗಿ ಹಾಜರಾಗಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : NDRF ತಂಡದಿಂದ ಕಣ್ಮರೆಯಾದ ಪವನ್‌ಗಾಗಿ ಶೋಧ